ಹೆಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮ ರವರಿಗೆ ಜೆಡಿಎಸ್ ಪಕ್ಷದಿಂದ ಭಾವಪೂರ್ಣ ಶ್ರದ್ಧಾಂಜಲಿ ಜಯ ಧ್ವಜ ನ್ಯೂಸ್, ರಾಯಚೂರು,ಜು.21- ಜಾತ್ಯತೀತ ಜನತಾದಳದ ಪಕ್ಷದ ವತಿಯಿಂದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ ನಿಮಿತ್ತ ನಗರದಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶ್ರದ್ದಾಂಜಲಿ ಸಲ್ಲಿಸಿದರು.
ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎಂ ವಿರುಪಕ್ಷಿ ಮಾತನಾಡಿ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಾ, “ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಅವರ ಮನೆಗೆ ಹೋದಾಗೆಲ್ಲಾ, ತಾಯಿ ಚೆನ್ನಮ್ಮ ಅವರು ನಮ್ಮ ಬಗ್ಗೆ ಪ್ರೀತಿಯಿಂದ ವಿಚಾರಿಸುತ್ತಿದ್ದರು. ನಮಗೆ ಊಟ ಬಡಿಸಿ, ನಮ್ಮ ಕ್ಷೇಮ ಸಮಾಚಾರಗಳನ್ನು ಕೇಳಿ ಕಳುಹಿಸುತ್ತಿದ್ದರು” ಎಂದು ಭಾವುಕರಾಗಿ ನುಡಿದರು.
ಜೆಡಿಎಸ್ ಜಿಲ್ಲಾಕಾರ್ಯಾಧ್ಯಕ್ಷ ಎನ್ ಶಿವಶಂಕರ ವಕೀಲರು ಮಾತನಾಡಿ, “ದೇಶದ ಹೆಮ್ಮೆಯ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಧರ್ಮಪತ್ನಿ ಹಾಗೂ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರ ಮಾತೃಶ್ರೀಯವರಾದ ಶ್ರೀಮತಿ ಚೆನ್ನಮ್ಮ ಅವರ ನಿಧನದಿಂದ ಇಡೀ ರಾಜ್ಯದ ಜೆಡಿಎಸ್ ಕಾರ್ಯಕರ್ತರು ದುಃಖದ ಸಾಗರದಲ್ಲಿ ಮುಳುಗಿದ್ದಾರೆ. ದೇವೇಗೌಡರು ಇಷ್ಟೊಂದು ದೊಡ್ಡ ಸಾಧನೆ ಮಾಡಲು ಶ್ರೀಮತಿ ಚೆನ್ನಮ್ಮ ಅವರೇ ಪ್ರೇರಣಾ ಶಕ್ತಿಯಾಗಿದ್ದರು ಮತ್ತು ಅವರ ಬೆನ್ನೆಲುಬಾಗಿ ನಿಂತಿದ್ದರು. ಪ್ರತಿ ಸಲ ನಾವು ಹೋದಾಗಲೂ ನಮ್ಮ ಊಟ ಉಪಚಾರಗಳನ್ನು ಕೇಳುತ್ತಿದ್ದ ಶ್ರೀಮತಿ ಚೆನ್ನಮ್ಮ ಅವರು ಸಾಕ್ಷಾತ್ ಅನ್ನಪೂರ್ಣೇಶ್ವರಿಯಾಗಿದ್ದರು ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ದೇವೇಗೌಡರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಜೆಡಿಎಸ್ ಕಾರ್ಯಕರ್ತರ ಪರವಾಗಿ ಶ್ರದ್ದಾಂಜಲಿ ಅರ್ಪಿಸುತ್ತೇವೆ” ಎಂದರು.
ಗ್ರಾಮೀಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಸಣ್ಣ ನರಸಿಂಹನಾಯಕ ಮಾತನಾಡಿ, "ತಾಯಿ ಚೆನ್ನಮ್ಮ ಅವರು ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ದೊಡ್ಡ ಪ್ರೇರಣಾ ಶಕ್ತಿಯಾಗಿದ್ದರು. ಅವರ ಆಶೀರ್ವಾದ ಮುಂದೆಯೂ ನಮ್ಮ ಪಕ್ಷದ ಮೇಲಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಲಕ್ಷೀಪತಿ ಗಾಣದಾಳ ಹಿಂದುಳಿದ ಅಧ್ಯಕ್ಷ ಜಂಬುನಾಥ ಯಾದವ, ಆದಿರಾಜ್,ಅಮ್ಜದ್ ಮಾತನಾಡಿದರು . ಶ್ರದ್ಧಾಂಜಲಿ ಸಭೆಯಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಗ್ರಾಮಾಂತರ ಕಾರ್ಯಾಧ್ಯಕ್ಷ ಅಮರೇಶ್ ಆಶಾಪುರ್ ಗ್ರಾಮಾಂತರ ಅಧ್ಯಕ್ಷ ನಾಗರಾಜಗೌಡ, ಜಿಲ್ಲಾ ಪರಿಶಿಷ್ಟ ಅಧ್ಯಕ್ಷ ನರಸಪ್ಪ ಆಶಾಪೂರ , ನಾಗರಾಜನಾಯಕ, ದುಳ್ಯಯನಾಯಕ, ವಿಜಯಕುಮಾರ, ಎಸ್ ರಾಜು, ಬಿಕೆ ಬಾಬು, ಈರಣ್ಣಯಾದವ,ಆದಿರಾಜ, ರವಿಕುಮಾರ, , ಸಂತೋಷ್, ನರಸಿಂಹಲು, ಆಲಂಬಾಬು, ರವಿ ಮಡಿವಾಳ, ಅವಿಲ್ ನರಸಿಂಹಲು ಕಟ್ಟಿಮನಿ, ಅಮಿತ್ ಮುಂತಾದವರು ಉಪಸ್ಥಿತದ್ದರು.

Comments
Post a Comment