ಗ್ರಂಥಾಲಯ ಸಪ್ತಾಹ ನಿತ್ಯದ ಹಬ್ಬವಾಗಬೇಕು- ಮುರಳಿಧರ ಕುಲಕರ್ಣಿ

 


ಗ್ರಂಥಾಲಯ ಸಪ್ತಾಹ ನಿತ್ಯದ ಹಬ್ಬವಾಗಬೇಕು- ಮುರಳಿಧರ ಕುಲಕರ್ಣಿ

ರಾಯಚೂರು,ನ.17-ಪ್ರಸ್ತುತ ದಿನಮಾನಗಳಲ್ಲಿ ಮೊಬೈಲ್ ಹಾಗೂ ಕಂಪ್ಯೂಟರ ಗಳ ವ್ಯಾಪಕ ಬಳಕೆಯಿಂದ ಓದುಗರ ಸಂಖ್ಯೆ ಹಾಗೂ ಪುಸ್ತಕ ಪ್ರೀತಿ, ದಿನೇ ದಿನೇ ಕ್ಷೀಣಿಸುತ್ತಿದೆ, ಈ ದಿಸೆಯಲ್ಲಿ ಸಾರ್ವಜನಿಕ ಗ್ರಂಥಾಲಯಗಳು ನಾಗರಿಕರಲ್ಲಿ ಪುಸ್ತಕ ಪ್ರೀತಿಯನ್ನು ಹೆಚ್ಚಿಸಿ, ಗ್ರಂಥಾಲಯಗಳನ್ನು  ಸದೃಢಗೊಳಿಸಬೇಕು. ಗ್ರಂಥಾಲಯ ಸಪ್ತಾಹ ಎಂಬುದು ಒಂದು ವಾರದ ಚಟುವಟಿಕೆಯಾಗದೆ ಇದು ನಿತ್ಯದ ಹಬ್ಬವಾಗಬೇಕೆಂದು, ಕರ್ನಾಟಕ ಸಂಘದ ಕಾರ್ಯದರ್ಶಿ ಮುರಳಿಧರ ಕುಲಕರ್ಣಿ ಅವರು ಹೇಳಿದರು.

   ಅವರು ಇಂದು ಬೆಳಗ್ಗೆ ಕರ್ನಾಟಕ ಸಂಘದಲ್ಲಿ ಹಮ್ಮಿಕೊಂಡ  ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

   ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎ. ಸುಧಾಕರ  ನಿವೃತ್ತ ಎಲ್. ಐ. ಸಿ. ಅಧಿಕಾರಿ, ಇವರು ಮಾತನಾಡಿ, ಕರ್ನಾಟಕ ಸಂಘಕ್ಕೆ ತನ್ನದೇ ಆದ ಇತಿಹಾಸ ಪರಂಪರೆ ಇದೆ, ಈ ಸಂಘವು ಹಲವಾರು ಸ್ಥಳೀಯ ಪತ್ರಿಕೆಗಳ ಸ್ಥಾಪನೆಗೆ ಕಾರಣವಾಗಿದೆ. ಕರ್ನಾಟಕ ಸಂಘದ ಗ್ರಂಥಾಲಯದ ಜೊತೆಗೆ ಬೋಳಮಾನ ದೊಡ್ಡಿಯ ರಸ್ತೆಯಲ್ಲಿ ಇನ್ನೊಂದು ಗ್ರಂಥಾಲಯ ವನ್ನು ಸರ್ಕಾರ ಸ್ಥಾಪಿಸಿದರೆ, ಆ ಭಾಗದ ಓದುಗರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

       ಇನ್ನೊಬ್ಬ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ರವಿಕುಮಾರ್ ಸಹಾಯಕ ಗ್ರಂಥ ಪಾಲಕರು ಪೂರ್ಣಿಮಾ ಆಯುರ್ವೇದಿಕ್ ಕಾಲೇಜ್ ಇವರು ಮಾತನಾಡಿ, ದೇಶದಲ್ಲಿ ಪ್ರತಿ ವರ್ಷ ನವೆಂಬರ್ 14 ರಿಂದ 20ರವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾವನ್ನು ಆಚರಿಸಲಾಗುತ್ತದೆ ಈ ಅವಧಿಯಲ್ಲಿ ಪುಸ್ತಕ ಪ್ರದರ್ಶನ, ವಿಶೇಷ ಉಪನ್ಯಾಸ, ಮುಂತಾದವುಗಳನ್ನು ಏರ್ಪಡಿಸಿ ಗ್ರಂಥಾಲಯದ ಮಹತ್ವವನ್ನು ಜನರಿಗೆ ತಿಳಿಸಿಕೊಡುವ ಉದ್ದೇಶವನ್ನು ಹೊಂದಿದೆ, ಎಂದು ಹೇಳಿದರು.

       ಕಾರ್ಯಕ್ರಮದ ಮೊದಲಿಗೆ ಕರ್ನಾಟಕ ಸಂಘದ ಗ್ರಂಥಾಲಯದ ಮೇಲ್ವಿಚಾರಕರಾದ ಶ್ರೀಮತಿ ಅರ್ಚನಾ ಇ.ಇವರು ಸ್ವಾಗತಿಸಿದರು.

   ವೇದಿಕೆ ಮೇಲೆ ಶ್ರೀ ಎಂ ಎಸ್ ಪರದೇಶಿ ನಿವೃತ್ ಉಪನ್ಯಾಸಕರು  ಉಪಸ್ಥಿತರಿದ್ದರು.

   ಗ್ರಂಥಾಲಯದ ಪಿತಾಮಹರಾದ ಶ್ರೀ ಎಂ ಎಸ್ ರಂಗನಾಥನ್ ಇವರ ಭಾವಚಿತ್ರಕ್ಕೆ ಈ ಸಂದರ್ಭದಲ್ಲಿ ಪೂಜಿ ಸಲ್ಲಿಸಲಾಯಿತು.

   ಶ್ರೀ ನರಸಿಂಹಲು ಹಾಗೂ ಹಲವಾರು ಓದುಗರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Comments

Popular posts from this blog