ನೂತನ ಶಾಸಕ ಡಾ.ಶಿವರಾಜ ಪಾಟೀಲ್ ಪ್ರಮಾಣ ವಚನ ಸ್ವೀಕಾರ.
ನೂತನ ಶಾಸಕ ಡಾ.ಶಿವರಾಜ ಪಾಟೀಲ್ ಪ್ರಮಾಣ ವಚನ ಸ್ವೀಕಾರ. ರಾಯಚೂರು,ಮೇ.22- ನೂತನವಾಗಿ ಶಾಸಕರಾಗಿ ಚುನಾಯಿತರಾದ ನಗರ ಕ್ಷೇತ್ರದ ಶಾಸಕ ಡಾ.ಶಿವರಾಜ ಪಾಟೀಲ್ ವಿಧಾನಸೌಧದಲ್ಲಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.
16 ನೇ ವಿಧಾನ ಸಭೆ ಸದಸ್ಯರಾಗಿ ಆಯ್ಕೆಯಾದ ಎಲ್ಲಾ 223 (ಸ್ಪೀಕರ್ ಹೊರತುಪಡಿಸಿ) ಆಡಳಿತ ಮತ್ತು ವಿರೋಧ ಪಕ್ಷ ಮತ್ತು ಎಲ್ಲ ಪಕ್ಷಗಳಿಂದ, ಪಕ್ಷೇತರರಾಗಿ ಆಯ್ಕೆಯಾದ ಎಲ್ಲ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಆರ್.ವಿ.ದೇಶಪಾಂಡೆಯವರು ಹಂಗಾಮಿ ಸಭಾಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದು ಅವರಿಗೆ ಗೌರವಾನ್ವಿತ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದರು.


Comments
Post a Comment