ಕರ್ನಾಟಕಕ್ಕೆ ಅಮೃತ ಭಾರತ ಎಕ್ಸ್ ಪ್ರೆಸ್ ಟ್ರೈನ್ ಅಗತ್ಯತೆ ಇದೆ- ಡಾ. ಬಾಬುರಾವ್ 

ಜಯ ಧ್ವಜ ನ್ಯೂಸ್ ,ರಾಯಚೂರು,ಜು.21-ಕರ್ನಾಟಕ ರಾಜ್ಯಕ್ಕೆ ಅಮೃತ ಭಾರತ ಎಕ್ಸ ಪ್ರೆಸ್ ಟ್ರೈನ್ ಅಗತ್ಯತೆ ಇದ್ದು ರೈಲ್ವೆ ಸಚಿವ ಅಶ್ವಿನ್ ವೈಷ್ಣವಿ ಹಾಗೂ ರಾಜ್ಯ ಖಾತೆ ರೈಲ್ವೆ ಸಚಿವ ವಿ. ಸೋಮಣ್ಣ ಅವರುಗಳು ಈ ಬೇಡಿಕೆಯನ್ನು ಪರಿಗಣಿಸಬೇಕೆಂದು ಕರ್ನಾಟಕದ ಜನತೆಯ ಪರವಾಗಿ  ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ಮನವಿ ಮಾಡಿದ್ದಾರೆ.

ರಾಜ್ಯದ ದಕ್ಷಿಣ ತುದಿ  ಚಾಮರಾಜನಗರದಿಂದ ಉತ್ತರದ ತುತ್ತತುದಿ ಬೀದರ್ ವರೆಗೆ ಈ ಅಮೃತ ಭಾರತ ಎಕ್ಸ್ ಪ್ರೆಸ್ ಟ್ರೈನ್ ಸಂಚರಿಸುವಂತೆ ಮಾರ್ಗಸೂಚಿ ಅನುಸರಿಸಬೇಕು. ಹೀಗಾದಲ್ಲಿ ಚಾಮರಾಜನಗರ, ಮೈಸೂರು, ಮಂಡ್ಯ,ಬೆಂಗಳೂರು, ಯಲಹಂಕ, ಹಿಂದೂಪುರ, ಧರ್ಮಾವರಂ, ಗುಂತಕಲ್, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ ಗಳಿಗೆ ಒಂದೇ ಟ್ರೈನ್ ನಿಂದ ಸಂಪರ್ಕ ದೊರೆತಂತಾಗುತ್ತದೆ.

ಈ ರೈಲು ಸೌಲಭ್ಯದಿಂದ ವಿದ್ಯಾರ್ಥಿಗಳಿಗೆ, ಕುಟುಂಬಗಳಿಗೆ, ಪ್ರವಾಸಿಗರಿಗೆ ಉದ್ಯೋಗಿಗಳಿಗೆ ನೇರ ಪ್ರಯಾಣದ ಅವಕಾಶ ದೊರೆತಂತಾಗುತ್ತದೆ. ಶಿಕ್ಷಣ, ಉದ್ಯೋಗ, ವ್ಯಾಪಾರ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆತಂತಾಗುತ್ತದೆ. ಇದಲ್ಲದೆ ಈ ರೈಲು ಸಂಚಾರದಿಂದ ದಕ್ಷಿಣ ಮೈಸೂರು ಭಾಗ ಹಾಗೂ ಕಲ್ಯಾಣ ಕರ್ನಾಟಕದ ಭಾಗಗಳೆರಡಕ್ಕೂ ಅನುಕೂಲವಾದಂತಾಗುತ್ತದೆ. ಹಲವು ರೈಲುಗಳನ್ನು ಬದಲಾಯಿಸಿ ಪ್ರಯಾಣಿಸುವ ಪ್ರಯಾಸಕ್ಕೂ ಬ್ರೇಕ್ ಬೀಳಲಿದೆ. ಆದ್ದರಿಂದ ರೈಲ್ವೆ ಸಚಿವರು ಈ ಬೇಡಿಕೆಯನ್ನು ಪರಿಗಣಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Comments

Popular posts from this blog