ಬಸನಗೌಡ ದದ್ದಲ್ ರಿಂದ ಜಲ ಜೀವನ ಮಿಷನ್ ಯೋಜನೆ ಭೂಮಿ ಪೂಜೆ
ಬಸನಗೌಡ ದದ್ದಲ್ ರಿಂದ ಜಲ ಜೀವನ ಮಿಷನ್ ಯೋಜನೆ ಭೂಮಿ ಪೂಜೆ . ರಾಯಚೂರು,ಡಿ.15- ತಲಮಾರಿ ಹಾಗೂ ಗಿಲ್ಲೇಸೂಗುರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್.ಕೆ ದೊಡ್ಡಿ, ಜಂಬಲದಿನ್ನಿ, ಗುಂಜಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಟಪೂರ ,ವೈ ಮಲ್ಲಪೂರ, ಜುಲುಮಗೇರಾ ಮಾಸದೊಡ್ಡಿ, ಗ್ರಾಮಗಳಲ್ಲಿ ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್ ರವರು ಜಲ ಜೀವನ ಮಿಷನ್ ಯೋಜನೆಯಡಿಯಲ್ಲಿ ಮನೆ ಮನೆಗೆ ವೈಯಕ್ತಿಕ ನಳ ಯೋಜನೆಗೆ ಭೂಮಿ ಪೂಜೆ ನೆರವೇರಿಸಿದರು. ಶಾಸಕರು ಮಾತನಾಡಿ ಕ್ಷೇತ್ರದಲ್ಲಿ ಯಾರು ಸಹ ಕೊಡ ಹೊತ್ತು ನೀರು ತರುವ ತಾಪತ್ರೆಯ ಬರಬಾರದೆಂದು ಪ್ರತಿಯೊಂದು ಮನೆಗೆ ವೈಯಕ್ತಿಕ ನಳದ ವ್ಯವಸ್ಥೆ ಕಲ್ಪಿಸಲಾಗುತ್ತದೆ ಮತ್ತು ಪೈಪ್ ಲೈನ್ ಹಾಕುವಾಗ ಸಿಸಿ ರಸ್ತೆ ಹಾಕಲಾಗುತ್ತದೆ ಎಂದು ಹೇಳಿದರು . ತುಂಟಪೂರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಮಂಜೂರು ಮಾಡಲಾಗಿದೆ.
ಗುಂಜಳ್ಳಿ ಗ್ರಾಮದಲ್ಲಿ ಹೈಮಾಸ್ ವಿದ್ಯುತ್ ದೀಪ ಉದ್ಘಾಟನೆ ,ಹಂಚಿನಾಳ ಗ್ರಾಮದಲ್ಲಿ ಹೈಮಾಸ್ ವಿದ್ಯುತ್ ದೀಪ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ತಾಯಣ್ಣನಾಯಕ, ನಾಗೇಂದ್ರಪ್ಪಣ್ಣ,ಮಲ್ಲರೆಡ್ಡಿ, ಪಾಗುಂಟಪ್ಪ, ನಾರಾಯಣ್, ಗೋಪಾಲರೆಡ್ಡಿ ,ಕಿಶನರಾವ್, ಜಾವಿದಪಾಟೀಲ್, ಷಣ್ಮುಖಪ್ಪ,ಅಬ್ರಾಂ, ಗೋವಿಂದಪ್ಪ, ಕರಿಯಪ್ಪ ನಾಯಕ ರಮೇಶ್ ರೋಸ್ಲಿ, ಫಾರೂಕ್, ನಲ್ಲಾರೆಡ್ಡಿ, ವೆಂಕಟೇಶ್ ಮನ್ಸಲಾಪೂರ, ತಿಪ್ಪಯ್ಯಪುಚ್ಚಲದಿನ್ನಿ, ಶ್ರೀನಿವಾಸಣ್ಣ, ಮಲ್ಲಿಕಾರ್ಜುನಗೌಡ, ಕಿಶೋರ್ ಸತ್ಯರೆಡ್ಡಿ,ಈರಣ್ಣನಾಯಕ, ಹುಸೇನಪ್ಪ,ಹನುಮಂತ, ನವೀನಗೌಡ ಬಾಬು ಚನ್ನಪ್ಪ, ವಿರುಪಾಕ್ಷಪ್ಪ,ವಿರೇಶ, ಯುವರಾಜ್, ಶ್ರೀನಿವಾಸ, ಭೀಮಣ್ಣ, ಈಶ್ವರ, ಈರಣ್ಣ,ಭೀಮೇಶ,ಪ್ರಾಣೇಶ, ನರಸಿಂಹಲು, ನರಸಣ್ಣನಾಯಕ, ರವಿ ಸೇರಿದಂತೆ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ಕಾರ್ಯಕರ್ತರು , ಊರಿನ ಹಿರಿಯ ಮುಖಂಡರು ಉಪಸ್ಥಿತರಿದ್ದರು.


Comments
Post a Comment