ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ: ಪತ್ರಕರ್ತರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು- ಡಾ.ಅಜಿತ್.


ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ:
ಪತ್ರಕರ್ತರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು- ಡಾ.ಅಜಿತ್. 
  ರಾಯಚೂರು,ನ.16- ಸದಾ ಸುದ್ದಿ ಜಂಜಾಟದ ಒತ್ತಡದಲ್ಲಿರುವ  ಪತ್ರಕರ್ತರು ನಿಯಮಿತವಾಗಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರುಬೇಕೆಂದು ವಿಜಿಕೆ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ  ಡಾ.ಅಜಿತ್ ವಿ.ಕುಲಕರ್ಣಿ ಹೇಳಿದರು.                    ಅವರಿಂದು ನಗರದ ವಿಜಿಕೆ ಆಸ್ಪತ್ರೆಯಲ್ಲಿ ರಾಯಚೂರು ರಿಪೋರ್ಟ್ರಸ್ ಗಿಲ್ಡ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ದಿನ ನಿತ್ಯ ಸುದ್ದಿ ಧಾವಂತದಲ್ಲಿರುತ್ತಾರೆ ಅದರ ಮಧ್ಯೆ ತಾವು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದರು.   

                     ನಮ್ಮ ದೇಶದಲ್ಲಿ ಪ್ರತಿ 4 ನಿಮಿಷಕ್ಕೊಮ್ಮೆ ಒಬ್ಬರಿಗೆ ಹೃದಯಾಘಾತ ಸಂಭವಿಸುತ್ತದೆ 10 ನಿಮಿಷಕ್ಕೊಬ್ಬರು ಹೃದ್ರೋಗ ಖಾಯಿಲೆಯಿಂದ ಸಾವನ್ನಪ್ಪುತ್ತಾರೆ ಎಂಬ ಮಾಹಿತಿಯಿದ್ದು ನಾವೆಲ್ಲರೂ ಉತ್ತಮ ಆಹಾರ, ವಿಹಾರ, ವಿಚಾರವಿಟ್ಟುಕೊಳ್ಳಬೇಕೆಂದರು.            ಕರೋನಾ ನಂತರ ಪ್ರತಿಯೊಬ್ಬರ ದೇಹದಲ್ಲಿಯೂ ಏರುಪೇರಾಗಿದ್ದು ಅದನ್ನು ಸದೃಡವಾಗಿಟ್ಟುಕಳ್ಳಬೇಕೆಂದ ಅವರು ಹೃದ್ರೋಗ ಸಂಬಂಧಿತ ಸಮಸ್ಯೆಗೆ ಉಚಿತ ಹೆಲ್ಪ್ ಲೈನ್ ನಂಬರ್ 8940084400 ಬಿಡುಗಡೆಗೊಳಿಸಿ ಅದಕ್ಕೆ ಸಂಪರ್ಕಿಸಲು ಕೋರಿದರು.               ಪತ್ರಕರ್ತರಿಗೆ ಆಸ್ಪತ್ರೆಯಲ್ಲಿ ರಿಯಾಯಿತಿ ನೀಡುವುದಾಗಿ ಘೋಷಿಸಿದರು. 

       ರಾಯಚೂರು ರಿಪೋರ್ಟ್ರಸ್ ಗಿಲ್ಡ್ ಅಧ್ಯಕ್ಷ ಚೆನ್ನಬಸವಣ್ಣ ಮಾತನಾಡಿ ಪತ್ರಕರ್ತರು ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ ದೃಶ್ಯ ಮಾಧ್ಯಮದಲ್ಲಿ ವರದಿಗಾರರು, ಛಾಯಾಗ್ರಾಹಕರು ಹೆಚ್ಚಿನ ಒತ್ತಡದಲ್ಲಿರುತ್ತಾರೆ ಅವರು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡದೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದರು. ಡಾ.ಅಜಿತ್ ಕುಲಕರ್ಣಿಯವರು ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿದ್ದು ಅವರಿಗೆ ಅಭಿನಂದನೆ ಸಲ್ಲಿಸಿದರು. ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಉಪಾಧ್ಯಕ್ಷ ಶ್ರೀನಿವಾಸ ಇನಾಂದಾರ್ ಮಾತನಾಡಿ ಡಾ. ವಿ.ಜಿ.ಕುಲಕರ್ಣಿ ಮತ್ತು ಡಾ.ಅಜಿತ್ ಕುಲಕರ್ಣಿಯವರು ನನಗೆ ಮೇಲಿಂದ ಮೇಲೆ ಪತ್ರಕರ್ತರಿಗೆ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲು ಕೋರುತ್ತಿದ್ದರು ಅದು ಈಗ ಈಡೇರಿದೆ ಎಂದರು.   

  ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿ ವಿಜಯ ಜಾಗಟಗಲ್ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.    ವೇದಿಕೆ ಮೇಲೆ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಪ್ರಧಾನ ಕಾರ್ಯದರ್ಶಿ ಪಾಷಾ ಹಟ್ಟಿ ಇದ್ದರು. ಆರೋಗ್ಯ ತಪಾಸಣೆ ಶಿಬಿರದಲ್ಲಿ ಹಿರಿಯ , ಕಿರಿಯ ಪತ್ರಕರ್ತರಿದ್ದರು
.

Comments

Popular posts from this blog