ಅಭಿಮಾನಿಗಳ ಆಶೀರ್ವಾದ ಸಾಕೆಂದು ಪದ್ಮಭೂಷಣ ತಿರಸ್ಕಾರ ಮಾಡಿದ ಶ್ರೇಷ್ಠ ಗಾಯಕಿ ಎಸ್ ಜಾನಕಿ.

 ಜಯ ಧ್ವಜ ನ್ಯೂಸ್ ,ರಾಯಚೂರು ಜು.12-

 ವಿವಿಧ ಭಾಷೆಗಳಲ್ಲಿ ಸುಮಾರು 40,000ಕ್ಕೂ ಅಧಿಕ ಗೀತೆಗಳನ್ನು ಹಾಡಿ ಕನ್ನಡದಲ್ಲಿ 3000ಕ್ಕೂ ಅಧಿಕ ಗೀತೆಗಳಿಗೆ ಜೀವಕಳೆ ತಂದು ಎಲ್ಲರ ಹೃದಯದಲ್ಲಿರುವ ಗಾನಕೋಗಿಲೆ ಎಸ್ ಜಾನಕಿರವರು ನನಗೆ ಅಭಿಮಾನಿಗಳೇ ಸಾಕು, ಅವರ ಆಶೀರ್ವಾದ ಒಂದೇ ಸಾಕು ಎಂದು ಪದ್ಮಭೂಷಣ ಪ್ರಶಸ್ತಿಯನ್ನು ತಿರಸ್ಕಾರ ಮಾಡಿದ ಗಾಯಕಿ ಎಲ್ಲರಿಗೂ ಸ್ಪೂರ್ತಿದಾಯಕರಾಗಿದ್ದರು ಎಂದು ಕಲಾ ಸಂಕುಲ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಮಾರುತಿ ಬಡಿಗೇರ್ ಅಭಿಪ್ರಾಯಪಟ್ಟರು.

 ಅವರು ರವಿವಾರ ಸಂಜೆ ರಾಯಚೂರು ನಗರದ ಮನರಂಜನ ಕೇಂದ್ರದಲ್ಲಿ ಆಕಾಶ್ ಸಿಂಗಿಂಗ್ ಕರೋಕೆ ಸ್ಟುಡಿಯೋದವರು ಹಮ್ಮಿಕೊಂಡಿದ್ದ ಎಸ್ ಜಾನಕಿ ಅಮ್ಮನವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಆಂಧ್ರದಲ್ಲಿ ಜನಿಸಿದರೂ, ಕರ್ನಾಟಕದ ಮೈಸೂರಿನಲ್ಲಿ ಕೊನೆ ಉಸಿರೆಳೆದು ಮೈಸೂರಿನಲ್ಲಿ ಅಂತ್ಯಕ್ರಿಯೆ ಆಗಿರೋದು ಅವರು ಕನ್ನಡ ನಾಡಿನ ಮೇಲೆ ಇಟ್ಟ ಒಂದು ಗೌರವ ಕನ್ನಡಿಗರು ಅವರಿಗೆ ಕೊಟ್ಟಂತ ಗೌರವ ಅಭಿಮಾನ ಅವಿಸ್ಮರಣೆಯವೆಂದರು. 88 ವರ್ಷದವರೆಗೆ ಇದ್ದ ಜಾನಕಿ ಅಮ್ಮ ಅವರಿಗೆ ಸಂಗೀತವೇ ಒಂದು ರೋಗ ನಿರೋಧಕ ಶಕ್ತಿಯಾಗಿತ್ತು. ಪ್ರೇಮಗೀತೆಗಳು, ವಿರಹ ಗೀತೆಗಳು, ಭಕ್ತಿ ಗೀತೆಗಳು , ಜಾನಪದ ಗೀತೆಗಳು ಹಲವಾರು ಗೀತೆಗಳನ್ನು ಹಾಡಿ  ಜನಮನ ಗೆದ್ದರು. ರೇಡಿಯೋ ಮತ್ತು ಟೇಪ್ ರೆಕಾರ್ಡರ್ ಕಾಲದಲ್ಲಿ ಅವರ ಗೀತೆಗಳು ಅದ್ಭುತವಾಗಿ ಮೂಡಿಬಂಜವು ಎಂದು ಮಾರುತಿ ಬಡಿಗೇರ್ ಮಾತನಾಡಿದರು.

 ಇದೆ ವೇಳೆ  ರಾಯಚೂರಿನ ಮಾಜಿ ಶಾಸಕರಾದ ಸಯ್ಯದ್ ಯಾಸೀನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮೌನಾಚರಣೆಯನ್ನು ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ನರಸಪ್ಪ ಆಶಾಪುರ,  ಶ್ರೀದೇವಿ ವಸಂತ್ ರಾಜ್, ಡಾ. ಭಾಸ್ಕರ್, ಮೋಹನ್ ವಕೀಲರು,  ವಾಣಿಶ್ರೀ, ಪ್ರತಾಪ್ ರೆಡ್ಡಿ, ರಾಮುಲು ನಾಯಕ್, ಖಾಜಾ ಅಸ್ಲಾಂ, ಚಿರಂಜೀವಿ ಯಾದವ, ಸಂತೋಷಿ,  ಹೇಮಲತಾ, ಲಕ್ಷ್ಮಣ ಮತ್ತು ಆಕಾಶ್ ಸಿಂಗಿಂಗ್ ಸ್ಟುಡಿಯೋ ಅಧ್ಯಕ್ಷರು ಭಾಗವಹಿಸಿದ್ದರು 

 ಎಸ್ ಜಾನಕಿ ಅವರ ಚಿತ್ರಗೀತೆಗಳನ್ನು ಈ ಸಂದರ್ಭದಲ್ಲಿ ರಾಯಚೂರು ನಗರದ ಗಾಯಕ ಗಾಯಕಿಯರಿಂದ ಹಾಡಲಾಯಿತು.

Comments

Popular posts from this blog