ಕಾಡ್ಲೂರು ಸಂಸ್ಥಾನ ಮತ್ತು ರಂಗದೇ ವತಿಯಿಂದ ಕಿರು ಗ್ರಂಥಾಲಯ ಕಾರ್ಯ ಶ್ಲಾಘನೀಯ : ಮಕ್ಕಳಲ್ಲಿ ನೈತಿಕ ಶಿಕ್ಷಣ ಅತಿ ಮುಖ್ಯ-ಶ್ರೀಸುಜಯನಿಧಿ ತೀರ್ಥರು


" ಕಾಡ್ಲೂರು ಸಂಸ್ಥಾನ" ಮತ್ತು "ರಂಗದೇ" ವತಿಯಿಂದ ಕಿರು ಗ್ರಂಥಾಲಯ ಕಾರ್ಯ ಶ್ಲಾಘನೀಯ :

ಮಕ್ಕಳಲ್ಲಿ ನೈತಿಕ ಶಿಕ್ಷಣ ಅತಿ ಮುಖ್ಯ-ಶ್ರೀಸುಜಯನಿಧಿ ತೀರ್ಥರು

ರಾಯಚೂರು,ಡಿ.೧೪-ಮಕ್ಕಳು ಕೇವಲ ಅಂಕ ಗಳಿಕೆಗೆ ಮಾತ್ರ ಶಿಕ್ಷಣ ಪಡೆಯದೆ ನಮ್ಮ ದೇಶದ ಸಂಸ್ಕೃತಿ ಆಚಾರ ವಿಚಾರಗಳನ್ನು ಅರಿತುಕೊಂಡು ಉತ್ತಮ ಪ್ರಜೆಯಾಗುವತ್ತ ದಾಪುಗಾಲಿಡಬೇಕು ಈ ನಿಟ್ಟಿನಲ್ಲಿ ಕಿರು ಗ್ರಂಥಾಲದಲ್ಲಿರುವ ಆದರ್ಶ ಪುರುಷರ  ಪುಸ್ತಕಗಳು ಮಕ್ಕಳಿಗೆ ಪ್ರೇರಣೆ ನೀಡುತ್ತವೆ ಎಂದು ಮುಳಬಾಗಿಲು ಶ್ರೀಪಾದರಾಜ ಮಠದ ಪೀಠಾಧಿಪತಿಗಳಾದ ಶ್ರೀಶ್ರೀ ೧೦೦೮ ಶ್ರೀ ಸುಜಯನಿಧಿ ತೀರ್ಥರು ನುಡಿದರು.


ಅವರಿಂದು ನಗರದ ಗಾಜಗಾರಪೇಟೆಯ ಕಾಡ್ಲೂರು ದೇಸಾಯರ ನಿವಾಸದಲ್ಲಿ ಪಾದಪೂಜೆ ಸ್ವೀಕರಿಸಿ ನಿವಾಸದ ಆವರಣದಲ್ಲಿ" ಕಾಡ್ಲೂರು ಸಂಸ್ಥಾನ" ಮತ್ತು "ರಂಗದೇ" ವತಿಯಿಂದ  ಸ್ಥಾಪಿಸಲಾಗಿರುವ ಭಾರತ ಭಾರತಿ ಪುಸ್ತಕಗಳ ಕಿರು ಗ್ರಂಥಾಲಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಶಾಲಾ ಮಕ್ಕಳು ಕೇವಲ ತಮ್ಮ ಪಠ್ಯದಲ್ಲಿರುವ ಪಠ್ಯಕ್ರಮವನ್ನು ಮಾತ್ರ ಅಭ್ಯಸಿಸದೆ  ದೇಶ ಭಕ್ತಿ ಸಾಮಾಜಿಕ ಪ್ರಜ್ಞೇ ನೈತಿಕತೆ ಮೂಡಿಸುವ ಮಹಾನ್ ಪುರುಷರ, ಸಂತರ, ಸ್ವಾತಂತ್ರö್ಯ ಹೋರಾಟಗಾರರ, ತತ್ವಜ್ಞಾನಿಗಳ, ರಾಷ್ಟç ನಾಯಕರ ,ಕವಿಗಳ ದರ್ಶನಿಕರ ಪುಸ್ತಕಗಳನ್ನು ಇಲ್ಲಿ ಇಡಲಾಗಿದ್ದುಇ ಅವುಗಳನ್ನು ತಮ್ಮ ನಿತ್ಯದ ಅಥವಾ ಬಿಡುವಾದ ಸಮಯದಲ್ಲಿ ಓದಿದರೆ ಅವರಿಗೆ ಉತ್ತಮ ಸಂಸ್ಕಾರ ದೊರೆಯುತ್ತದೆ ಇದು ಮಕ್ಕಳ ಸಾತ್ವಿಕ ಬುದ್ದಿಮತೆಯ ಮೌಲ್ಯವರ್ಧನೆಗೆ ಸಹಕಾರಿಯಾಗುತ್ತದೆ ಎಂದರು.

ಕಿರು ಗ್ರಂಥಾಲಯದಲ್ಲಿ ಸುಮಾರು ಐದು ನೂರಕ್ಕೂ ಹೆಚ್ಚು ಪುಸ್ತಕಗಳಿದ್ದು ದಿನಕ್ಕೆ ಒಂದಿಷ್ಟು ಸಮಯ ಇಲ್ಲಿ ಕಳೆಯಬಹುದಾಗಿದ್ದು ಉಚಿತವಾಗಿ ಈ ಪ್ರಯೋಜನೆ ಪಡೆಯುವ ವ್ಯವಸ್ಥೆಯಿದ್ದು ಇದರ ಸದುಪಯೋಗಕ್ಕೆ ಮುಂದಾಗಬೇಕೆ0ದು .

ಈ ಸಂದರ್ಭದಲ್ಲಿ ಜಯ ಕುಮಾರ್ ದೇಸಾಯಿ ಕಾಡ್ಲೂರು, ವಿಜಯ ಕುಮಾರ್ ದೇಸಾಯಿ ಕಾಡ್ಲೂರು, ವೇಣುಗೋಪಾಲ ಇನಾಂದಾರ್, ವಿಶ್ವನಾಥ ಭಟ್, ಸುವರ್ಣಬಾಯಿ ದೇಸಾಯಿ, ಬಿಂದು , ಪಲ್ಲವಿ ಇನ್ನಿತರರು ಇದ್ದರು.

 

Comments

Popular posts from this blog