ಮಂತ್ರಾಲಯದಲ್ಲಿ ಆ.೨೫ ಮತ್ತು ೨೬ ಶ್ರೀ ಮನ್ನಾಯಸುಧಾ ಗ್ರಂಥದ ಮಂಗಳ ಮಹೋತ್ಸವ-ವಾದಿರಾಜಾಚಾರ್

 


ಮಂತ್ರಾಲಯದಲ್ಲಿ ಆ.೨೫ ಮತ್ತು ೨೬ ಶ್ರೀ ಮನ್ನಾಯಸುಧಾ ಗ್ರಂಥದ ಮಂಗಳ ಮಹೋತ್ಸವ- ವಾದಿರಾಜಾಚಾರ್
ರಾಯಚೂರು,ಆ.೨೩-ಮಂತ್ರಾಲಯದಲ್ಲಿ ಆ.೨೫ ಮತ್ತು ೨೬ ರಂದು ಶ್ರೀ ಮನ್ನಾö್ಯಯಸುಧಾ ಗ್ರಂಥದ ೫ ನೇ ಮಂಗಳ ಮಹೋತ್ಸವ ನಡಯಲಿದೆ ಎಂದು ಮಂತ್ರಾಲಯ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲರಾದ ಎನ್.ವಾದಿರಾಜ ಆಚಾರ್ ಹೇಳಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ.೨೫ ಮತ್ತು ೨೬ ರಂದು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರ ಅಧ್ಯಕ್ಷತೆಯಲ್ಲಿ ಮತ್ತು ರಾಷ್ಟçಪತಿ ಪ್ರಶಸ್ತಿ ಪುರಸ್ಕೃತ ಮಹಾಮಹೋಪಾಧ್ಯಾಯರಾದ ಶ್ರೀ ರಾಜಾ.ಎಸ್. ಗಿರಿಯಾಚಾರ್ಯರ ಘನ ಉಪಸ್ಥಿತಿಯಲ್ಲಿ ಶ್ರೀ ಮತ್ಸಮೀರಸಮಯಸಂವರ್ಧಿನಿ ಸಭಾ ಶ್ರೀಮದನುವ್ಯಾಖ್ಯಾನ ಸಹಿತ ಶ್ರೀ ಮನ್ನಾಯಸುಧಾಗ್ರಂಥದ ೫ನೇಯ ಮಂಗಳ ಮಹೋತ್ಸವ ನಡೆಯಲಿದೆ ಎಂದರು.



ಈ ಕಾರ್ಯಕ್ರಮದಲ್ಲಿ ಸುಮಾರು ೧೫೦ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು ತೆಲಂಗಾಣ, ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟç, ಮುಂತಾದ ರಾಜ್ಯಗಳಿಂದ ಸುಮಾರು ೬೦೦ ವಿಧ್ವಾಂಸರು ಪಾಲ್ಗೊಳ್ಳಲಿದ್ದು ಕಾಶಿ ಕ್ಷೇತ್ರದಿಂದಲು ವಿಧ್ವಾಂಸರು ಆಗಮಿಸುವ ನಿರೀಕ್ಷೆಯಿದೆ ಎಂದ ಅವರು ಇದೊಂದು ರೀತಿಯಲ್ಲಿ ಲೌಕಿಕ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಘಟಿಕೋತ್ಸವ ಮಾದರಿಯಲ್ಲಿ ನಡೆಯುವ ಧಾರ್ಮಿಕ ಘಟಿಕೋತ್ಸವ ಎನ್ನಬಹುದೆಂದರು.
ಈ ಬಾರಿ ಕೆ.ಶಶಿಧರಾಚಾರ್ಯ, ಕೆ.ರಾಮಕೃಷ್ಣಾಚಾರ್ಯ,ಎಮ್.ಸುಮುಖಾಚಾರ್ಯ, ಜಿ.ಸಂಪತ್ ಕುಮಾರ್ ಎಂಬ ವಿದ್ಯಾರ್ಥಿಗಳು ಶ್ರೀಮನ್ನಾö್ಯಯಸುಧಾ ಗ್ರಂಥ ಅಧ್ಯಯನ ಪಾರಂಗತರಾಗಿದ್ದಾರೆ0ದ ಅವರು ಶ್ರೀ ಮಠದಿಂದ ೧ ಲಕ್ಷ ರೂ ಠೇವಣಿ ರೂಪದಲ್ಲಿ ನೀಡಲಾಗುತ್ತದೆ ಎಂದ ಅವರು ಈ ಕಾರ್ಯಕ್ರಮದಲ್ಲಿ ಯಾವುದೆ ಮಠ ಮತ್ತು ಮತ ಬೇಧ ವಿಲ್ಲದೆ ತ್ರಿಮತಸ್ಥ ಬ್ರಾಹ್ಮಣರು ಪಾಲ್ಗೊಳ್ಳಲಿದ್ದಾರೆಂದರು.
ಎರೆಡು ದಿನಗಳ ಕಾಲ ವಿವಿಧ ಶಾಸ್ತಿçÃಯ  ಚಾರ್ಚಾಗೋಷ್ಟಿ, ಗ್ರಂಥ ಪೂಜೆ, ಗುರುಪೂಜೆ, ವಿದ್ಯಾರ್ಥಿಗಳಿಗೆ ಅನುಗ್ರಹ ಮಂತ್ರಾಕ್ಷತೆ , ವಿದ್ವಾನ್ ಜಗದೀಶ ಆಚಾರ್ಯ ಪುತ್ತೂರುರವರಿಂದ ಸಂಗೀತ ಸಂಚಿನ ದಾಸವಾಣಿ, ವಿದ್ಯಾರ್ಧಿಗಳಿಂದ ಸುಧಾನುವಾದ, ವಿಧ್ವಾಂಸರ ಅಭಿಪ್ರಾಯ ಮಂಡನೆ , ವಿಧ್ವಾಂಸರಿಗೆ ಸನ್ಮಾನ ನಡೆಯಲಿದೆ ಎಂದರು.


ಶ್ರೀಮಠದಿ0ದ ವಿವಿಧ ಶಾಖಾ ಮಠದಲ್ಲಿ ಸಂಸ್ಕೃತ ವಿದ್ಯಾಪೀಠ ತೆರೆಯಲಾಗಿದ್ದು ಕೇಂದ್ರ ಸರ್ಕಾರ ಸಂಸ್ಕೃತ ಭಾಷೆಗೆ ಉತ್ತೇಜನ ನೀಡುತ್ತಿದ್ದು ಭವಿಷ್ಯದಲ್ಲಿ ಸಂಸ್ಕೃತ ಭಾಷಾ ಪರಿಣೀತರಿಗೆ ಉತ್ತಮ ಉದ್ಯೋಗವಾಕಾಶ ಲಭ್ಯವಾಗಲಿವೆ ಎಂದರು.ಈ ಸಂದರ್ಭದಲ್ಲಿ ಶ್ರೀಮಠದ ಮಾಧ್ಯಮ ವಿಭಾಗದ ಶ್ರೀನಿಧಿ ಕರಣಮ್ ಇದ್ದರು.

Comments

Popular posts from this blog