ಸಂಭವನೀಯ ಸಚಿವರ ಪಟ್ಟಿಗೆ ಫೈನಲ್ ಟಚ್ ! : ಬೋಸರಾಜುರವರಿಗೆ ಒಲಿಯುವುದೇ ಮಂತ್ರಿ ಸ್ಥಾನ ?
ಸಂಭವನೀಯ ಸಚಿವರ ಪಟ್ಟಿಗೆ ಫೈನಲ್ ಟಚ್ ! : ಬೋಸರಾಜುರವರಿಗೆ ಒಲಿಯುವುದೇ ಮಂತ್ರಿ ಸ್ಥಾನ ? ರಾಯಚೂರು,ಮೇ.26- ಕಾಂಗ್ರೆಸ್ ಸರ್ಕಾರದ ಮೊದಲ ಸಂಪುಟ ವಿಸ್ತರಣೆಯಲ್ಲಿ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜುಗೆ ಮಂತ್ರಿ ಸ್ಥಾನ ಒಲಿಯುವುದೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಪ್ರಬಲವಾಗಿ ಕೇಳಿಬರುತ್ತಿದೆ. ಸಿಎಂ ಸಿದ್ದರಾಮಯ್ಯ ಮಂತ್ರಿ ಮಂಡಲದಲ್ಲಿ ಮುಖ್ಯ ಮಂತ್ರಿಗಳ ಪ್ರಮಾಣ ವಚನ ಸಂದರ್ಭದಲ್ಲಿ ಸಂಪುಟ ದರ್ಜೆ ಸಚಿವರಾಗಿ ಎಂಟು ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ಇದೀಗ ಇನ್ನುಳಿದ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಕಸರತ್ತು ತೀರ್ವಗೊಂಡಿದ್ದು ಜಿಲ್ಲೆಯ ಹಿರಿಯ ರಾಜಕಾರಣಿ ಮಾಜಿ ಶಾಸಕ, ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ರವರನ್ನು ಮಂತ್ರಿ ಮಾಡಲು ಚಿಂತಿಸಲಾಗಿದೆ ಎನ್ನಲಾಗಿದ್ದು ಸಂಭವನೀಯ ಸಚಿವರ ಪಟ್ಟಿಯಲ್ಲಿ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಚುನಾವಣೆಯಲ್ಲಿ ನಗರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿತ್ತು ಅಲ್ಪಸಂಖ್ಯಾತ ಸಮುದಾಯದ ಸೈಯದ್ ಶಾಲಂರಿಗೆ ಟಿಕೆಟ್ ನೀಡಲಾಗಿತ್ತು ತೀರ್ವ ಜಿದ್ದಾ ಜಿದ್ದಿ ಕಣದಲ್ಲಿ ಅಲ್ಪ ಮತದ ಅಂತರದಲ್ಲಿ ಶಾಲಂ ಅವರು ಪರಾಭವಗೊಂಡಿದ್ದರು .
ಸದ್ಯ ಬೋಸರಾಜುಗೆ ಸಚಿವ ಸ್ಥಾನ ದೊರೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು ನಾಳೆ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
.jpeg)
.jpeg)
Comments
Post a Comment