Posts

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದಂಗವಾಗಿ: ಸೆ.೧೭ ರಿಂದ ಅ.೨ ರವರೆಗೆ ಬಿಜೆಪಿಯಿಂದ ಸೇವಾ ಪಾಕ್ಷಿಕ- ರಮಾನಂದ

Image
ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದಂಗವಾಗಿ:                    ಸೆ.೧೭ ರಿಂದ ಅ.೨ ರವರೆಗೆ ಬಿಜೆಪಿಯಿಂದ ಸೇವಾ ಪಾಕ್ಷಿಕ- ರಮಾನಂದ ರಾಯಚೂರು,ಸೆ.೧೫- ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದಂಗವಾಗಿ ಸೆ.೧೭ ರಿಂದ ಅ.೨ ರವರೆಗೆ ಜಿಲ್ಲಾ ಬಿಜೆಪಿಯಿಂದ ಸೇವಾ ಪಾಕ್ಷಿಕ ಆಯೋಜಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಮಾನಂದ ಯಾದವ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಪ್ರಧಾನಿಗಳಾದ ನಂತರ ಅನೇಕ ಬದಲಾವಣೆ ದೇಶದಲ್ಲಿ ಕಂಡಿದ್ದೇವೆ ಅವರ ಹುಟ್ಟು ಹಬ್ಬವನ್ನು ವಿಶಿಷ್ಟ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಸೆ.೧೭ ರಿಂದ ಅ.೨ರವರಗೆ ವಿವಿಧ ಸೇವಾ ಚಟುವಟುಕೆ ಮತ್ತು ಸಮಾಜಮುಖಿ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದರು. ವೈದ್ಯಕೀಯ ಪ್ರಕೋಷ್ಟದಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಡಾ.ಆನಂದ ಫಡ್ನೀಸ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು ಆರೋಗ್ಯ ತಪಾಸಣೆ ಜೊತೆಗೆ ಕರೋನಾ ಬೂಸ್ಟರ್ ಡೋಸ್ ಅಭಿಯಾನವನ್ನು ನಡೆಸಲಾಗುತ್ತದೆ ಎಂದ ಅವರು ಸೆ.೨೦ ರಂದು ಮೋದಿಯವರ ಜೀವನ ಚರಿತ್ರೆ ಪ್ರದರ್ಶನ ಜಿಲ್ಲೆಯಾದ್ಯಂತ ನಡೆಯಲಿದೆ ಎಂದರು. ಸೆ.೨೨ ರಂದು ರಕ್ತದಾನ ಶಿಬಿರವನ್ನು ಬಿಜೆಪಿ ಯುವ ಮೋರ್ಚಾದಿಂದ ನಡೆಯುತ್ತಿದೆ ಎಂದ ಅವರು ರಕ್ತದಾನಿಗಳು ಆನ್ ಲೈನ್ ಮುಖಾಂತರ ನೋಂದಣೀ ಮಾಡಿಕೊಳ್ಳಬಹುದೆಂದರು. ಬಿಜೆಪಿ ಓಬಿಸಿ ಘಟಕದಿಂದ ಅರಳಿ ಮರ ನೆಡುವ ...

ಲಯನ್ಸ್ ಕ್ಲಬ್ ವತಿಯಿಂದ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರ

Image
                     ಲಯನ್ಸ್ ಕ್ಲಬ್ ವತಿಯಿಂದ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರ ದೇವದುರ್ಗ, ಸೆ.12 : ಲಯನ್ಸ್ ಕ್ಲಬ್ ರಾಯಚೂರು ವತಿಯಿಂದ ಇತ್ತೀಚಿಗೆ ದೇವದುರ್ಗ ಪಟ್ಟಣದ ಸರ್ಕಾರಿ ತಾಲೂಕ ಆಸ್ಪತ್ರೆಯಲ್ಲಿ ಎರಡು ದಿನಗಳ ಬೃಹತ್ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ಬೆಂಗಳೂರಿನ ಜನಹಿತ ಸಂಸ್ಥೆಯ ನುರಿತ ತಜ್ಞ ವೈದ್ಯರು ಸುಮಾರು 182 ಬಡ ರೋಗಿಗಳಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದರು.  ಅಂಧತ್ವ ನಿವಾರಣೆ ಲಯನ್ಸ್ ಕ್ಲಬ್ ಆಧ್ಯತಾ ಯೋಜನೆಗಳೊಂದಾಗಿದ್ದು, ಪ್ರತಿ ವರ್ಷ ಓಪೆಕ್ ಆಸ್ಪತ್ರೆ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಈ ರೀತಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಈ ಬಾರಿಯೂ ಕೂಡ ನಿರೀಕ್ಷೆಯಂತೆ ಬಹುಸಂಖ್ಯಾ ಮಟ್ಟದಲ್ಲಿ ರೋಗಿಗಳು ಶಿಬಿರದ ಲಾಭ‌ ಪಡೆದಿರುವುದು ಖುಷಿಯ ವಿಚಾರ ಎಂದು ಲಯನ್ಸ್ ಕ್ಲಬ್ ರಾಯಚೂರಿನ ಅದ್ಯಕ್ಷರಾದ ಲಯನ್ ಮಲ್ಲಿಕಾರ್ಜುನ ಬಾಳಿ‌ ತಿಳಿಸಿದ್ದಾರೆ.‌ ಲಯನ್ ವೀರೇಂದ್ರ ಕುಮಾರ್ ಜೈನ್ ಅವರು ಈ ಬಾರಿಯ ಶಿಬಿರದ ಪ್ರಯೋಜಕತ್ವ ವಹಿಸಿದ್ದು, ರೋಗಿಗಳು ಹಾಗೂ ಅವರ ಸಹಾಯಕರಿಗೆ ಊಟದ ಜೊತೆಗೆ ವಸತಿಯ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಮತ್ತು ಉಚಿತವಾಗಿ ಕನ್ನಡಕಗಳನ್ನು ಕೂಡ ಹಂಚಲಾಗಿದೆ. ಶಿಬಿರದ ಕಾರ್ಯಕ್ರಮ ಸಂಯೋಜನೆ ಹಾಗೂ ಮೇಲ್ವಿಚ...

ಭಾರತ ಜೋಡೋ ಯಾತ್ರೆ ಅಂಗವಾಗಿ ಅ.22 ಮತ್ತು 23 ಜಿಲ್ಲೆಗೆ ರಾಹುಲ್ ಗಾಂಧಿ ಆಗಮನ: ಬಿಜೆಪಿಗೆ ಮೂರು ವರ್ಷದ ಬಳಿಕ ಜನರ ಬಗ್ಗೆ ಕಾಳಜಿ ಬಂದಿದೆ- ಡಿಕೆಶಿ.

Image
  ಭಾರತ ಜೋಡೋ ಯಾತ್ರೆ ಅಂಗವಾಗಿ ಅ.22 ಮತ್ತು 23 ಜಿಲ್ಲೆಗೆ ರಾಹುಲ್ ಗಾಂಧಿ  ಆಗಮನ :  ಬಿಜೆಪಿಗೆ ಮೂರು ವರ್ಷದ ಬಳಿಕ  ಜನರ ಬಗ್ಗೆ ಕಾಳಜಿ ಬಂದಿದೆ- ಡಿಕೆಶಿ .                         ರಾಯಚೂರು,ಸೆ.12- ಭಾರತ ಜೋಡೊ ಯಾತ್ರೆ ಅಂಗವಾಗಿ  ಅ.22 ಮತ್ತು 23 ರಂದು ಜಿಲ್ಲೆಗೆ ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ ಆಗಮಿಸುತ್ತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.                    ಅವರಿಂದು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾರತ ಜೋಡೋ ಯಾತ್ರೆ ಪೂರ್ವಭಾವಿ ಸಭೆಗೂ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ರಾಹುಲ್ ಗಾಂಧಿಯವರು ಬಿಜೆಪಿಯ ದುರಾಡಳಿತ ಹಾಗೂ ಭಾರತವನ್ನು ಒಡೆಯುತ್ತಿರುವ ಬಿಜೆಪಿ ವಿರುಧ್ಧ ಸುಮಾರು 5 ತಿಂಗಳುಗಳ ಕಾಲ 3500 ಕಿ.ಮಿ ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದವರೆಗೆ ಪಾದಯಾತ್ರೆ ಸಾಗಲಿದ್ದು ರಾಜ್ಯದಲ್ಲಿ ಸುಮಾರು 510 ಕಿ.ಮಿ ಕ್ರಮಿಸಲಿದ್ದು ಜಿಲ್ಲೆಯ ನಗರ ಕ್ಷೇತ್ರ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಎರೆಡು ದಿನಗಳ ಕಾಲ ಸುಮಾರು 50 ಕಿ.ಮಿ ಪಾದಯಾತ್ರೆ ಮಾಡಲಿದ್ದು ಜನ ಸಾಮಾನ್ಯರು, ರೈತರು, ಬೀದಿ ಬದಿ ವ್ಯಾಪಾರಸ್ಥರು, ಶ್ರಮಿಕರೊಂದಿಗೆ ಸಂವಾದ ನಡೆಸಲಿದ್ದಾರೆಂದರು. ಕಲಬುರ್ಗಿ, ಬೀದರ್, ಕೊಪ್ಪಳ, ಯ...

ಭಾರತ ಜೋಡೋ ಯಾತ್ರೆ ಅಂಗವಾಗಿ ಸೆ.22 ಮತ್ತು 23 ಜಿಲ್ಲೆಗೆ ರಾಹುಲ್ ಗಾಂಧಿ ಆಗಮನ: ಬಿಜೆಪಿಗೆ ಮೂರು ವರ್ಷದ ಬಳಿಕ ಜನರ ಬಗ್ಗೆ ಕಾಳಜಿ ಬಂದಿದೆ- ಡಿಕೆಶಿ.

Image
ಭಾರತ ಜೋಡೋ ಯಾತ್ರೆ ಅಂಗವಾಗಿ ಅ.22 ಮತ್ತು 23 ಜಿಲ್ಲೆಗೆ ರಾಹುಲ್ ಗಾಂಧಿ  ಆಗಮನ : ಬಿಜೆಪಿಗೆ ಮೂರು ವರ್ಷದ ಬಳಿಕ  ಜನರ ಬಗ್ಗೆ ಕಾಳಜಿ ಬಂದಿದೆ- ಡಿಕೆಶಿ .   ರಾಯಚೂರು,ಸೆ.12- ಭಾರತ ಜೋಡೊ ಯಾತ್ರೆ ಅಂಗವಾಗಿ  ಅ.22 ಮತ್ತು 23 ರಂದು ಜಿಲ್ಲೆಗೆ ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ ಆಗಮಿಸುತ್ತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.                    ಅವರಿಂದು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾರತ ಜೋಡೋ ಯಾತ್ರೆ ಪೂರ್ವಭಾವಿ ಸಭೆಗೂ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ರಾಹುಲ್ ಗಾಂಧಿಯವರು ಬಿಜೆಪಿಯ ದುರಾಡಳಿತ ಹಾಗೂ ಭಾರತವನ್ನು ಒಡೆಯುತ್ತಿರುವ ಬಿಜೆಪಿ ವಿರುಧ್ಧ ಸುಮಾರು 5 ತಿಂಗಳುಗಳ ಕಾಲ 3500 ಕಿ.ಮಿ ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದವರೆಗೆ ಪಾದಯಾತ್ರೆ ಸಾಗಲಿದ್ದು ರಾಜ್ಯದಲ್ಲಿ ಸುಮಾರು 510 ಕಿ.ಮಿ ಕ್ರಮಿಸಲಿದ್ದು ಜಿಲ್ಲೆಯ ನಗರ ಕ್ಷೇತ್ರ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಎರೆಡು ದಿನಗಳ ಕಾಲ ಸುಮಾರು 50 ಕಿ.ಮಿ ಪಾದಯಾತ್ರೆ ಮಾಡಲಿದ್ದು ಜನ ಸಾಮಾನ್ಯರು, ರೈತರು, ಬೀದಿ ಬದಿ ವ್ಯಾಪಾರಸ್ಥರು, ಶ್ರಮಿಕರೊಂದಿಗೆ ಸಂವಾದ ನಡೆಸಲಿದ್ದಾರೆಂದರು. ಕಲಬುರ್ಗಿ, ಬೀದರ್, ಕೊಪ್ಪಳ, ಯಾದಗಿರಿ ಮುಂತಾದ ಜಿಲ್ಲೆಗಳ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಲಿದ್ದಾರೆಂದರು. ಬ...

ಸಿರವಾರ: ಪತ್ರಿಕಾ ದಿನಾಚರಣೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Image
ಸಿರವಾರ: ಪತ್ರಿಕಾ ದಿನಾಚರಣೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ                        ರಾಯಚೂರು, ಸೆ.11- ಸಿರವಾರ ತಾಲ್ಲೂಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಉದ್ಘಾಟಿಸಿದರು.         ಹಿರಿಯ ಪತ್ರಕರ್ತ ಸುರೇಂದ್ರಾಚಾರ್ಯ ಕೊರ್ತಕುಂದಾ ಉಪನ್ಯಾಸ ನೀಡಿದರು.                    ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್. ಗುರುನಾಥ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.                            ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಂಪಯ್ಯ ನಾಯಕ, ತಹಸೀಲ್ದಾರ ಹುಲಿನಾಯಕ, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಪಾಷಾ ಹಟ್ಟಿ, ಜಿಲ್ಲಾ ಉಪಾಧ್ಯಕ್ಷ ಪಿ.ಪರಮೇಶ, ಜಿಲ್ಲಾ ಕಾರ್ಯದರ್ಶಿ ಸೂಗೂರೇಶ್ವರ ಗುಡಿ, ತಾಲ್ಲೂಕ ಅಧ್ಯಕ್ಷ ಎಂ.ಗುಂಡಪ್ಪ, ಪ್ರಧಾನ ಕಾರ್ಯದರ್ಶಿ ವಿರೇಶ ಹರಕಂಚಿ, ಕಾಂಗ್ರೆಸ್ ಮುಖಂಡ ಚುಕ್ಕಿ ಸೂಗಪ್ಪ ಸಾಹುಕಾರ, ದೇವರಾಜಗೌಡ, ಶಿವಶರಣ ಪಾಟೀಲ್ ಲಕ್ಕಂದಿನ್ನಿ,...

ಕೃಷ್ಣಗಿರಿ ಲೇಔಟ್ ಪ್ರಕರಣ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಲ್ಲಿ ದಾವೆ- ಟಿ.ಮಾರೆಪ್ಪ.

Image
  ಕೃಷ್ಣಗಿರಿ ಲೇಔಟ್ ಪ್ರಕರಣ ರಾಷ್ಟ್ರೀಯ  ಹಸಿರು ನ್ಯಾಯಾಧೀಕರಣದಲ್ಲಿ   ದಾವೆ- ಟಿ.ಮಾರೆಪ್ಪ.                           ರಾಯಚೂರು,ಸೆ.11-ನಗರದ ಹೊರವಲಯದ ಕೃಷ್ಣಗಿರಿ ಲೇಔಟ್ ಪ್ರಕರಣವನ್ನು ರಾಷ್ಟ್ರೀಯ  ಹಸಿರು ನ್ಯಾಯಾಧೀಕರಣ  ಚೆನೈನಲ್ಲಿ ದಾವೆ ಹೂಡುತ್ತೇನೆಂದು ದಿ.ಜಿ.ರಘುನಾಥ ಅಭಿಮಾನಿಗಳ ಬಳಗದ ಟಿ.ಮಾರೆಪ್ಪ ಹೇಳಿದರು.                                             ಅವರಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ 2008-2011ರವರೆಗೆ ಆರ್ ಡಿ ಎ ಅಧ್ಯಕ್ಷರಾಗಿದ್ದ ಜಗನ್ನಾಥ ಕುಲಕರ್ಣಿ ಅವಧಿಯಲ್ಲಿ ಅಕ್ರಮವಾಗಿ ಹಸಿರು ವಲಯದಲ್ಲಿದ್ದ ಜಮೀನಿನಲ್ಲಿ ವಾಸಯೋಗ್ಯವೆಂದು ಅನುಮೋದನೆ ನೀಡಿ ನಿಯಮಬಾಹಿರವಾಗಿ ಬಡಾವಣೆಗೆ ಅಸ್ತು ಎನ್ನಲಾಗಿದೆ ಎಂದು ಆರೋಪಿಸಿರುವ ಅವರು  ಅಕ್ರಮವಾಗಿ ಸಿಎ ನಿವೇಶನಗಳನ್ನು ಪಕ್ಷಪಾತವಾಗಿ ಅನರ್ಹರಿಗೆ ಹಂಚಿಕೆ ಮಾಡಲಾಗಿದೆ ಎಂದು ದೂರಿದರು. ಜವಾಹರ ನಗರ ಬಡಾವಣೆ, ಸತ್ಯನಾಥ ಕಾಲೋನಿ, ಕೃಷ್ಣಗಿರಿ ಬಡಾವಣೆ ಮುಂತಾದವುಗಳ ಬಗ್ಗೆ ಸಾಮಾಜಿಕ ಹೋರಾಟಗಾರರಾದ ದಿ.ಜಿ.ರಘುನಾಥ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ಹೋರಾಟ ಮುಂದುವರೆಸುತ್ತೇವೆ ಹಾಗು...

ಕೃಷ್ಣಗಿರಿ ಲೇಔಟ್ ಪ್ರಕರಣ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಲ್ಲಿ ದಾವೆ- ಟಿ.ಮಾರೆಪ್ಪ.

Image
ಕೃಷ್ಣಗಿರಿ ಲೇಔಟ್ ಪ್ರಕರಣ ರಾಷ್ಟ್ರೀಯ  ಹಸಿರು ನ್ಯಾಯಾಧೀಕರಣದಲ್ಲಿ   ದಾವೆ- ಟಿ.ಮಾರೆಪ್ಪ.                          ರಾಯಚೂರು,ಸೆ.11-ನಗರದ ಹೊರವಲಯದ ಕೃಷ್ಣಗಿರಿ ಲೇಔಟ್ ಪ್ರಕರಣವನ್ನು ರಾಷ್ಟ್ರೀಯ  ಹಸಿರು ನ್ಯಾಯಾಧೀಕರಣ  ಚೆನೈನಲ್ಲಿ ದಾವೆ ಹೂಡುತ್ತೇನೆಂದು ದಿ.ಜಿ.ರಘುನಾಥ ಅಭಿಮಾನಿಗಳ ಬಳಗದ ಟಿ.ಮಾರೆಪ್ಪ ಹೇಳಿದರು.                                             ಅವರಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ 2008-2011ರವರೆಗೆ ಆರ್ ಡಿ ಎ ಅಧ್ಯಕ್ಷರಾಗಿದ್ದ ಜಗನ್ನಾಥ ಕುಲಕರ್ಣಿ ಅವಧಿಯಲ್ಲಿ ಅಕ್ರಮವಾಗಿ ಹಸಿರು ವಲಯದಲ್ಲಿದ್ದ ಜಮೀನಿನಲ್ಲಿ ವಾಸಯೋಗ್ಯವೆಂದು ಅನುಮೋದನೆ ನೀಡಿ ನಿಯಮಬಾಹಿರವಾಗಿ ಬಡಾವಣೆಗೆ ಅಸ್ತು ಎನ್ನಲಾಗಿದೆ ಎಂದು ಆರೋಪಿಸಿರುವ ಅವರು  ಅಕ್ರಮವಾಗಿ ಸಿಎ ನಿವೇಶನಗಳನ್ನು ಪಕ್ಷಪಾತವಾಗಿ ಅನರ್ಹರಿಗೆ ಹಂಚಿಕೆ ಮಾಡಲಾಗಿದೆ ಎಂದು ದೂರಿದರು. ಜವಾಹರ ನಗರ ಬಡಾವಣೆ, ಸತ್ಯನಾಥ ಕಾಲೋನಿ, ಕೃಷ್ಣಗಿರಿ ಬಡಾವಣೆ ಮುಂತಾದವುಗಳ ಬಗ್ಗೆ ಸಾಮಾಜಿಕ ಹೋರಾಟಗಾರರಾದ ದಿ.ಜಿ.ರಘುನಾಥ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ಹೋರಾಟ ಮುಂದುವರೆಸುತ್ತೇವೆ ಹಾಗು ಸರ್ಕಾರ ಅಕ್ರ...