ಮುರಳೀಧರ ಕುಲಕರ್ಣಿ ನಿವಾಸದಲ್ಲಿ ಮನೆ ಮನೆಯಲ್ಲಿ ರಾಯರು ಕಾರ್ಯಕ್ರಮ: ಗುಡೆಬಲ್ಲೂರು ಶೇಷಾಚಾರ್ಯರಿಗೆ ಸನ್ಮಾನ , ಶೇಷಗಿರಿ ದಾಸರಿಂದ ದೇವರನಾಮ
ಜಯ ಧ್ವಜ ನ್ಯೂಸ್, ರಾಯಚೂರು,ಜು.4- ನಗರದ ವಿದ್ಯಾ ನಗರದಲ್ಲಿರುವ ಮುಖ್ಯೋಪಾಧ್ಯಾಯ ಮುರಳೀಧರ ಕುಲಕರ್ಣಿಯವರ ಮನೆಯಲ್ಲಿ ಗುರುವಾರ ಸಂಜೆ ಮನೆ ಮನೆಯಲ್ಲಿ ರಾಯರು ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ಜರುಗಿತು. ತಾರತಮ್ಯುಕ್ತ ಭಜನೆ, ಸ್ವಸ್ತಿ ವಾಚನ, ಸಂಗೀತ ಕಾರ್ಯಕ್ರಮ, ಜೊತೆಗೆ ನರ್ತನ ಇವೆಲ್ಲವೂ ಭಕ್ತಿಯ ಪರಾಕಷ್ಟೆಯನ್ನು ಮುಟ್ಟಿದಂತ ಘಳಿಗೆಗಳಾಗಿದ್ದವು.
ಈ ಸಂದರ್ಭದಲ್ಲಿ ದಾಸ ಸಾಹಿತ್ಯದಲ್ಲಿ ಸೇವೆ ಮಾಡಿದ 91 ವರ್ಷದ ಜ್ಞಾನವೃದ್ಧರಾದ ಗುಡೇಬಲ್ಲೂರ್ ಶೇಷಾಚಾರ್ಯರು, ಡಾ. ಜಯ ಲಕ್ಷ್ಮಿ ಮಂಗಳಮೂರ್ತಿ, ಖ್ಯಾತ ಗಾಯಕ ಡಾಕ್ಟರ್ ರಾಯಚೂರು ಶೇಷಗಿರಿ ದಾಸ್, ರಮಾ ಕಾಂತ್ ನಾಗಡದಿನ್ನಿ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಭೀಮಸೇನ ಆಚಾರ್ಯ ಗುಡೆಬಲ್ಲೂರು, ಗುರುರಾಜ ನಾಗಡದಿನ್ನಿ, ರಾಘವೇಂದ್ರರಾವ್ , ಕೆಇಬಿ ಭೀಮಸೇನ್ ರಾವ್, ಪ್ರಸನ್ನ ಆಲಂಪಲ್ಲಿ, ಸುರೇಶ್ ಕಲ್ಲೂರ್, ರಮಾಕಾಂತ್ ಕುಲಕರ್ಣಿ ಗುಂಜಳ್ಳಿ, ಜಯಕುಮಾರ್ ದೇಸಾಯಿ ಕಾಡ್ಲೂರು,ಗುರುರಾಜ ಕೆಎಸ್ಸಾರ್ಟಿಸಿ ಕೊಪ್ರೇಶ್ ದೇಸಾಯಿ, ರವೀಂದ್ರ ಕುಲಕರ್ಣಿ ಹಾಗೂ ಹಲವಾರು ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಕೊನೆಯಲ್ಲಿ ಗಾಯಕ ಶೇಷಗಿರಿ ದಾಸ್ ಅವರು ನಿನ್ನ ಒಲಮೆಯಿಂದ ಹಾಡಿದ ಹಾಡು ಎಲ್ಲರನ್ನೂ ಸಂಮೋಹನ ಗೊಳಿಸಿತು. ಮುರಳೀಧರ್ ಕುಲಕರ್ಣಿ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜನೆ ಮಾಡಿರುವುದಕ್ಕೆ ಅತಿಥಿಗಳು ಶ್ಲಾಘನೆ ವ್ಯಕ್ತಪಡಿಸಿದರು.




Comments
Post a Comment