ಗಣೇಶ ಬೀಡಿ ಲಾರಿಯಲ್ಲಿರಿಸಿದ್ದ ಹಣ ಕಳವು ಪ್ರಕರಣ ಬೇಧಿಸಿದ ಪೊಲೀಸರು : ಪೊಲೀಸರ ಯಶಸ್ವಿ ಕಾರ್ಯಚರಣೆ ಕಳುವಾದ ಲಕ್ಷಾಂತರ ರೂ. ಜಪ್ತಿ-ನಿಖಿಲ್.ಬಿ
ಗಣೇಶ ಬೀಡಿ ಲಾರಿಯಲ್ಲಿರಿಸಿದ್ದ ಹಣ ಕಳವು ಪ್ರಕರಣ ಬೇಧಿಸಿದ ಪೊಲೀಸರು:
ಪೊಲೀಸರ ಯಶಸ್ವಿ ಕಾರ್ಯಚರಣೆ ಪರಿಣಾಮ ಕಳುವಾದ ಲಕ್ಷಾಂತರ ರೂ. ಜಪ್ತಿ-ನಿಖಿಲ್.ಬಿ
ರಾಯಚೂರು,ಆ.೨೨- ಪೊಲೀಸರ ಮಿಂಚಿನ ಕಾರ್ಯಚರಣೆ ಪರಿಣಾಮ ೪೮ ಗಂಟೆಗಳಲ್ಲಿ ಕಳುವಾದ ಲಕ್ಷಾಂತರ ರೂ. ಹಣವನ್ನು ಜಪ್ತಿ ಮಾಡಲಾಗಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಿಖಿಲ್.ಬಿ ಸುದ್ದಿಗಾರರೊಂದಿಗೆ ಮಾತನಾಡಿ ಆ.೧೮ ರಂದು ಜಿಲ್ಲೆಯ ಸಿಂಧನೂರು ನಗರದಲ್ಲಿ ಗಣೇಶ ಬೀಡಿ ಕಂಪನಿಯ ವಾಹನದಲ್ಲಿಟ್ಟಿದ್ದ ೪೬.೨೩ ಲಕ್ಷ ರೂ .ಗಳನ್ನು ಕಳ್ಳರು ಕದ್ದೊಯದಿದ್ದಾರೆಂದು ವಾಹನದ ಚಾಲಕ ನೀಡಿದ ದೂರಿನ ಮೇರೆಗೆ ತನಿಖಾ ತಂಡ ರಚಿಸಲಾಗಿತ್ತು ಎಂದರು.
ಕಳ್ಳತನ ಪ್ರಕರಣದಲ್ಲಿ ವಾಹನದ ಚಾಲಕ ಸೈಯದ್ ಜುಬೇರ್, ಆತನ ಸಹೋದರ ಸೈಯದ್ ಖಲಂದರ್ ಮತ್ತು ಸ್ನೇಹಿತ ಗಣೇಶ ಭಾಗಿಯಾದ ಬಗ್ಗೆ ಸುಳಿವು ದೊರೆತ ಬಳಿಕ ಅರೋಪಿತರನ್ನು ದಸ್ತಗಿರಿ ಮಾಡಿ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದ ಅವರು ಆರೋಪಿಗಳು ತಾವೆ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದು ತಮ್ಮ ಮೇಲೆ ಬಾರದಂತೆ ಕಳುವಿನ ನಾಟಕವಾಡಿದ್ದು ಕಳ್ಳತನಕ್ಕೆ ಬಳಸಲಾದ ದ್ವಚಕ್ರವಾಹನ ವಶಕ್ಕೆ ಪಡೆಯಲಾಗಿದೆ ಎಂದರು.
ತನಿಖಾ ತಂಡವು ಹೆಚ್ಚುವರಿ ಎಸ್ಪಿ ಅರ್.ಶಿವಕುಮಾರ್,ಡಿಎಸ್ಪಿ ವೆಂಕಟಪ್ಪ ನಾಯಕ ಮಾರ್ಗದರ್ಶನದಲ್ಲಿ ಸಿಂಧನೂರು ಸಿಪಿಐ ರವಿಕುಮಾರ್ ಕಪ್ಪತ್ತನವರ್ ನೇತೃತ್ವದಲ್ಲಿ ಸಿಂಧನೂರು ಪಿಎಸೈ ಸೌಮ್ಯ,ಗ್ರಾಮೀಣ ಠಾಣೆ ಪಿಎಸೈ ಎರಿಯಪ್ಪ ,ಪಿಎಸೈ ಬೆಟ್ಟಯ್ಯ ಹಾಗೂ ಸಿಬ್ಬಂದಿ ವರ್ಗದ ತಂಡವು ಕಳ್ಳತನ ಬೇದಿಸಲು ಶ್ರಮಿಸಿದೆ ಎಂದರು.
Comments
Post a Comment