ಡಿ.ದೇವರಾಜ ಅರಸು ಅವರ ಯೋಜನೆಗಳು ಇಂದಿಗೂ ಜನಪರ ಹಾಗೂ ಪ್ರಸ್ತುತ -ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ
ಡಿ.ದೇವರಾಜ ಅರಸು ಅವರ ಯೋಜನೆಗಳು ಇಂದಿಗೂ ಜನಪರ ಹಾಗೂ ಪ್ರಸ್ತುತ -ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ
ರಾಯಚೂರು ಆ.೨೦:- ಡಿ.ದೇವರಾಜು ಅರಸು ಅವರು ಮುತ್ಸದ್ದಿಯಾಗಿ, ಸರಳ ಸಜ್ಜನಿಕೆ ವ್ಯಕ್ತಿ ಯಾಗಿದ್ದರು, ಅವರ ಆಡಳಿತ ಸಂದರ್ಭದಲ್ಲಿ ಸರ್ವ ಜನಾಂಗದವರ ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸ, ಜನಪರ ಯೋಜನೆಗಳು ಜಾರಿಗೆ ತಂದಿದ್ದು, ಇಂದಿಗೂ ಅವರ ಯೋಜನೆಗಳನ್ನು ನೆನೆಯುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರು ಹೇಳಿದರು.
ಅವರು ಆ.೨೦ರ ಶನಿವಾರ ದಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಿ.ದೇವರಾಜ ಅರಸು ಅವರ ೧೦೭ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡಿ.ದೇವರಾಜು ಅರಸು ಅವರು ಯೋಜನೆಗಳು, ಕೊಡುಗೆಗಳನ್ನು ಕಳೆದ ೪೦ವರ್ಷಗಳಿಂದ ನೆನೆಯುತ್ತಿದ್ದೇವೆ, ಅಂತಹ ಕೊಡುಗೆ ನೀಡಿದ್ದರು, ಇವರು ಭೂ ಸುಧಾರಣೆ ಹಾಗೂ ಉಳುವವನೇ ಭೂಮಿಯ ಒಡೆಯ ಎನ್ನುವ ಕಾನೂನುಗಳನ್ನು ಜಾರಿಗೆ ತಂದರು, ರಾಜ್ಯದ ಎಲ್ಲ ವರ್ಗದವರಿಗೆ ಅನುಕೂಲವಾಗುವಂತೆ ಮಾಡಿದ್ದು, ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣ ಮಾಡಲು ಶಿಲಾನ್ಯಾಸ ಮಾಡಿ, ಎಲೆಕ್ಟ್ರಾನಿಕ್ ಸಿಟಿ ಪರಿಕಲ್ಪನೆಯನ್ನು ಎತ್ತಿ ಹಿಡಿದು ಹೆಚ್ಚು ಉದ್ಯೋಗ ಸೃಷ್ಟಿಗೆ ಕಾರಣರಾಗಿದ್ದಾರೆ ಎಂದು ಹೇಳಿದರು.
ಉಪನ್ಯಾಸಕರಾಗಿ ಮಹಾದೇವಪ್ಪ ಅವರು ಮಾತನಾಡಿ, ರಾಜ್ಯದಲ್ಲಿ ಉಳುವವನೆ ಭೂಮಿಒಡಯಕಾಯ್ದೆಯ ಅನುಷ್ಠಾನ ಹಾಗೂ ಎಲ್.ಜಿ.ಹಾವನೂರು ವರದಿಯನ್ನುಜಾರಿ ಮಾಡುವುದರ ಮೂಲಕ ದೇವರಾಜಅರಸು ಸಾಮಾಜಿಕ ನ್ಯಾಯದ ಹರಿಕಾರೆನಿಸಿಕೊಂಡಿದ್ದು, ವಲಸೆ ಕಾರ್ಮಿಕರಿಗೆ ಆಶ್ರಯ ಕಟ್ಟಡಗಳ ನಿರ್ಮಾಣ, ಸಾಲ ಮನ್ನಾ, ವಿದ್ಯಾರ್ಥಿಗಳಿಗೆ ಶಿಕ್ಷಣ, ವಿದ್ಯಾರ್ಥಿ ವೇತನ, ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದರು ಎಂದು ಹೇಳಿದರು.
ಉಳುವವನೆ ಭೂಮಿ ಒಡೆಯ ಕಾಯ್ದೆ ಜಾರಿಯಿಂದ ಭೂ ಹೀನರಿಗೆ ಕೃಷಿ ಭೂಮಿ ದೊರೆಯುವಂತಾಯಿತು. ಹಾವನೂರು ವರದಿಯನ್ನು ಜಾರಿಗೊಳಿಸಿ ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರೆಯಿತು.ಅರಸ ಅವರ ಕಾಲದಲ್ಲಿ ಶೈಕ್ಷ ಣಿಕ ರಂಗದಲ್ಲಿ ಉತ್ತಮ ಪ್ರಗತಿ ಕಂಡುಬAದಿತು ಎಂದರು.
ಈ ವೇಳೆ ಎಸ್‌ಎಸ್‌ಎಲ್‌ಸಿ ಯಲ್ಲಿ ಹೆಚ್ಚು ಅಂಕ ಪಡೆದು ವಸತಿ ನಿಲಯದ ವಿದ್ಯಾರ್ಥಿಗಳಾದ ಭಾಗ್ಯಶ್ರೀ, ಹನುಮೇಶ, ರಾಜೇಶ ಅವರನ್ನು ಸನ್ಮಾನಿಸಿದರು, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಸತಿ ನಿಯಲ ವಿದ್ಯಾರ್ಥಿಗಳಾದ ಮಮತಾ, ವನಿತಾ, ಸೌಜನ್ಯ, ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು, ಅಲ್ಲದೆ ಜಿಲ್ಲಾ ಮಟ್ಟದ ಅರಸು ಪ್ರಶಸ್ತಿಯನ್ನು ಭಗತ್ ರಾಜ್ ಅವರಿಗೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಂ.ಜಿ.ಬಿಲಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳ ಬಿ.ನಾಯಕ ನಗರಸಭೆಯ ಪೌರಾಯುಕ್ತ ಗುರುಲಿಂಗಪ್ಪ ಹಾಗೂ ವಿವಿಧ ಸಮಾಜದ ಮುಖಂಡರಾದ ಕೆ.ಶಾಂತಪ್ಪ, ಬಿ.ಬಸವರಾಜ, ಕೆ.ಹನುಮಂತಪ್ಪ ಯಾದವ್, ಜಂಬಣ್ಣ, ಬಸವಂತಪ್ಪ, ಮನೋಹರ್ ಪತ್ತಾರ್, ವಿಜಯ ಬಾಸ್ಕರ್, ಖಾಜನಗೌಡ, ಸೇರಿದಂತೆ ಅನೇಕರು ಭಾಗವಹಿಸಿದ್ದರು.


Comments
Post a Comment