ಜು. 26 ದುಬೈಯಲ್ಲಿ ವಿಶ್ವಕನ್ನಡ ಸಮ್ಮೇಳನ ಆಯೋಜನೆ: ಸಮ್ಮೇಳನಾಧ್ಯಕ್ಷರಾಗಿ  ಶ್ರೀದೇವಿ ನಾಯಕ.


ಜಯ ಧ್ವಜ ನ್ಯೂಸ್  , ರಾಯಚೂರು ಜು 21-

 ಕಲಾ ಸಂಕುಲ ಸಂಸ್ಥೆ ಹಾಗೂ  ದುಬೈ ಸಾಂಸ್ಕೃತಿಕ ಸಂಘಟನೆ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಜು. 26 ರಂದು ದುಬೈಯಲ್ಲಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ಸಿನ ಕಾರ್ಯದರ್ಶಿಗಳಾಗಿರುವ ಶ್ರೀದೇವಿ ಆರ್ ವಿ ನಾಯಕ ಇವರು  ಸಮ್ಮೇಳನಾಧ್ಯಕ್ಷರಾಗಿದ್ದಾರೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಮಾರುತಿ ಬಡಿಗೇರ್ ತಿಳಿಸಿದ್ದಾರೆ.

 ಈ ಸಮ್ಮೇಳನದಲ್ಲಿ ಕರ್ನಾಟಕದಿಂದ 40 ಜನ ಕಲಾವಿದರು ಹಿರಿಯ ಗಣ್ಯರು ಭಾಗವಹಿಸಲಿದ್ದಾರೆ. ದುಬೈ ಕನ್ನಡಿಗರಿಂದ ಮತ್ತು ಕರ್ನಾಟಕದ ಕಲಾವಿದರಿಂದ ಭರತನಾಟ್ಯ ನಾಟಕ ಹಾಗೂ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.

 ವಿಶ್ವ ಕನ್ನಡ ಸಮ್ಮೇಳನದ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ರಾಯಚೂರು ಜಿಲ್ಲೆಯ ಶ್ರೀದೇವಿ ಆರ್ ವಿ ನಾಯಕ ಆಯ್ಕೆ ಆಗಿರುವುದು ಸಂತಸದ ವಿಷಯ.

 ದುಬೈಯ್ಯ ಖ್ಯಾತ ಉದ್ಯಮಿ ಶೇಕ್ ಡಾ. ಬು.ಅಬ್ದುಲ್ಲ ಈ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಅಬುದಾಬಿ ಕನ್ನಡ ಸಂಘದ ಅಧ್ಯಕ್ಷರಾದ ಸರ್ವೋತ್ತಮಶೆಟ್ಟಿ. ರಾಯಚೂರಿನ ಉದ್ಯಮಿ ಈ ಆಂಜನೇಯ. ಮಲ್ಲಿಕಾರ್ಜುನಯ್ಯ ಹಿರೇಮಠ ಕರಡಕಲ್ ಹಾಗೂ ದುಬೈ ಕನ್ನಡ ಸಾಂಸ್ಕೃತಿಕ  ಸಂಘಟನಾ ಸಂಸ್ಥೆ ಅಧ್ಯಕ್ಷರಾದ ಶೋಧನಾ ಪ್ರಸಾದ್ ಅತ್ತಾವರ್ ಇವರು ಮುಖ್ಯ ಅತಿಥಿಗಳಾಗಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆಎಂದು ಕಲಾ ಸಂಕುಲ ಸಂಸ್ಥೆ ಕಾರ್ಯದರ್ಶಿಗಳಾದ ಮಾರುತಿ ಬಡಿಗೇರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

Popular posts from this blog