ಮಾದಿಗ ದಂಡೋರದಿಂದ ಲಲಿತ ವೃದ್ಧಾಶ್ರಮದಲ್ಲಿ ಮಂದಕೃಷ್ಣ ಮಾದಿಗರವರ ಹುಟ್ಟು ಹಬ್ಬ ಆಚರಣೆ
ಜಯ ಧ್ವಜ ನ್ಯೂಸ್ , ರಾಯಚೂರು , ಜು.7-ಮಾದಿಗ ದಂಡೋರ ರಾಜ್ಯಾಧ್ಯಕ್ಷರು ಬಿ. ನರಸಪ್ಪ ದಂಡೋರ ರವರ ಆದೇಶದ ಮೇರೆಗೆ ಇಂದು ನಗರದ ಲಲಿತಾ ಹಿರಿಯ ನಾಗರಿಕರ ವೃದ್ಧಾಶ್ರಮದಲ್ಲಿ 32ನೇ ಮಾದಿಗ ದಂಡೋರ ಎಂ ಆರ್ ಪಿ ಎಸ್ ಸಂಘಟನೆಯ ಸಂಸ್ಥಾಪನೆ ದಿನ ಹಾಗೂ ಪದ್ಮಶ್ರೀ ಮಂದಕೃಷ್ಣ ಮಾದಿಗ ರವರ ಹುಟ್ಟು ಹಬ್ಬ ಆಚರಣೆ ಲಲಿತ ವೃದ್ಧಾಶ್ರಮದಲ್ಲಿ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಂಜಿತ್ ದಂಡೋರ ಎಂ ಆರ್ ಪಿ ಎಸ್ ಜಿಲ್ಲಾ ಯುವ ಸೇನೆ ಅಧ್ಯಕ್ಷರು ಮಾತನಾಡಿ ಪದ್ಮಶ್ರೀ ಮಂದಕೃಷ್ಣ ಮಾದಿಗ ರವರ ನಾಯಕತ್ವದಲ್ಲಿ 1994 ರಲ್ಲಿ ಉದ್ಘಾಟನೆಯದ ಮಾದಿಗ ದಂಡೋರ ಎಂ ಆರ್ ಪಿ ಎಸ್ ಸಂಘಟನೆಯ ಹೋರಾಟದ ಹಾದಿ ಇಂದಿಗೆ 32ನೆಯ ವರ್ಷದ ವಾರ್ಷಿಕೋತ್ಸವ ಸಂಸ್ಥಾಪನೆ ದಿನ ಹಾಗೂ ಪದ್ಮಶ್ರೀ ಮಂದಕೃಷ್ಣ ಮಾದಿಗ ರವರು ಹುಟ್ಟುಹಬ್ಬ ಮತ್ತು ಅನೇಕ ಸಮಾಜ ತಮ್ಮದೇ ಆದ ಛಾಯೆಯನ್ನು ಮೂಡಿಸಿ. ಪರಿಶಿಷ್ಟ ಜಾತಿಯ ಸಮುದಾಯಗಳಿಗೆ ಒಳ ಮಿಸಲಾತಿಯನ್ನು ಕಲ್ಪಿಸಬೇಕೆಂದು ಒತ್ತಾಯಿಸಿ. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ 35 ವರ್ಷಗಳಿಂದ ನಿರಂತರ ಹೋರಾಟದ ಮೂಲಕ ವರ್ಗೀಕರಣವನ್ನು ಸಾಧಿಸಿದ್ದಾರೆ. ಸಾಮಾಜಿಕ ಸೇವೆಯನ್ನು ಗುರುತಿಸಿ 2025ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಎಂದು ಹುಟ್ಟು ಹಬ್ಬದ ನಿಮಿತ್ಯ ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸುರೇಶ್ ದುಗುನೂರು ರಾಜ್ಯ ಕಾರ್ಯದರ್ಶಿ. ದುಳ್ಳಯ್ಯ ಗುಂಜಹಳ್ಳಿ ತಾಲೂಕು ಅಧ್ಯಕ್ಷರು. ಜಕ್ರಪ್ಪ ಹಂಚಿನಾಳ ತಾಲೂಕು ಕಾರ್ಯಧ್ಯಕ್ಷರು. ಹನುಮಂತ ಜುಲುಮುಗೇರಾ ತಾಲೂಕು ಕಾರ್ಯದರ್ಶಿ. ಭೀಮೇಶ್ ತುಂಟಾಪುರ್ ತಾಲೂಕ ಮುಖಂಡರು. ನರಸಿಂಹ ಗದಾರ್ ಹಿರಿಯ ಮುಖಂಡರು. ಸುಮಿತ್ರಪ್ಪ ಕಮಲಾಪುರ್ ಹಿರಿಯ ಮುಖಂಡರು. ಶಂಕರ್ ಬಾಬು ಉಡಂಗಲ್ ಖಾನಪುರ್ ಹಿರಿಯ ಮುಖಂಡರು. ಅಂಬರೀಷ್ ತುಂಟಾ ಪೂರ್.ಧರ್ಮಣ್ಣ ತುಂಟಾಪುರ್. ಆಂಜನೇಯ ಗುಂಜಹಳ್ಳಿ.ಅನಿಲ್ ಕುಮಾರ್ ರಾಯಚೂರು. ಮುನಿರಾಜ್ ಮರ್ಚೆಟಾಳ್. ವಿಜಯಕುಮಾರ್ ದಿನ್ನಿ. ಯೇಸು ಗಿಲ್ಲೆಸೂಗೂರು ಉಪಸ್ಥಿತರಿದ್ದರು.



Comments
Post a Comment