ಬಿಸಿಲು ಹೆಚ್ಚಳ: ಬಾವಿ, ಕೆರೆ, ಸ್ವಿಮ್ಮಿಂಗ್ ಪೂಲ್ ಗಳಲ್ಲಿ ಈಜಾಡುತ್ತಿರುವ ಮಕ್ಕಳು.

 


ಬಿಸಿಲು ಹೆಚ್ಚಳ: ಬಾವಿ, ಕೆರೆ, ಸ್ವಿಮ್ಮಿಂಗ್ ಪೂಲ್ ಗಳಲ್ಲಿ ಈಜಾಡುತ್ತಿರುವ ಮಕ್ಕಳು.                      ರಾಯಚೂರು,ಮೇ.23- ಬಿಸಿಲಿನ ತಾಪ ಕಳೆದುಕೊಳ್ಳಲು   ಮಕ್ಕಳು ಬಾವಿ, ಕೆರೆ , ಸ್ವಿಮ್ಮಿಂಗ್ ಪೂಲ್ ಗಳಲ್ಲಿ ಈಜಾಡುತ್ತಿದ್ದಾರೆ.           ಬಿರು ಬೇಸಿಗೆ  ಮುಗಿಯುತ್ತಾ ಬಂದರೂ ಇನ್ನು ಬಿಸಿಲಿನ ಪ್ರಖರತೆ ತಗ್ಗುತ್ತಿಲ್ಲ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶ ಎಂದು ಹವಾಮಾನ ಇಲಾಖೆ ಹೇಳಿದೆ .                  ಬೇಸಿಗೆ ಮಧ್ಯದ ದಿನಗಳಲ್ಲಿ ಮಳೆಯಾಗಿ ತಾಪಮಾನ ಕೊಂಚ ತಗ್ಗಿತ್ತು ಇದೀಗ ಕಳೆದ ಹದಿನೈದು ದಿನಗಳಲ್ಲಿ ಬಿಸಿ ಗಾಳಿ ಮತ್ತು ಬಿಸಿಲಿನಿಂದ ಜನ ಜಾನುವಾರುಗಳು ಬಸವಳಿಯುತ್ತಿದ್ದಾರೆ.   

                          ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಮಕ್ಕಳು ಭಾವಿ , ಕೆರೆಗಳಲ್ಲಿ ಈಜಾಡುತ್ತಿದ್ದಾರೆ.            ನಗರ ಪ್ರದೇಶದಲ್ಲಿ ಮಕ್ಕಳು ಪಾಲಕರೊಂದಿಗೆ ಈಜುಕೊಳದತ್ತ ಮುಖ ಮಾಡಿದ್ದಾರೆ.                                        ತಾಲೂಕಿನ  ಬುಳ್ಳಾಪುರ ಗ್ರಾಮ ಸೇರಿದಂತೆ  ಗ್ರಾಮೀಣ ಪ್ರದೇಶಗಳಲ್ಲಿ ತೋಟದ ಭಾವಿ, ನದಿ, ಹಳ್ಳ ,ಕೊಳ್ಳ , ನಾಲೆಗಳಲ್ಲಿ ಮುಳುಗೇಳುತ್ತ ಬಿಸಿಲಿನಿಂದ ಕೊಂಚ ಮಟ್ಟಿಗೆ ತಪ್ಪಿಸಿಕೊಳ್ಳುತ್ತಿದ್ದಾರೆ. 

                            ಮಕ್ಕಳಿಗೆ ಬೇಸಿಗೆ ರಜೆ ಮುಗಿಯುತ್ತಾ ಬರುತ್ತಿದ್ದು ಮತ್ತೆ ಶಾಲೆಗಳತ್ತ ಮುಖ ಮಾಡಬೇಕಿದ್ದು  ಉಳಿದಿರುವ ರಜೆಯನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಈಜಾಡುತ್ತ ಕಾಲ ಕಳೆಯಬೇಕಾಗಿದೆ.   

                               ಮಕ್ಕಳು ಪಾಲಕರ ನಿಗಾದಲ್ಲಿ ಭಾವಿ, ಕೆರೆಗಳಲ್ಲಿ ಈಜಾಡಬೇಕು ಯಾವುದೇ ಅವಘಡಕ್ಕೆ ಆಸ್ಪದ ನೀಡದೆ ಬೇಸಿಗೆ ರಜೆ ಸುರಕ್ಷಿತವಾಗಿ ಮುಗಿಸಬೇಕು ಎಂಬುದು ಜಯಧ್ವಜದ ಕಳಕಳಿ

Comments

Popular posts from this blog