ನಗರದಲ್ಲಿ ಮೂಲಸೌಕರ್ಯಕ್ಕೆ ಮಹಾನಗರ ಪಾಲಿಕೆ ಆದ್ಯತೆ ನೀಡಲಿ- ಅಮರೇಗೌಡ ಪಾಟೀಲ. ಜಯ ಧ್ವಜ ನ್ಯೂಸ್, ರಾಯಚೂರು,ಜು.21- ನಗರದಲ್ಲಿ ನಿವಾಸಿಗಳಿಗೆ ಮೂಲಸೌಕರ್ಯ ನೀಡಲು ಮಹಾನಗರ ಪಾಲಿಕೆ ಆದ್ಯತೆ ನೀಡಬೇಕೆಂದು ಜಿಲ್ಲಾ ನಾಗರೀಕರ ಸಮಿತಿ ಅಧ್ಯಕ್ಷ ಅಮರೇಗೌಡ ಪಾಟೀಲ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಗರದಲ್ಲಿ ನಾಗರೀಕರ ಸೌಲಭ್ಯ ದೊರಕಿಸಿಕೊಡಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದರು.
ಸ್ವಚ್ಚ, ಸುಂದರ , ಸುರಕ್ಷಿತ ನಗರಕ್ಕಾಗಿ ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿದರು. ಸುಗಮ ರಸ್ತೆ , ವೈಜ್ಞಾನಿಕ ಸ್ಪೀಡ್ ಬ್ರೇಕರ್, ಬೀದಿದೀಪ ಸಮರ್ಪಕ ನಿರ್ವಹಣೆ,ಸುರಕ್ಷಿತ ಪಾದಚಾರಿ ಯೋಗ್ಯ ಫುಟ್ ಪಾತ್, ಶುದ್ಧ ಕುಡಿಯುವ ನೀರು, ಮಳೆನೀರು ನಿರ್ವಹಣೆ, ಕಸ ವಿಲೇವಾರಿ ಲೋಪ ದೋಷ ಸರಿಪಡಿಸಿ ಸೂಕ್ತ ರೀತಿಯಲ್ಲಿ ಕಸ ಸಂಗ್ರಹ ಹಾಗೂ ಪರಿಸರ ಸ್ನೇಹಿ ವಿಲೇವಾರಿ, ಹೊಸ ಮನೆ ನಿರ್ಮಾಣ ವೇಳೆ ಸೋಲಾರ್ ಪ್ಯಾನಲ್ ಅಳವಡಿಕೆ, ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆಗೆ ಒತ್ತು ಹಾಗೂ ಕಡ್ಡಾಯ ನಿಯಮ ಪಾಲನೆ, ಉದ್ಯಾನವನಗಳು ಅಭಿವೃದ್ಧಿ ಹಾಗೂ ಪುನಶ್ಚೇತನ,ಸೈನ್ ಬೋರ್ಡ್ ,ಅಂಗಡಿ , ವ್ಯಾಪಾರ ಕೇಂದ್ರಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು, ಸಾರ್ವಜನಿಕ ಶೌಚಾಲಯ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗೆ ಸ್ಪಂದಿಸಬೇಕೆಂದು ಒತ್ತಾಯಿಸಿದ ಅವರು ನಾಗರೀಕರು ಸಹ ತಮ್ಮ ಕರ್ತವ್ಯಗಳನ್ನು ಪಾಲಿಸಬೇಕು ನಾಗರೀಕ ಪ್ರಜ್ಞೆ ಬೆಳೆಸಿಕೊಂಡು ನಿಯಮಗಳನ್ನು ಪಾಲಿಸಬೇಕೆಂದರು. ವಾರ್ಡ್ ವಾರು ಸಮಿತಿ ರಚನೆ ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಸಂತೋಷ ಕುಮಾರ್ ಮಿರ್ಜಾಪೂರು,ವೀರೇಶ, ರಮೇಶ್ ಬಾಬು, ವೆಂಕಟರೆಡ್ಡಿ, ಪ್ರಸನ್ನ ಆಲಂಪಲ್ಲಿ, ಗುರುರಾಜ ಕುಲಕರ್ಣಿ ,ಶ್ರೀ ನಿವಾಸ, ರಮೇಶ್ ರಾವ್, ಜಗದೀಶ್, ವೀರಭದ್ರಯ್ಯ ಇನ್ನಿತರರು ಇದ್ದರು.


Comments
Post a Comment