ಬ್ರಾಹ್ಮಣರನ್ನು ಯಾವುದೆ ಸರ್ಕಾರ ಕಡೆಗಣಿಸಬಾರದು- ಅಶೋಕ ಹಾರನಹಳ್ಳಿ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ:
ಬ್ರಾಹ್ಮಣರನ್ನು ಯಾವುದೆ ಸರ್ಕಾರ ಕಡೆಗಣಿಸಬಾರದು-ಅಶೋಕ ಹಾರನಹಳ್ಳಿ
ರಾಯಚೂರು,ಆ.೨೧-ಬ್ರಾಹ್ಮಣರನ್ನು ಯಾವುದೆ ಸರ್ಕಾರ ಕಡೆಗಣಿಸಬಾರದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.
ಅವರಿಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮ0ದಿರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕ ಆಯೋಜಿಸಿದ್ದ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ರಾಹ್ಮಣರು ಲೋಕದಲ್ಲಿ ಎಲ್ಲರಿಗೂ ಒಳ್ಳೆದನ್ನೆ ಬಯಸುತ್ತಾರೆ ಆದರೆ ನಮ್ಮನ್ನು ಯಾರು ಸಹ ಪರಿಗಣಿಸುವುದಿಲ್ಲ ಬ್ರಾಹ್ಮಣರು ಸ್ವಾವಲಂಬಿಗಳಾಗಿದ್ದಾರೆ ಯಾರ ಬಳಿ ಕೈಯೊಡ್ಡುವುದಿಲ್ಲ ಇದರ ಅರ್ಥ ಬ್ರಾಹ್ಮಣರಲ್ಲಿ ಎಲ್ಲರೂ ಆರ್ಥಕವಾಗಿ ಸಶಕ್ತರೆಂದು ಹೇಳೀಲು ಬರುವುದಿಲ್ಲ ನಮ್ಮಲ್ಲೂ ಅನೇಕರು ಬಡವರಿದ್ದಾರೆ ಅವರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಬ್ರಾಹ್ಮಣ ಮಹಾಸಭಾ ಹಾಗೂ ಸರ್ಕಾರ ಮಾಡಬೇಕೆಂದರು.
ಕೇವಲ ಶಿಕ್ಷಣ ಉದ್ಯೋಗ ಮುಂತಾದರಲ್ಲಿ ನಮ್ಮನ್ನು ಕಡೆಗಣಿಸಿಲ್ಲ ಬದಲಾಗಿ ಜಗತ್ತಿಗೆ ಸುದ್ದಿ ನೀಡುವ ಮುದ್ರಣ ಮಾಧ್ಯಮ ನಡೆಸುತ್ತಿರುವ ಬ್ರಾಹ್ಮಣರಿಗೆ ಜಾಹಿರಾತಿನಲ್ಲಿ ಕಡೆಗಣೀಸಲಾಗಿದೆ ನಾವು ಯಾರ ವಿರುದ್ದವು ಅಲ್ಲ ಆದರೆ ನಮ್ಮನ್ನು ಏಕೆ ತುಳೀಯಲಾಗುತ್ತಿದೆ ಎಂದ ಪ್ರಶ್ನಿಸಿದ ಅವರು ಡಾ.ಅಂಬೇಡ್ಕರ್ ರವರು ಸಂವಿಧಾನ ರಚಿಸಿದಾಗ ಒಂದು ಮಾತು ಹೇಳೀದ್ದರಂತೆ ಅದೇನೆಂದರೆ ನಾನೇನೋ ಸಂವಿಧಾನ ರಚಿಸಿದ್ದೇನೆ ಆದರೆ ಅದರ ಪರಿಪಾಲನೆ ಮಾಡಲು ಒಳ್ಳೆಯವರು ಬರಬೇಕಲ್ಲವೆಂದು ಅದರ ತಾತ್ಪರ್ಯ ಸಂವಿದಾನ ಪಾಲನೆ ಮಾಡುವವರು ಅದರ ರಕ್ಷಕರು ಉತ್ತಮರಾಗಿರಬೇಕೆಂದರು.
ಬಿಜೆಪಿ ಪಕ್ಷ ಬ್ರಾಹ್ಮಣರ ಪಕ್ಷವೆಂದು ಹೇಳುತ್ತಾರೆ ಆದರೆ ಬ್ರಾಹ್ಮಣರಿಗೆ ಶಿಕ್ಷಣದಲ್ಲಿ ನೀಡಲಾಗಿರುವ ಶೇ.೧೦ ಯೋಜನೆ ಸಮರ್ಪಕ ಜಾರಿಯಾಗಿಲ್ಲವೆಂದ ಅವರು
ಬ್ರಾಹ್ಮಣರನ್ನು ಮೂಲೆಗುಂಪು ಮಾಡಿದರೆ ಅದು ದೇಶಕ್ಕೆ ಹಾನಿ ಹೊರತು ಒಂದು ಸಮಾಜಕ್ಕೆ ಮಾತ್ರವಲ್ಲವೆಂದು ಅವರು ಸ್ವಾತಂತ್ರö್ಯ ಸಂದರ್ಭದಲ್ಲಿ ಬ್ರಿಟೀಷರ ನರಮೇಧಕ್ಕೆ ಸಾಕ್ಷಿಯಾದ ಕರ್ನಾಟಕದ ಜಲಯನವಾಲಾಬಾಗ ಎಂದೆ ಗುರುತಿಸುವ ವಿಧುರಾಶ್ವತ್ಥದಲ್ಲಿ ಮಹಾಸಭಾ ನೇತೃತ್ವದಲ್ಲಿ ಎಲ್ಲ ಸಮುದಾಯದವರ ಪಾದಯಾತ್ರೆ ಕೈಗೊಳ್ಳುತ್ತಿದ್ದೇವೆಂದರು,
ಜಿಲ್ಲಾ ಬ್ರಾಹ್ಮಣ ಮಹಾಸಭಾ ಉತ್ತಮ ಕಾರ್ಯ ಮಾಡಿದೆ ರಾಜ್ಯಮಟ್ಟದಲ್ಲಿ ಬ್ರಾಹ್ಮಣ ಮಹಾಸಭಾದಿಂದ ಶೇ.೯೮ ಅಂಕಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ ಹಮ್ಮಕೊಳ್ಳಲಾಗುತ್ತಿದ್ದು ಈಗಾಗಲೆ ೫೦೦ ಅರ್ಜಿ ಬಂದಿವೆ ಜಿಲ್ಲೆಯಿಂದಲೂ ಅರ್ಜಿ ಕಳಿಸಬಹುದೆಂದರು.
ಸಮಾಜದ ಆರ್ಥಿಕ ಅಶಕ್ತರಿಗೆ, ವೃದ್ದರಿಗೆ ಮಹಾಸಭಾ ತಕ್ಕ ಮಟ್ಟಿನ ಆರ್ಥಿಕ ಸಹಾಯ ಮಾಡುತ್ತದೆ ತಮ್ಮ ಕಾಲಮೇಲೆ ತಾವು ನಿಂತುಕೊಳ್ಳೂವಹಾಗೆ ನೀವು ಸ್ವಾವಲಂಬಿಗಳಾಗಬೇಕೆ0ದರು.
ಸಾನಿಧ್ಯ: ಸಾನಿಧ್ಯ ವಹಿಸಿದ್ದ ಶ್ರೀ ವ್ಯಾಸರಾಜ ಮಠ ಸೋಸಲೆ ಉತ್ತರಾಧಿಕಾರಿಗಳಾದ ಶ್ರೀಶ್ರೀ ೧೦೦೮ ಶ್ರೀ ವಿದ್ಯಾವಿಜಯ ತೀರ್ಥರು ಆಶೀರ್ವಚನ ನೀಡಿ ಇದು ರಾಯರ ಚೂರು ರಾಯರ ಸಂಪೂರ್ಣ ಅನುಗ್ರಹ ಈ ನಗರದ ಮೇಲಿದೆ ಎಂದ ಅವರು ವೇದವ್ಯಾಸರು ರಚಿಸಿದ ವೇದಗಳಲ್ಲಿ ಅಡಕವಾಗಿದ್ದು ಸರ್ವರ ಏಳ್ಗೆ ಬಯಸು ಎಂದಿದೆ ಅಲ್ಲದೆ ಸಂಸ್ಸ÷್ಕೃತಿಗೆ ಮೂಲಾಧಾರ ವೇದದ ಸಾರವಾಗಿದೆ ಎಂದರು. ನಾವೆಲ್ಲರು ಭಾಗವತದಲ್ಲಿ ಹೇಳಿದಂತೆ ಸತ್ಯಂ ವದ ಧರ್ಮಂಚರ ವೆನ್ನುವಂತೆ ಸತ್ಯದಿಂದ ನಡೆಯಬೇಕು ಧರ್ಮದ ಪಾಲನೆ ಪೋಷಣೆ ಮಾಡಬೇಕೆಂದರು.
ನಮ್ಮ ಮಠದ ಮೂಲ ಶ್ರೀಗಳವರಾದ ಶ್ರೀ ವ್ಯಾಸರಾಜ ತೀರ್ಥರು ಅನೇಕ ಕಡೆ ಶ್ರೀ ಪ್ರಾಣದೇವರನ್ನು ಪ್ರತಿಷ್ಠಾಪಿಸಿದ್ದಾರೆ ಮಠದಿಂದ ಸಹಸ್ರಾರು ಎಕರೆ ಭೂಮಿ ದಾನವಾಗಿ ನೀಡಲಾಗಿದೆ ಎಂದರು.
ಸ0ಸದ ಅಮರೇಶ್ವರ ನಾಯಕ ಮಾತನಾಡಿ ನಾನು ಚಿಕ್ಕವನಾಗಿದ್ದಾಗಿನಿಂದಲು ಬ್ರಾಹ್ಮಣ ಸಮುದಾಯದವರೊಂದಿಗೆ ಒಡನಾಟವಿದೆ ನಮ್ಮ ಮನೆಯ ಹತ್ತಿರದ ಶಂಕರ ಮಠದಲ್ಲಿ ಪೂಜೆ ಪ್ರವಚನಕ್ಕೆ ಹೋಗುತ್ತಿದ್ದೆ ಎಂದ ಅವರು ನಮಗೆ ಸಂಸ್ಕಾರ ದೊರೆತಿದ್ದು ನಮ್ಮ ಸುತ್ತಮುತ್ತಲಿನ ಬ್ರಾಹ್ಮಣ ಸಮಾಜದವರಿಂದಲೆ ಎಂದ ಅವರು ಸನಾತನ ಧರ್ಮ ಉಳಿಸುವುದು ನಮ್ಮೆಲ್ಲರ ಕರ್ತವ್ಯವೆಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜು ಮಾತನಾಡಿ ಇತಿಹಾಸ ಪುಟ ತೆರೆದು ನೋಡಿದಾಗ ಸ್ವಾತಂತ್ರö್ಯ ಹೋರಾಟದಲ್ಲಿ ಅತಿ ಹೆಚ್ಚು ಪಾಲ್ಗೊಂಡ ಸಮುದಾಯ ಬ್ರಾಹ್ಮಣ ಸಮುದಾಯವಾಗಿದೆ ಎಂದರೆ ಅತಿಶಯೋಕ್ತಿಯಾಗದು ಎಂದ ಅವರು ಜವಾಹರಲಾಲ ನೆಹರು ರವರು ದೇಶಕ್ಕೆ ತಮ್ಮ ಬೆಲೆಬಾಳುವ ಅಸ್ತಿ ಅಪಿಸಿದ್ದಾರೆ ಎಂದ ಅವರು ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ರಾಮಕೃಷ್ಣ ಹೆಗಡೆ, ಆರ್.ಗುಂಡುರಾವ್ ಸಿಎಂ ಆಗಿದ್ದರು ರಾಮಸ್ವಾಮಿ ಹಾರನಹಳ್ಳಿಯವರು ಮಂತ್ರಿಯಾಗಿ ಅನೇಕ ಕಾರ್ಯ ಮಾಡಿದ್ದಾರೆಂದರು.
ಬ್ರಾಹ್ಮಣ ಸಮಾಜವು ನಮಗೆ ಪೂಜ್ಯ ಸ್ಥಾನದಲ್ಲಿದೆ ನಮ್ಮ ಮನೆಯಲ್ಲಿ ಏನೆ ಕಾರ್ಯ ಮಾಡಬೇಕಾದರೆ ಬ್ರಾಹ್ಮಣರಿಂದಲೆ ಎಂದ ಅವರು ಕರೋನಾ ಸಂದರ್ಭದಲ್ಲಿ ಸುಮಾರು ೫೦೦ ಬಡ ಬ್ರಾಹ್ಮಣರಿಗೆ ಆಹಾರ ಕಿಟ್ ವಿತರಿಸಲಾಯಿತೆಂದ ಅವರು ಬ್ರಾಹ್ಮಣರಿಗೆ ಸರ್ಕಾರ ಸೌಲತ್ತು ನೀಡಬೇಕೆಂದರು.
ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ ಬ್ರಾಹ್ಮಣರಲ್ಲಿ ವಿನಯವಂತಿಕೆ ಇದೆ ಅದರ ಜೊತೆ ಒಗ್ಗಟ್ಟು ಮೂಡಬೇಕೆಂದ ಅವರು ನಿಮ್ಮ ಮನೆಯಲ್ಲಿ ಏನೆ ವೈಮನಸ್ಯವಿದ್ದರೂ ಅಣ್ಣ ತಮ್ಮಂದಿರ0ತೆ ನಗುತ್ತ ಸಾಗಿ ಎಂದು ಮಾರ್ಮಿಕವಾಗಿ ನುಡಿದ ಅವರು ಯಾವುದೆ ಸರ್ಕಾರವಿದ್ದರೂ ನಿಮ್ಮನ್ನು ಪರಿಗಣಿಸಬೇಖಾದರೆ ನಿಮ್ಮ ಶಕ್ತಿ ತಿಳಿಪಡಿಸಬೇಕೆಂದ ಅವರು ನಮ್ಮಲ್ಲಿ ದೃಡ ಸಂಕಲ್ಪವಿದ್ದರೆ ಸರ್ಕಾರದ ಪ್ರತಿನಿಧಿಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆಂದರು.
ದೇವರಾಜು ಅರಸು ಕಾಲದಲ್ಲಿ ಅಶೋಕ ಹಾರನಹಳ್ಳಿಯವರ ತಂದೆ ಮಂತ್ರಿಯಾಗಿದ್ದರು ಅವರ ಅನೇಕ ಯೋಜನೆ ಜಾರಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಅವರ ಮಾರ್ಗದಲ್ಲಿ ಅಶೋಕ ಹಾರನಹಳ್ಳೀ ಸಮಾಜದ ಶ್ರಯೋಭೀವೃದ್ದಿಗೆ ಶ್ರಮಿಸುತ್ತಿದ್ದು ಶ್ಲಾಘನೀಯವೆಂದರು.
ಪ್ರಸ್ತಾವಿಕವಾಗಿ ಎಕೆಬಿಎಂಎಸ್ ಕಾರ್ಯಕಾರಿ ಮಂಡಳಿ ಸದಸ್ಯ ರಾಘವೇಂದ್ರ ಚೂಡಾಮಣಿ ಮಾತನಾಡಿ ಸಮಾಜದಲ್ಲಿ ಸಂಘಟನೆ ಬೆಳೆಸಬೇಕೆಂದು ಬ್ರಾಹ್ಮಣ ಮಹಾಸಭಾ ಅವಿರತವಾಗಿ ಕೆಲಸಮಾಡುತ್ತಿದೆ ಹಾರನಹಳ್ಳಿಯವರು ಎಕೆಬಿಎಂಎಸ್ ಅಧ್ಯಕ್ಷರಾದ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡಿ ಬ್ರಾಹ್ಮಣರ ಸ್ಥಿತಿಗತಿ ಅರಿಯುವ ಪ್ರಯತ್ನ ಮಾಡುತ್ತಿದ್ದಾರೆಂದ ಅವರು ಜಿಲ್ಲಾ ಘಟಕದ ಪದಾಧಿಕಾರಿಗಳ ಸಹಕಾರದಿಂದ ಉತ್ತಮ ಕಾರ್ಯ ನಡೆದಿದೆ ಎಂದರು.
ವಿಪ್ರಶ್ರಿ ಪುರಸ್ಕಾರ: ಸಾಧಕರಾದ ವೆಂಕಟೇಶ ರಾವ್, ಶೋಭಾಮೂರ್ತಿಯವರಿಗೆ ವಿಪ್ರಶ್ರಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರ: ವಿವಿಧ ಸಾಧಕರಿಗೆ ಪುರಸ್ಕಾರ , ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಆಕರ್ಷಕ ನೃತ್ಯ:ಮಹಿಳಾ ಸದಸ್ಯರಿಂದ ಪಂಢರಪೂರನ ವಿಠ್ಠಲನನ್ನು ಸ್ತುತಿಸಿ ಮಾಡಲಾದ ಆಕರ್ಷಕ ನೃತ್ಯ ಮನಸೂರೆಗೊಂಡಿತು.
ವೇದಿಕೆ ಮೇಲೆ ಶಾಸಕ ಬಸನಗೌಡ ದದ್ದಲ, ಭಾರತ ಸರ್ಕಾರದ ಹೆಚ್ಪಿಐಎಲ್ ಸಂಸ್ಥೆ ಸ್ವತಂತ್ರ ನಿರ್ದೇಶಕ ಗಿರೀಶ ಕನಕವೀಡು, ಎಕೆಬಿಎಂಎಸ್ ರಾಜ್ಯ ಪರಿಷತ್ ನ ನರಸಿಂಗರಾವ್ ದೇಶಪಾಂಡೆ, ಜಿಲ್ಲಾಧ್ಯಕ್ಷ ಡಿ.ಕೆ.ಮುರಳೀಧರ, ರಾಜ್ಯ ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ಶುಭಮಂಗಳ ಸುನೀಲ, ರಾಜ್ಯ ಉಪಾಧ್ಯಕ್ಷ ಡಾ.ಆನಂದ ತೀರ್ಥ ಫಡ್ನೀಸ್, ಕಾರ್ಯಕಾರಿಣಿ ಸದಸ್ಯರಾದ ಅರವಿಂದ ಕುಲಕರ್ಣಿ, ಪ್ರಾಣೇಶ ಮುತಾಲಿಕ, ನಗರ ಪ್ರಧಾನ ಸಂಚಾಲಕ ವೇಣುಗೋಪಾಲ ಇನಾಂದಾರ್, ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಡಿ.ಕೆ.ರೇಖಾ, ರಾಮರಾವ್ ಗಣೇಕಲ್, ಪ್ರಸನ್ನ ಆಲಂಪಲ್ಲಿ, ಹನುಮೇಶ ಸರಾಫ, ಪ್ರವೀಣ ಮುಜುಂದಾರ್ ಇತರರು ಇದ್ದರು.
ತಾರಾನಾಥ ಜೇಗರಕಲ್, ವೆಂಕಟೇಶ ನವಲಿ , ಪಾಂಡುರ0ಗ ಕುರ್ಡಿಕರ್, ವೇಣುಗೋಪಾಲ ವರಪ್ಪ, ವಸುಧೇಂದ್ರ ಸಿರವಾರ ,ಪ್ರಹ್ಲಾದ ಕುಲಕರರ್ಣೀ, ಅಮಿತ ದಂಡಿನ್, ಶ್ರೀನಿವಾಸ್ ಇನಾಂದಾರ್ ಸೇರಿದಂತೆ ಅನಕೇರು ಕಾರ್ಯಕ್ರಮ ನಿರ್ವಹಿಸಿದರು.
ರಾಯರ ಮಠ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ವೇಧಘೋಷ ಹಾಗೂ ಸಂಗೀತ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು.





Comments
Post a Comment