Posts

Image
  ನ.23 ರಿಂದ 29 ವರೆಗೆ ಡಾ.ವೀಣಾ ಬನ್ನಂಜೆಯವರ ಉಪನ್ಯಾಸ ಮಾಲಿಕೆ : ನ.30 ರಂದು ಬನ್ನಂಜೆ ಗೋವಿಂದಾಚಾರ್ಯರ ಜೀವನಾಧಾರಿತ ಚಿತ್ರ ಪ್ರದರ್ಶನ    ಜಯ ಧ್ವಜ ನ್ಯೂಸ್  , ರಾಯಚೂರು, ನ. 21-  ನಗರದ ಶ್ರೀ ಜೋಡುವೀರಾಂಜನೇಯ ದೇವಸ್ಥಾನದಲ್ಲಿ ನ. 23 ರಿಂದ 29 ರವರೆಗೆ ಏಳು ದಿನಗಳ ಕಾಲ ನಾಡಿನ  ಖ್ಯಾತ ವಾಗ್ಮಿಗಳೂ ತತ್ತ್ವಚಿಂತಕರಾದ ಡಾ.ವೀಣಾ ಬನ್ನಂಜೆ ಯವರ ಭಾಗವತ ಉಪನ್ಯಾಸ ಮಾಲಿಕೆಯನ್ನು  ಆಯೋಜಿಸಲಾಗಿದೆ. ನ.23ರಂದು ಸಂಜೆ 6.30ಉಪನ್ಯಾಸ ಮಾಲಿಕೆಯ ಉದ್ಘಾಟನೆ ನಡೆಯಲಿದ್ದು  ಖ್ಯಾತ ಗಾಯಕರಾದ ಶ್ರೀಮತಿ ಕವಿತಾ ಉಡುಪ ಹಾಗೂ ಶ್ರೀಮತಿ ಸುಮಾ ಎಲ್ ಎನ್ ಶಾಸ್ತ್ರಿ ಅವರಿಂದ ಬನ್ನಂಜೆ ಹಾಡುಗಬ್ಬದ ಗಾಯನ ಕಾರ್ಯಕ್ರಮವು ನಡೆಯಲಿದೆ .                                ನ. 30 ರಂದು  ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ, ಬೆಂಗಳೂರು ಇವರು ನಿರ್ಮಿಸಿದ  ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಜೀವನಾಧಾರಿತ  'ಇಂದು ಎನಗೆ ಗೋವಿಂದ'  ಚಲನಚಿತ್ರದ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಪ್ರತಿದಿನ ಸಂಜೆ 6ಕ್ಕೆ ಉಪನ್ಯಾಸ ನಡೆಯಲಿದೆ.  ಭಾಗವತ ಕಥಾಮೃತ ಪಾನ, ಬನ್ನಂಜೆ ಹಾಡುಗಬ್ಬಗಳ ಶ್ರವಣ ಮತ್ತು   ಭಾವಭರಿತ ಚಲನಚಿತ್ರ ವೀಕ್ಷಣೆಗೆ ಸರ್ವರೂ ಸಾಕ್ಷಿಯ...
Image
ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಮುಂದಾದ ವಾಲ್ಮೀಕಿ ಗುರುಪೀಠ:       ನ. 28ರಂದು ಬಂಡೋಳಿ ಗ್ರಾಮದಲ್ಲಿ  ಭೂಮಿಪೂಜೆ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸ್ವಾಮಿಗಳು ಕರೆ ಜಯ ಧ್ವಜ ನ್ಯೂಸ್ , ರಾಯಚೂರು, ನ.20-  ಸಮಾಜದ ಸಮಗ್ರ ಅಭಿವೃದ್ಧಿಗೆ ಶಿಕ್ಷಣವೇ ಮೂಲ ಶಕ್ತಿಯಾಗಿದೆ. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಪ್ರಗತಿ, ಜಾಗೃತಿ ಮತ್ತು ಸ್ವಾವಲಂಬನೆ ಸಾಧ್ಯ. ಆದ್ದರಿಂದ ಸಮಾಜದ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು ಎಂದು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿಯ ಪೀಠಾಧ್ಯಕ್ಷರಾದ ಜಗದ್ಗುರು ಡಾ. ಶ್ರೀ ವಾಲ್ಮೀಕಿ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು ಹೇಳಿದರು.                  ರಾಯಚೂರು ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು. ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಉದ್ದೇಶದಿಂದ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ವತಿಯಿಂದ ಮಹತ್ವದ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ಸುರಪುರ ತಾಲೂಕಿನ ಬಂಡೋಳಿ ಗ್ರಾಮದಲ್ಲಿ ಗುರುಪೀಠದ ವತಿಯಿಂದ ನೂತನವಾಗಿ 17 ಎಕರೆ ಭೂಮಿಯನ್ನು ಖರೀದಿಸಲಾಗಿದ್ದು, ಈ ಜಾಗದಲ್ಲಿ ಈ ಭಾಗದ ವಾಲ್ಮೀಕಿ ನಾಯಕ ಸಮಾಜದ ಮಕ್ಕಳ ಶ...
Image
  ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಬದ್ಧ: ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ- ಸಚಿವ ಎಸ್. ಮಧು ಬಂಗಾರಪ್ಪ ಜಯ ಧ್ವಜ ನ್ಯೂಸ್  ,ರಾಯಚೂರು, ನ 20- ರಾಜ್ಯದ ಸರ್ಕಾರಿ ಶಾಲೆಗಳ ಬಲವರ್ಧನೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಬದ್ಧವಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಮಧು ಬಂಗಾರಪ್ಪ ಅವರು ಹೇಳಿದರು.  ಅವರಿಂದು ನಗರದ ಕೃಷಿ ವಿಶ್ವವಿದ್ಯಾಲಯದ ಬಸವೇಶ್ವರ ಸಭಾಂಗಣದಲ್ಲಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ 2026-27ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಗುಣಾತ್ಮಕ ಫಲಿತಾಂಶ ಸುಧಾರಣೆಗಾಗಿ ‌ಮಿಷನ್ 40+ ಸಂಕಲ್ಪ 2.0 ಕಾರ್ಯಕ್ರಮದ ವಿಭಾಗದ ಮಟ್ಟದ ಸಂಪನ್ಮೂಲ ಶಿಕ್ಷಕರ ಕಾರ್ಯಾಗಾರಕ್ಕೆ ಚಾಲನೆ ‌ನೀಡಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಶಿಕ್ಷಣ ಇಲಾಖೆಯಲ್ಲಿ ಕೈಗೊಳ್ಳಲಾಗುತ್ತಿರುವ ಪ್ರಮುಖ ಸುಧಾರಣೆಗಳು, ನೇಮಕಾತಿಗಳು ಹಾಗೂ ವಿವಿಧ ಯೋಜನೆಗಳ ಅನುಷ್ಠಾನ ಮಾಡಲಾಗುತ್ತಿದೆ. ರಾಜ್ಯದಲ್ಲಿ ಆಂಗ್ಲ ಮಾಧ್ಯಮವನ್ನು ಕಡ್ಡಾಯಗೊಳಿಸುವುದಿಲ್ಲ. ಬದಲಾಗಿ, ಮುಂದಿನ ಜೂನ್‌ನಿಂದ ಇಡೀ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜೊತೆಗೆ ಆಂಗ್ಲ ಮಾಧ್ಯಮವನ್ನೂ (ದ್ವಿಭಾಷಾ ಮಾಧ್ಯಮ) ಜಾರಿಗೆ ತರಲಾಗುವುದು....
Image
  ದಾಸ ಸಾಹಿತ್ಯದ ವಿಜಯ ದುಂದುಭಿ ಶ್ರೀವಿಜಯ ದಾಸರು -  ಮುರಳಿಧರ ಕುಲಕರ್ಣಿ   ಜಯ ಧ್ವಜ ನ್ಯೂಸ್  ,ರಾಯಚೂರು, ನ.19- ದಾಸ ಸಾಹಿತ್ಯದ ಎರಡನೇ ಘಟ್ಟ ಪ್ರಾರಂಭವಾಗುವುದೇ ಹರಿದಾಸ ಶ್ರೇಷ್ಠರಾದ ಶ್ರೀ ವಿಜಯದಾಸರಿಂದ.ಶ್ರೀ ವಿಜಯದಾಸರು ಪುರಂದರದಾಸರ ಹಚ್ಚಿದ ದಾಸ ಸಾಹಿತ್ಯದ ದೀಪಕ್ಕೆ ಎಣ್ಣೆಯನ್ನು ಸುರಿದು ದಾಸ ಸಾಹಿತ್ಯವನ್ನು ಮುಂದುವರಿಸಿಕೊಂಡು ಬಂದು  60 ಕ್ಕೂ ಹೆಚ್ಚು ಹರಿದಾಸರಿಗೆ ದೀಕ್ಷೆಯನ್ನು ನೀಡಿದ ಹರಿದಾಸ ಶ್ರೇಷ್ಠ ರಾಗಿದ್ದಾರೆ, ಅವರ ಸಮಗ್ರ ಸಾಹಿತ್ಯವನ್ನು ದಾಸ ಸಾಹಿತ್ಯದ ವಿಜಯ ದುಂದುಭಿ ಎಂದು ಕರೆದಿದ್ದಾರೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಹೇಳಿದರು.  ಅವರು ಬುದುವಾರ ಸಂಜೆ ಜವಾಹರ ನಗರ ಶ್ರೀ ಬಯಲು ಆಂಜನೇಯ ದೇವಸ್ಥಾನದಲ್ಲಿ ಜರುಗಿದ 271ನೇ ಶ್ರೀ ವಿಜಯದಾಸರ ಪೂರ್ವಾರಾಧನೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.     ಕ್ರಿಸ್ತಶಕ 1682ರಿಂದ 1755 ರವರೆಗೆ ಶ್ರೀ ವಿಜಯದಾಸರ ಪ್ರಖರತೆ ಎಷ್ಟಿತ್ತೆಂದರೆ ಅದನ್ನು ವಿಜಯದಾಸ ಯುಗ ಎಂದು ವಿದ್ವಾಂಸರಿಂದ ಗೌರವಿಸಲ್ಪಟ್ಟಿದೆ. ಅವರು 25,000ಕ್ಕೂ ಅಧಿಕ ಸಂಕೀರ್ತನೆಗಳನ್ನು  ಸಾವಿರಾರು ಸುಳಾಧಿಗಳನ್ನು ಅನೇಕ ಉಗಾಭೋಗ ಗಳನ್ನು ರಚಿಸಿದ ಇವರು ಸುಳಾದಿ ದಾಸರೆಂದು ಹೆಸರುವಾಸಿಯಾಗಿದ್ದಾರೆ ಎಂದು ಹೇಳಿದರು.  ಕಾರ್ಯಕ್ರಮದಲ್ಲಿ  ನಿವೃತ್ತ ಪ್ರಾಚಾರ್ಯರಾದ ವೆಂಕಟರಾವ್ ಕುಲಕರ್ಣಿ...
Image
  ವಾಲ್ಮೀಕಿ ವಿವಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಅಂಗವಾಗಿ ಎರಡನೇ ದಿನದ ವಿಶೇಷ ಉಪನ್ಯಾಸಕ್ಕೆ ಕುಲಪತಿಗಳಿಂದ ಚಾಲನೆ: ಸಂಸ್ಕೃತ ಸಾಹಿತ್ಯಕ್ಕೆ ವಾಲ್ಮೀಕಿ ಕೊಡುಗೆ ಅಪಾರ-  ಪ್ರೊ.ಶಿವಾನಂದ ಕೆಳಗಿನಮನಿ ಜಯ ಧ್ವಜ ನ್ಯೂಸ್ ರಾಯಚೂರು,18 - ಭರತ ಖಂಡದ ಕೋಗಿಲೆ ವಾಲ್ಮೀಕಿಯಾಗಿದ್ದರು, ಜಗತ್ತಿನ ಮೊಟ್ಟಮೊದಲ ಕಾವ್ಯ ರಾಮಾಯಣವಾಗಿದೆ. ವಾಲ್ಮೀಕಿ ಸಂಸ್ಕೃತ ಸಾಹಿತ್ಯದ ಅಪಾರ ಸೃಷ್ಟಿಕರ್ತ, ಸಂಸ್ಕೃತಕ್ಕೆ ಅವರು ನೀಡಿದ ಕೊಡುಗೆ ಅಪಾರವಾದುದು, ಕಾವ್ಯಗಳಲ್ಲಿ ಅಲಂಕಾರ, ಛಂದಸ್ಸು, ಹೃಸ್ವಸಿದ್ಧಾಂತ  ಪ್ರಥಮವಾಗಿ ಬಳಸಿದರು ಎಂದು ವಾಲ್ಮೀಕಿ ವಿವಿ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಜನ್ಮ ಸಂಭ್ರಮದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ವಾಲ್ಮೀಕಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಾಲ್ಮೀಕಿ ರಾಮಾಯಣ ಬುಡಕಟ್ಟಿನ ಕಾವ್ಯವಾಗಿದ್ದು ಅದು ಮಹಿಳಾ ಪ್ರತಿನಿಧಿಕರಣ ಕಾವ್ಯವಾಗಿತ್ತು ಅದರೊಳಗೆ ಮಾತೃ ಅಮೂಲ್ಯ ಕುಟುಂಬದ ಆಲೋಚನೆಗಳನ್ನು ಹೇಳುತ್ತದೆ. ತುಂಬಾ ಸೂಕ್ಷö್ಮವಾಗಿ ಅಧ್ಯಯನ ಮಾಡಿದರೆ ಅದರ ಪರಿಕರಗಳ ಹಿನ್ನೆಲೆಯಲ್ಲಿ ಅರ್ಥೈಸಿ ಹೇಳಬೇಕು. ವಾಲ್ಮೀಕಿ ರಾಮಾಯಣವು ಒಂದು ಸಮುದಾಯದ ...
Image
ಪತ್ರಿಕಾ ಭವನದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರಿಗೆ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ: ವೃತ್ತಿಯೊಂದಿಗೆ ಸಂಗೀತ ಜೋಡಣೆ ಶ್ಲಾಘನೀಯ - ಪಂ.ನರಸಿಂಹಲು ವಡವಾಟಿ.                                        ಜಯ ಧ್ವಜ ನ್ಯೂಸ್ , ರಾಯಚೂರು,ನ.16- ಮಾಧ್ಯಮ ಕ್ಷೇತ್ರವು ತನ್ನ ವೃತ್ತಿಪರತೆಯ ಕಾರ್ಯಗಳ ಜೊತೆಗೆ ಕಲೆ ಮತ್ತು ಸಂಸ್ಕೃತಿಯನ್ನು ಜೋಡಿಸಿಕೊಂಡು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಅಂತಾರಾಷ್ಟ್ರೀಯ ಕ್ಲಾರಿಯೊನೇಟ್ ವಾದಕ ಪಂ. ನರಸಿಂಹಲು ವಡವಾಟಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ  ರಾಯಚೂರು ರಿಪೋರ್ಟರ್‌ಸ್‌ ಗಿಲ್ಡ್ನಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ  ಹಾಗೂ ರಿಪೋರ್ಟರ್‌ಸ್‌ ಗಿಲ್ಡ್ ಬೆಳ್ಳಿ ಮಹೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ ಕಾರ್ಯಕ್ರಮ  ಉದ್ಘಾಾಟಿಸಿ ಮಾತನಾಡಿದರು. ಈ ಭಾಗದಲ್ಲಿ ಕಲೆ ಬೆಳೆಯಬೇಕು ಮತ್ತು ಉತ್ತಮ ಕಲಾವಿದರು ರೂಪುಗೊಳ್ಳಬೇಕು ಎಂಬ ಉದ್ದೇಶದಿಂದ ಮಾಧ್ಯಮದವರು ಈ ಸಂಗೀತ ಕಾರ್ಯಕ್ರಮ  ಆಯೋಜಿಸಿರುವುದು ಖುಷಿಯ ವಿಚಾರ.   ಸಂಗೀತ ಕ್ಷೇತ್ರಕ್ಕೆೆ ಸ್ವರ, ಶ್ರುತಿ, ತಾಳ, ಭಾವ ಮತ್ತು ಪ್ರಯತ್ನ ಎಂಬ ಐದು ಪ್ರಮುಖ ಮುಖಗಳಿರುವುದನ್ನು ಅರಿತರೆ...
Image
ರಾಯಚೂರು ಜಿಲ್ಲಾ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ :                                                ಕನ್ನಡವನ್ನು ಅನ್ನದ ಭಾಷೆಯಾಗಿಸುವುದಕ್ಕೆ ಕರ್ನಾಟಕ ಸರ್ಕಾರದಿಂದ ವಿವಿಧ ಕಾರ್ಯಕ್ರಮ- ಡಾ.ಪುರುಷೋತ್ತಮ ಬಿಳಿಮಲೆ ಜಯ ಧ್ವಜ ನ್ಯೂಸ್ ,ರಾಯಚೂರು ನ.14- ಕನ್ನಡ ಭಾಷೆಯನ್ನು ಮೇಲೆತ್ತುವುದಕ್ಕೆ, ಕನ್ನಡವನ್ನು ಅನ್ನದ ಭಾಷೆಯಾಗಿಸುವುದಕ್ಕೆ ಕರ್ನಾಟಕ ಸರ್ಕಾರದ ಹಿಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವಧಿಯಲ್ಲಿ ಮತ್ತು ಈಗಿನ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಬಹಳಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಹೇಳಿದರು. ಅವರಿಂದು ನಗರದ ಸಿದ್ದರಾಮ ಜಂಬಲದಿನ್ನಿ ರಂಗಮAದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು ವತಿಯಿಂದ ಆಯೋಜಿಸಿದ್ದ ರಾಯಚೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. ಶಿಕ್ಷಣ ಮಂತ್ರಿಗಳಾದ ಮಧು ಬಂಗಾರಪ್ಪನವರು ಕುಸಿಯುತ್ತಿರುವ ಕನ್ನಡವನ್ನು ಶಿಕ್ಷಣ ಕ್ಷೇತ್ರದಲ್ಲಿ ಹೇಗೆ ಎತ್ತಿಹಿಡಿಯಬೇಕು. ಎಂಬುದರ ಬಗ್ಗೆ ನಿರಂತರವಾಗಿ ಚರ್ಚೆಗಳನ್ನು ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರ 1956 (ಅ...