ಶ್ರೀಅಭಯ ಹಸ್ತ ಮಾರುತಿ ದೇವಸ್ಥಾನದಲ್ಲಿ ತಾಯಿಯ ಹೆಸರಲ್ಲಿ ಒಂದು ವೃಕ್ಷ ಕಾರ್ಯಕ್ರಮ:                     ಹೆಚ್ಚು ಗಿಡಗಳನ್ನು ನೆಡುವುದರ ಮೂಲಕ ಇತರೆ ಬಡಾವಣೆ ಜನರಿಗೆ ಮಾದರಿಯಾಗಿ- ರಾಜೇಶ ನಾಯಕ

ಜಯ ಧ್ವಜ ನ್ಯೂಸ್ ,ರಾಯಚೂರು ಜು. 20 - ರಾಯಚೂರು ನಗರದ ಚಂದ್ರಬoಡಾ ರಸ್ತೆಯಲ್ಲಿ ಬರುವ ಮಾರುತಿ ಟೌನ್‌ಶಿಪ್ ಬಡಾವಣೆಯ ಶ್ರೀಅಭಯ ಹಸ್ತ ಮಾರುತಿ ದೇವಸ್ಥಾನದ ಆವರದಲ್ಲಿ ತಾಯಿಯ ಹೆಸರಲ್ಲಿ ಒಂದು ವೃಕ್ಷ ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆಯಿಂದ ಇಂದು ನಡೆಯಿತು.

ಶ್ರೀ ಅಭಯ ಹಸ್ತ ಮಾರುತಿ ದೇವಸ್ಥಾನ ಟ್ರಸ್ಟ್ ಮತ್ತು ಅರಣ್ಯ ಇಲಾಖೆಯ ಸಂಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನದ ಆವರಣದಲ್ಲಿ ಬಡಾವಣೆಯ ಜನರಿಂದ ವಿವಿಧ ತಳಿಗಳ ಸಸ್ಯೆಗಳನ್ನು ನೆಡಲಾಯಿತು.

ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿ ರಾಜೇಶ ನಾಯಕ ಅವರು ಮಾತನಾಡಿ, ಮುಂಗಾರು ಆರಂಭವಾಗಿ ಒಂದುವರೆ ತಿಂಗಳಾದರು ಸಹಮಳೆ ಬಾರದೇ ಇರುವುದರಿಂದ ಯಾವುದೇ ಗಿಡಗಳನ್ನು ಹಚ್ಚಿಲ್ಲ. ಈಗ ಮಳೆಬಂದಿರುವುದರಿಂದ ಪ್ರಥಮವಾಗಿ ತಮ್ಮ ಬಡಾವಣೆಯಿಂದ್ದಲೇ ಗಿಡಗಳನ್ನು ನೆಡಲಾಗಿದೆ. ಈ ಕಾರ್ಯಕ್ರಮದಲ್ಲಿ ಬಡಾವಣೆಯ ಜನರು ಉತ್ಸಾಹದಿಂದ ಭಾಗವಹಿಸಿರುವುದು ಸಂತೋಷದಾಯಕವಾಗಿದೆ. ತಾಯಿಯ ಹೆಸರಲ್ಲಿ ಒಂದು ವೃಕ್ಷ ಕಾರ್ಯಕ್ರಮವು ಇನ್ನೊಂದು ಬಡಾವಣೆಯ ಜನರಿಗೆ ಮಾದರಿಯಾಗುವಂತೆ ಗಿಡಗಳನ್ನು ಸಂಕ್ಷಣೆ ಮಾಡಿ, ಘೋಷಿಸಬೇಕು ಎಂದು ಕರೆ ನೀಡಿದರು.


ಟ್ರಸ್ಟ್ನ ಉಪಾಧಕ್ಷರಾದ ವೆಂಕಟೇಶ ಮಾತನಾಡಿ, ಪ್ರತಿಯೊಬ್ಬರು ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಗಿಡಗಳನ್ನು ನೆಡುವುದರ ಮೂಲಕ ಮುಂದಿನ ಪೀಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಶ್ರೀ ಅಭಯ ಹಸ್ತ ಮಾರುತಿ ದೇವಸ್ಥಾನ ಟ್ರಸ್ಟ್ ವತಿಯಿಂದ ಅರಣ್ಯ ಅಧಿಕಾರಿಗಳಾದ ರಾಜೇಶ ನಾಯಕ, ಯಲ್ಲಪ್ಪ, ಮೌನೇಶ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಅಭಯ ಹಸ್ತ ಮಾರುತಿ ದೇವಸ್ಥಾನ ಟ್ರಸ್ಟ್ ಗೌರವಾಧ್ಯಕ್ಷ ಕಟ್ಟಾನರಸಯ್ಯ, ಅಧ್ಯಕ್ಷ ಬೂದೆಪ್ಪ, ಉಪಾದ್ಯಕ್ಷ ವೆಂಕಟೇಶ, ಕಾರ್ಯದರ್ಶಿ ದೇವೇಂದ್ರಪ್ಪ, ಸಂಘಟನಾ ಕಾರ್ಯದರ್ಶಿ ಚನ್ನಬಸವಗೌಡ, ಸದಸ್ಯರಾದ ರಾಜಪ್ಪ, ಮಾರೆಪ್ಪ ಕಡಗಂದೊಡ್ಡಿ, ಬಡಾವಣೆಯ ಗಿರೀಶ್, ಅನಂತ ಕುಮಾರ ರೆಡ್ಡಿ ಬಡಾವಣೆಯ ಮಹಿಳೆಯರು ಸೇರಿದಂತೆ ಇತರರು ಇದ್ದರು.

Comments

Popular posts from this blog