ಏಮ್ಸ್ ಹೋರಾಟಕ್ಕೆ ೧೦೦ ದಿನಗಳು: ಆಗಸ್ಟ್ ಅಂತ್ಯದೊಳಗೆ ಜಿಲ್ಲೆಗೆ ಏಮ್ಸ್ ಘೋಷಣೆ ಮಾಡದಿದ್ದಲ್ಲಿ ಉಗ್ರ ಹೋರಾಟ ಪ್ರತ್ಯೇಕ ರಾಜ್ಯದ ಕೂಗು -ಮಠಾಧೀಶರು

 


ಏಮ್ಸ್ ಹೋರಾಟಕ್ಕೆ ೧೦೦ ದಿನಗಳು: ಆಗಸ್ಟ್ ಅಂತ್ಯದೊಳಗೆ ಜಿಲ್ಲೆಗೆ ಏಮ್ಸ್ ಘೋಷಣೆ ಮಾಡದಿದ್ದಲ್ಲಿ ಉಗ್ರ ಹೋರಾಟ ಪ್ರತ್ಯೇಕ ರಾಜ್ಯದ ಕೂಗು -ಮಠಾಧೀಶರು 

ರಾಯಚೂರು, ಆ.೨೦- ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ ೧೦೦ ನೇ ದಿನದ 

ಶನಿವಾರದಂದು ಪ್ರತಿಭಟನೆಯಲ್ಲಿ ವಿವಿಧ ಮಠಗಳ ಮಠಾಧೀಶರು ಹೋರಾಟಕ್ಕೆ ಬೆಂಬಲಿಸಿ 

ಆಗಸ್ಟ್ ಅಂತ್ಯದೊಳಗೆ ಜಿಲ್ಲೆಗೆ ಏಮ್ಸ್ ಘೋಷಣೆ ಮಾಡದಿದ್ದಲ್ಲಿ ಮಠಾಧೀಶರಿಂದಲೇ ಉಪವಾಸ 

ಸತ್ಯಾಗ್ರಹ ಪ್ರಾರಂಭಿಸಿ ಉಘ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಅಲ್ಲದೇ ಈ ಭಾಗದಿಂದ ಚಿನ್ನ, 

ಅನ್ನ, ಬೆಳಕು ಪಡೆದು ಈ ಭಾಗದ ಹಕ್ಕನ್ನು ನೀಡುವಲ್ಲಿ ಅನ್ಯಾಯ ಮಾಡಿದರೆ ಕಲ್ಯಾಣ ಕರ್ನಾಟಕ 

ಪ್ರತ್ಯೇಕ ರಾಜ್ಯದ ಕರೆ ನೀಡಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಮಠಾಧೀಶರು ಒಕ್ಕೂರಲದಿಂದ 

ಎಚ್ಚರಿಸಿದರು. 

೧೦೦ ನೇ ದಿನದ ಅಂಗವಾಗಿ ಏಮ್ಸ್ ಹೋರಾಟ ಸಮಿತಿಯಿಂದ ಜಿಲ್ಲೆಯಲ್ಲಿ ಏಮ್ಸ್ 

ಸ್ಥಾಪನೆಗಾಗಿ ಒತ್ತಾಯಿಸಿ ನಗರದ ಮಹಾತ್ಮಾಗಾಂಧಿ ಕ್ರೀಡಾಂಗಣದ ಆವರಣದಲ್ಲಿ ಹಮ್ಮಿಕೊಂಡ 

ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಮಠಗಳ ಮಠಾಧೀಶರು ಭಾಗವಹಿಸಿ ಮಾತನಾಡಿದರು. 

ಶ್ರೀ ವಿರುಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮುಕ್ತ ಗುಚ್ಛ ಮುತ್ತಿನಪೆಂಡೆ 

ಕಲ್ಮಠ ಇವರು ಮಾತನಾಡಿ, ಜಿಲ್ಲೆಗೆ ಐಐಟಿ ನೀಡುವಂತೆ ಡಾ. ನಂಜುAಡಪ್ಪ ಅವರ ವರದಿ 

ಸಲ್ಲಿಸಿದ್ದರೂ ಈ ಭಾಗಕ್ಕೆ ಐಐಟಿ ನೀಡದೇ ವಂಚಿಸಲಾಗಿದೆ. ಇಲ್ಲಿಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ 

ಕೊರತೆಯಿಂದಲೂ ಈ ಭಾಗಕ್ಕೆ ಐಐಟಿ ಕೈ ತಪ್ಪಿದೆ. ಆದರೆ ಏಮ್ಸ್ ವಿಚಾರದಲ್ಲಿ ಮತ್ತೊಮ್ಮ 

ವಂಚನೆ ಮಾಡುವುದು ಈ ಭಾಗಕ್ಕೆ ಮತ್ತೊಮ್ಮೆ ಅನ್ಯಾಯ ಮಾಡಲಾಗುತ್ತಿದೆ. ಏಮ್ಸ್ ಸ್ಥಾಪನೆಗೆ 

ಧಾರವಾಡದ ಹೆಸರು ಸೂಚಿಸಿರುವುದು ಮುಖ್ಯಮಂತ್ರಿಗಳು ಕೇವಲ ಧಾರವಾಢಕ್ಕೆ ಮಾತ್ರ 

ಮುಖ್ಯಮಂತ್ರಿಗಳಲ್ಲ. ಇಡೀ ರಾಜ್ಯದ ಮುಖ್ಯಮಂತ್ರಿಗಳಾಗಿದ್ದು, ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು 

ಕಣ್ಣಿಗೆ ಸುಣ್ಣ ಎಂಬ ತಾರತಮ್ಯ ಮಾಡದೇ ಕೂಡಲೇ ರಾಯಚೂರು ಜಿಲ್ಲೆಗೆ ಏಮ್ಸ್ 

ಘೋಷಿಸಬೇಕು ಎಂದು ಎಚ್ಚರಿಸಿದರು. 

ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮಿಗಳು ರಂಭಾಪುರಿ ಶಾಖಾಮಠ ಕರಿಬಸವನಗರ 

ಸಿಂಧನೂರು ಅವರು ಮಾತನಾಡಿ, ಏಮ್ಸ್ ಸ್ಥಾಪನೆಗೆ ೧೦೦ ದಿನಗಳಾದರೂ ಹೋರಾಟದ ಕೂಗು 

ವಿಧಾನಸೌಧಕ್ಕೆ ತಲುಪುತ್ತಿಲ್ಲ ಎಂದರೆ ಈ ಭಾಗದ ಜನಪ್ರತಿನಿಧಿಗಳ ಇಚ್ಛಾ ಶಕ್ತಿ ಕೊರತೆ ಕಾಣುತ್ತಿದೆ.ಆದ್ದರಿಂದ ನಾವು ಜನಪ್ರತಿನಿಧಿಗಳ ಮನೆಗಳ ಮುಂದೆ ಪ್ರತಿಭಟನೆ ಮಾಡಿ ಅವರನ್ನು ಎಚ್ಚರಿಸುವ 

ಕಾರ್ಯ ಮಾಡಬೇಕಾಗಿದೆ ಜನಪ್ರತಿನಿಧಿಗಳ ಪ್ರಥಮ ಕರ್ತವ್ಯ ಈ ಭಾಗದ ಸಮಸ್ಯೆಗಳಿಗೆ ಸ್ಪಂಧಿಸಿ 

ಪರಿಹಾರ ನೀಡುವ ಬದ್ದತೆ ಅವರಿಗೆ ಇಲ್ಲವಾಗಿದೆ. ಕುಂಬಕರ್ಣ ನಿದ್ದೆ ಮಾಡಿದರೆ ಏಮ್ಸ್ 

ದೊರಕುವುದಿಲ್ಲ ವೀರಭದ್ರನಂತೆ ಹೋರಾಟ ಮಾಡಿದಲ್ಲಿ ಏಮ್ಸ್ ಪಡೆಯಬೇಕಾಗಿದೆ ಈ ನಿಟ್ಟಿನಲ್ಲಿ 

ಜನಪ್ರತಿನಿಧಗಳ ಮನೆ ಮುಂದೆ ಪ್ರತಿಭಟನೆ ಮಾಡಿ ಅವರನ್ನು ಹೋರಾಟದಲ್ಲಿ ಪಾಳ್ಗೊಳ್ಳುವಂತೆ 

ಮಾಡಬೇಕಾಗಿದೆ ಇಲ್ಲವಾದಲ್ಲಿ ಚುನಾವಣೆಗಳಲ್ಲಿ ಅವರ ಫಲಿತಾಂಶ ಶೂನ್ಯ ಮಾಡುವ ಎಚ್ಚರಿಕೆ 

ನೀಡಬೇಕಾಗುತ್ತದೆ ಎಂದರು. 

 ಶ್ರೀ ಮಹಾಲಿಂಗ ಸ್ವಾಮಿಗಳು ಸುವರ್ಣಗಿರಿ ವಿರಕ್ತಮಠ ಯದ್ದಲದೊಡ್ಡಿ ಸಿಂಧನೂರು 

ಅವರು ಮಾತನಾಡಿ, ನಮ್ಮ ಮುಂದಿನ ಪೀಳಿಗೆಗಾಗಿ ಏಮ್ಸ್ ಅನಿವಾರ್ಯವಾಗಿದೆ. ಅದು ನಮ್ಮ 

ಹಕ್ಕಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಯಶಸ್ವಿಗೆ ನಮ್ಮ ಹಕ್ಕನ್ನು ಪಡೆಯಲೇಬೇಕಾಗಿದೆ. 

ಇಲ್ಲವಾದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಅನಿವಾರ್ಯವಾದೀತು ಎಂದು ಎಚ್ಚರಿಸಿದರು. 

ಶ್ರೀ ಸಿದ್ದಬಸವ ಸ್ವಾಮಿಗಳು ಶ್ರೀ ಮರಿಶಿವಯೋಗಿಗಳ ಸಂಸ್ಥಾನ ಮಠ ಬಳಗಾನೂರು 

ಅವರು ಮಾತನಾಡಿ, ಈ ಭಾಗಕ್ಕೆ ಐಐಟಿ ವಂಚಿತವಾದದ್ದು ಅಪಾರ ನೋವಾಗಿದೆ. ಈ ಭಾಗದಿಂದ 

ರಾಜ್ಯಕ್ಕೆ ಅವಶ್ಯಕತೆಗಳನ್ನು ಪೂರೈಸಲಾಗುತ್ತಿದೆ ಆದರೆ ನಮ್ಮ ಅವಶ್ಯಕತೆಗಳನ್ನು ಪೂರೈಸುವಲ್ಲಿ 

ಅನ್ಯಾಯ ಮಾಡುತ್ತಿರುವುದು ಸರಿಯಲ್ಲ. ಏಮ್ಸ್ ಸ್ಥಾಪನೆಯಿಂದ ಈ ಭಾಗಕ್ಕೆ ಆರೋಗ್ಯ , 

ಉದ್ಯೋಗ ಸೇರಿದಂತೆ ಅಭಿವೃದ್ಧಿಯಾಗುತ್ತದೆ. ನಮ್ಮ ಹಕ್ಕು ನಮಗೆ ನೀಡಬೇಕಾಗಿದ್ದು ಸರ್ಕಾರದ 

ಕರ್ತವ್ಯವಾಗಿದ್ದು ಕೂಡಲೇ ಜಿಲ್ಲೆಗೆ ಏಮ್ಸ್ ಘೋಷಣೆ ಮಾಡಲೇಬೇಕು ಎಂದರು. 

ಶ್ರೀ ಶಂಭುಲಿAಗ ಮಹಾಸ್ವಾಮಿಗಳು ಅಡವಿಸಿದ್ದೇಶ್ವರ ಮಠ ಕಲ್ಲೂರು ಅವರು ಮಾತನಾಡಿ, 

ಐಐಟಿಗಾಗಿ ನಿರಂತರ ಪ್ರತಿಭಟನೆ ಮಾಡಲಾಗಿತ್ತು ಎಲ್ಲೋ ಒಂದು ಕಡೆ ಐಐಟಿ ದೊರಕುತ್ತದೆ 

ಎಂಬ ಆಶಾಭಾವನೆ ಇತ್ತು ಆದರೆ ಅದು ಕೈ ತಪ್ಪಿದೆ. ಆದರೆ ಏಮ್ಸ್ ವಿಚಾರದಲ್ಲಿ ಪ್ರತಿಭಟನೆ 

ತೀವ್ರವಾಗಬೇಕಿದೆ. ದುಷ್ಟ ಶಕ್ತಿಗಳು ಪ್ರತಿಭಟನೆಯ ದಿಕ್ಕು ತಪ್ಪಿಸಲು ಹೊರಟಿದ್ದಾರೆ. ಇದು 

ರಾಜಕೀಯ ಪ್ರೇರಿತ ಎಂದು ಅಪಪ್ರಚಾರ ಮಾಡುತ್ತಿದ್ದಾರೆ . ಅವುಗಳಿಗೆ ಕಿವಿಕೊಡದೇ ಪ್ರತಿಭಟನೆ 

ತೀವ್ರವಾಗಲಿ ಹಾಗೂ ಜನಪ್ರತಿನಿಧಿಗಳು ಭಾಗವಹಿಸಲು ಅವರ ಮನೆ ಮುಂದೆ ಪ್ರತಿಭಟನೆ 

ಮಾಡಬೇಕು. ಅಲ್ಲದೇ ಸರ್ಕಾರ ಜಿಲ್ಲೆಗೆ ಏಮ್ಸ್ ನೀಡದಿದ್ದಲ್ಲಿ ಪ್ರತ್ಯೇಕ ರಾಜ್ಯದ ಕೂಗು 

ಸಮಂಜಸವಾಗಿದೆ ಎಂದರು. 

ಪರಮಪೂಜ್ಯ ಸಿದ್ರಾಂ ಶರಣರು ವೆಂಕಟಗಿರಿ ಕ್ಯಾಂಪ್ ಸಿಂಧನೂರು ಅವರು ಮಾತನಾಡಿ, 

ಕಳೆದ ೯೯ ದಿನಗಳಿಂದ ಏಮ್ಸ್ ಸ್ಥಾಪನೆಗೆ ಪ್ರತಿಭಟನೆ ಮಾಡಲಾಗುತ್ತಿದೆ. ಜಿಲ್ಲೆಯ ಶಾಸಕರುಹೋರಾಟದಲ್ಲಿ ಭಾಗವಹಿಸಿ ಸಕಾರದ ಮೇಲೆ ಒತ್ತಡ ಹೇರಬೇಕಾಗಿತ್ತು. ಆದರೆ ಕೆಲವೇ ಶಾಸಕರು 

ಕಟಾಚಾರಕ್ಕೆ ಭಾಗವಹಿಸಿದ್ದು, ಜಿಲ್ಲೆಯ ಶಾಸಕರು ಹಾಗೂ ರಾಜ್ಯ ಸರ್ಕಾರ ಇನ್ನಾದರೂ 

ಎಚ್ಚೆತ್ತುಕೊಂಡು ಜಿಲ್ಲೆಗೆ ಆಗಸ್ಟ್ ಅಂತ್ಯದೊಳಗೆ ಒಂದು ನಿರ್ಣಯ ತೆಗೆದುಕೊಂಡು ಜಿಲ್ಲೆಗೆ ಏಮ್ ್ಸ 

ಘೋಷಣೆ ಮಾಡಬೇಕು ಇಲ್ಲವಾದರೆ ಮಠಾಧೀಶರಿಂದಲೇ ಉಪವಾಸ ಸತ್ಯಾಗ್ರಹ 

ಪ್ರಾರಂಭಿಸಲಾಗುವುದು ಎಂದು ಎಚ್ಚರಿಸಿದರು. ಈ ಭಾಗದಿಂದ ಚಿನ್ನ, ಅನ್ನ, ಬೆಳಕು ನೀಡುತ್ತಿರುವ 

ಜಿಲ್ಲೆಗೆ ಅನ್ಯಾಯ ಮಾಡಿದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯದ ಕರೆ ನೀಡಲಾಗುವುದು ಎಂದು 

ಎಚ್ಚರಿಸಿದರು. 

ಏಮ್ಸ್ ಹೋರಾಟದ ೧೦೦ ನೇ ದಿನದ ಮಠಾಧೀಶರ ಸಮಾವೇಶಕ್ಕೆ ಹೋರಾಟ ಸಂಚಾಲಕ 

ಡಾ. ಬಸವರಾಜ ಕಳಸ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಕರ್ನಾಟಕ ರಾಜ್ಯ ರೈತ 

ಸಂಘ ಹಸಿರು ಸೇನೆ ಅಧ್ಯಕ್ಷ ರವಿಕುಮಾರ್ ಪಾಟೀಲ್, ಮಹಿಳಾ ಘಟಕದ ಅಧ್ಯಕ್ಷೆ ಅನಿತಾ 

ಬಸವರಾಜ ಮಂತ್ರಿ ಹಾಗೂ ಅಮೀನ್ ದಿದ್ದಗಿ ಹಾಗೂ ಎಂ. ಆರ್. ಭೇರಿ ಮಾತನಾಡಿದರು. 

ಕೊನೆಯಲ್ಲಿ ಮಾರೆಪ್ಪ ವಕೀಲರು ವಂದಿಸಿದರು. 

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಅಂಬಣ್ಣ ಅರೋಲಿಕರ್, ಡಾ. 

ರಝಾಕ್ ಉಸ್ತಾದ್, ಅಶೋಕ್‌ಕುಮಾರ ಸಿಕೆ.ಜೈನ್, ಗುರುರಾಜ ಕುಲಕರ್ಣಿ, ಬಸವರಾಜ್ 

ಮಿಮಿಕ್ರಿ ವೆಂಕಟೇಶ ಆಚಾರ್ಯ ಬಶೀರ್ ಅಹ್ಮದ್ ಹೊಸಮನೆ ಆಂಜನೇಯ ಜಾಲಿಬೆಂಚಿ ,ಕಾಮ್ 

ರಾಜ್ ಪಾಟೀಲ್, ದಿನ್ನಿ ವೆಂಕಟರೆಡ್ಡಿ, ಚಾಂದ್ ಪಾಷಾ ಹನುಮಾಪುರ, ಸಾದಿಕ್ ಖಾನ್ 

,ನಾಸೀರ್ ಹೊಸೂರ್, ತಾಯಣ್ಣ ಯರಗೇರಾ, ಶರಣಪ್ಪ ಅಸ್ಕಿಹಾಳ್, ಚಂದ್ರಶೇಖರ್ ಭಂಡಾರಿ 

,ಶಾಂತಪ್ಪ, ಹುಸೇನಮ್ಮ, ಶ್ರೀನಿವಾಸ ಕಲವಲದೊಡ್ಡಿ, ಶ್ರೀನಿವಾಸ ಕೊಪ್ರದ್ , ರಂಗಪ್ಪ, ನಾಗಪ್ಪ, 

ಭೀಮೇಶ್, ವೀರೇಶ, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ನೂರಾರು 

ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲಾಧಿಕಾರಿಗಳ ಮಖಾಂತರ ಸಿಎಂಗೆ ಮನವಿ ಸಲ್ಲಿಸಲಾಯಿತು.

Comments

Popular posts from this blog