ರಾಯಚೂರಿನಲ್ಲಿ ‘ವಿಕಸಿತ ಭಾರತ’ ಅಭಿಯಾನ ಯುವಕ ಯುವತಿಯರು ಭಾಗವಹಿಸಲು ಸ್ವಾತಿ ಗುಗುಲೋತ್ ಕರೆ ಜಯ ಧ್ವಜ ನ್ಯೂಸ್ ,ರಾಯಚೂರು ಸೆ. 11- ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ವ್ಯಾಪ್ತಿಯ ಮೇರಾ ಯುವ ಭಾರತ (ಮೈ ಭಾರತ) ರಾಯಚೂರು ಕಚೇರಿ ವತಿಯಿಂದ ‘ವಿಕಸಿತ ಭಾರತ್ ಯಂಗ್ ಲೀಡರ್ಸ್ ಡೈಲಾಗ್ 2027’ ಹಾಗೂ ‘ವಿಕಸಿತ ಭಾರತ್ ರಸಪ್ರಶ್ನೆ’ ಜಿಲ್ಲಾಮಟ್ಟದ ಜಾಗೃತಿ ಮತ್ತು ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೇರಾ ಯುವ ಭಾರತ ಕೇಂದ್ರ ರಾಯಚೂರಿನ ಜಿಲ್ಲಾ ಯುವ ಅಧಿಕಾರಿ ಸ್ವಾತಿ ಗುಗುಲೋತ್ ಹೇಳಿದರು. ಅವರಿಂದು ಮೇರಾ ಯುವ ಭಾರತ ಕೇಂದ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಯುವಕರಲ್ಲಿ ನಾಯಕತ್ವ ಗುಣ, ಸೃಜನಶೀಲತೆ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಹಾಗೂ ನಾಗರಿಕ ಜವಾಬ್ದಾರಿಯನ್ನು ಬೆಳೆಸುವ ಉದ್ದೇಶದಿಂದ ಈ ರಾಷ್ಟ್ರೀಯ ಉಪಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಭಿಯಾನದ ಮಾಹಿತಿ ಜಿಲ್ಲೆಯ ನಗರ ಪ್ರದೇಶಗಳ ಜೊತೆಗೆ ಗ್ರಾಮೀಣ ಭಾಗಗಳಲ್ಲಿಯೂ ತಲುಪಿಸುವ ಗುರಿ ಹೊಂದಲಾಗಿದೆ. ಸ್ಥಳೀಯ ಶಿಕ್ಷಣ ಸಂಸ್ಥೆಗಳು, ಯುವ ಸಂಘಟನೆಗಳು, ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ಘಟಕಗಳ ಸಹಕಾರದೊಂದಿಗೆ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿ, ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೇಪಿಸಲಾಗುತ್ತಿದೆ. ‘ವಿಕಸಿತ ಭಾರತ ರಸಪ್ರಶ್ನೆ’ಯು ಭಾರತದ ಸಾಧನೆಗಳು, ಸಾಂಸ್ಕೃತಿಕ ಪರಂಪರೆ, ಸಂವಿಧಾನಿಕ ಮೌಲ್ಯಗಳು ಹಾಗೂ ಅಭಿವೃದ್ಧಿ ಕುರಿತ...