ಕೃಷ್ಣಗಿರಿ ಲೇಔಟ್ ಪ್ರಕರಣ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಲ್ಲಿ ದಾವೆ- ಟಿ.ಮಾರೆಪ್ಪ.


ಕೃಷ್ಣಗಿರಿ ಲೇಔಟ್ ಪ್ರಕರಣ ರಾಷ್ಟ್ರೀಯ  ಹಸಿರು ನ್ಯಾಯಾಧೀಕರಣದಲ್ಲಿ   ದಾವೆ- ಟಿ.ಮಾರೆಪ್ಪ.       
                 ರಾಯಚೂರು,ಸೆ.11-ನಗರದ ಹೊರವಲಯದ ಕೃಷ್ಣಗಿರಿ ಲೇಔಟ್ ಪ್ರಕರಣವನ್ನು ರಾಷ್ಟ್ರೀಯ  ಹಸಿರು ನ್ಯಾಯಾಧೀಕರಣ  ಚೆನೈನಲ್ಲಿ ದಾವೆ ಹೂಡುತ್ತೇನೆಂದು ದಿ.ಜಿ.ರಘುನಾಥ ಅಭಿಮಾನಿಗಳ ಬಳಗದ ಟಿ.ಮಾರೆಪ್ಪ ಹೇಳಿದರು.                                             ಅವರಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ 2008-2011ರವರೆಗೆ ಆರ್ ಡಿ ಎ ಅಧ್ಯಕ್ಷರಾಗಿದ್ದ ಜಗನ್ನಾಥ ಕುಲಕರ್ಣಿ ಅವಧಿಯಲ್ಲಿ ಅಕ್ರಮವಾಗಿ ಹಸಿರು ವಲಯದಲ್ಲಿದ್ದ ಜಮೀನಿನಲ್ಲಿ ವಾಸಯೋಗ್ಯವೆಂದು ಅನುಮೋದನೆ ನೀಡಿ ನಿಯಮಬಾಹಿರವಾಗಿ ಬಡಾವಣೆಗೆ ಅಸ್ತು ಎನ್ನಲಾಗಿದೆ ಎಂದು ಆರೋಪಿಸಿರುವ ಅವರು  ಅಕ್ರಮವಾಗಿ ಸಿಎ ನಿವೇಶನಗಳನ್ನು ಪಕ್ಷಪಾತವಾಗಿ ಅನರ್ಹರಿಗೆ ಹಂಚಿಕೆ ಮಾಡಲಾಗಿದೆ ಎಂದು ದೂರಿದರು. ಜವಾಹರ ನಗರ ಬಡಾವಣೆ, ಸತ್ಯನಾಥ ಕಾಲೋನಿ, ಕೃಷ್ಣಗಿರಿ ಬಡಾವಣೆ ಮುಂತಾದವುಗಳ ಬಗ್ಗೆ ಸಾಮಾಜಿಕ ಹೋರಾಟಗಾರರಾದ ದಿ.ಜಿ.ರಘುನಾಥ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ಹೋರಾಟ ಮುಂದುವರೆಸುತ್ತೇವೆ ಹಾಗು ಸರ್ಕಾರ ಅಕ್ರಮ ಲೇಔಟಗಳ ತೆರವಿಗೆ ಮುಂದಾಗಬೇಕೆಂದು ಆಗ್ರಹಿಸಿದರು.                                              ಈ ಸಂದರ್ಭದಲ್ಲಿ ಕೆ.ತಿಮ್ಮರಾಜ, ನರಸಿಂಹಪ್ಪ ಇದ್ದರು.

Comments

Popular posts from this blog