ವಿಧಾನ ಸೌಧ ಮೆಟ್ಟಿಲ ಮೇಲೆ ಉರ್ದು ಹಬ್ಬ ಖಂಡನೀಯ - ಪಲುಗುಲ ನಾಗರಾಜ ಜಯ ಧ್ವಜ ನ್ಯೂಸ್ , ರಾಯಚೂರು,ಅ.1- ಕರ್ನಾಟಕ ರಾಜ್ಯದ ಶಕ್ತಿಕೇಂದ್ರ ವಿಧಾನ ಸೌಧ ಮೆಟ್ಟಿಲು ಮೇಲೆ ಉರ್ದು ಹಬ್ಬ ಮಾಡಲು ಹೊರಟಿರುವ ಕಾಂಗ್ರೆಸ್ ಪಕ್ಷದ ಆಡಳಿತ ನಿರ್ಧಾರ ಖಂಡನೀಯ ಎಂದು ಹಿರಿಯ ಸಾಹಿತಿ ಪಲುಗುಲ ನಾಗರಾಜ ತಿಳಿಸಿರುತ್ತಾರೆ. ರಾಜ್ಯದಲ್ಲಿ ಕನ್ನಡ ಭಾಷೆ ಸಾರ್ವಭೌಮ ಇಲ್ಲಿ ಎಲ್ಲಾ ಜಾತಿ ಧರ್ಮದವರು ಕನ್ನಡವನ್ನು ಪ್ರೀತಿಸುತ್ತಾರೆ ಯಾವತ್ತೂ ಸಾಹಿತಿಗಳು ಕನ್ನಡ ಭಾಷೆಯನ್ನು ಜಾತಿ ಧರ್ಮಕ್ಕೆ ಅಂಟಿಸಿಕೊಂಡಿಲ್ಲ ಹೀಗಿರುವಾಗ ರಾಜ್ಯದ ಮುಕುಟ ವಿಧಾನ ಸೌಧ ಅದರ ಮೆಟ್ಟಿಲು ಮೇಲೆ ಉರ್ದು ಹಬ್ಬದ ಚರ್ಚೆ ನಿಜಕ್ಕೂ ಬೇಸರದ ವಿಷಯ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಂದಿನಿಂದ ಅಲ್ಪಸಂಖ್ಯಾತರ ಓಲೈಕೆಗೆ ಏನಿಲ್ಲದ ಕಸರತ್ತು ಮಾಡುತ್ತಿದೆ. ಕಳೆದ ವರ್ಷ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಹ್ವಾನಿಸಿ ಅಲ್ಪಸಂಖ್ಯಾತರ ಓಲೈಕೆ ಮಾಡಲಾಗಿತ್ತು. ಇದೀಗಗ ಸಚಿವ ಯು.ಟಿ.ಖಾದರ್ ರವರು ಉರ್ದು ಭಾಷೆಯನ್ನು ನೇರವಾಗಿ ವಿಧಾನ ಸೌಧ ಮೆಟ್ಟಿಲು ಮೇಲೆ ವೈಭವಿಸಲು ಹೊರಟಿರುವುದು ಸರಿಯಲ್ಲ, ಕನ್ನಡಿಗರು ಈಗಾಗಲೇ ಹಲವು ಭಾಷೆಯ ಒತ್ತಡದಲ್ಲಿ ಸಿಲುಕಿದ್ದಾರೆ ಅಂದು ತುತ್ತಿನ ಚೀಲ ತುಂಬಲು ಬಂದು ಇಂದು ರಾಜ್ಯದಲ್ಲಿ ತಮ್ಮ ಭಾಷೆಯನ್ನು ಗಟ್ಟಿಗೊಳಿಸುತ್ತಿದ್ದಾರೆ. ಯು.ಟಿ.ಖಾದರ್ ಉರ್ದು ಭಾಷೆಯನ್ನು ವಿಧಾನ ಸೌಧ ಮೆಟ್ಟಿಲು ಹತ್ತಿಸಿದರೆ ನಾ...