ಮುಖ್ಯಮಂತ್ರಿಗಳ  ಸಚಿವಾಲಯದ ಮಾಧ್ಯಮ     ಕಾರ್ಯದರ್ಶಿಗಳಾಗಿ ಪಿ.ತ್ಯಾಗರಾಜ್ ನೇಮಕ.                                                                                                                            ಜಯ ಧ್ವಜ ನ್ಯೂಸ್, ರಾಯಚೂರು ,ಜು.8- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಸಚಿವಾಲಯದ ಮಾಧ್ಯಮ ಕಾರ್ಯದರ್ಶಿಗಳಾಗಿ ಪಿ.ತ್ಯಾಗರಾಜರವರನ್ನು ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ. ಪಿ.ತ್ಯಾಗರಾಜ್ ರವರು ನಾಡಿನ  ಖ್ಯಾತ ಪತ್ರಿಕೆಗಳಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದರು. ಪತ್ರಿಕೆಗಳಲ್ಲಿ ಅಂಕಣಗಳನ್ನು ಸಹ ಬರೆಯುತ್ತಿದ್ದರು. ಸದ್ಯ ಅವರನ್ನು ಮುಖ್ಯಮಂತ್ರಿಗಳ ಸಚಿವಾಲಯದ ಮಾಧ್ಯಮ ಕಾರ್ಯದರ್ಶಿಗಳಾಗಿ ನೇಮಕಗೊಳಿಸಲಾಗಿದೆ ಇವರೊಂದಿಗೆ ಆರ್. ಜಯಪ್ರಕಾಶ್ ಮತ್ತು ರಾಘವೇಂದ್ರ ಭಟ್ ರವರನ್ನು ಮಾಧ್ಯಮ ಕಾರ್ಯದರ್ಶಿಗಳಾಗಿ ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ.

Comments

Popular posts from this blog