ಪತ್ರಕರ್ತರ ಕ್ರಿಕೆಟ್ ಕ್ರೀಡಾಕೂಟ ಉದ್ಘಾಟನೆ: ಕ್ರೀಡೆಯಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ- ಸುರೇಂದ್ರ ಆಚಾರ್ಯ


 ಪತ್ರಕರ್ತರ ಕ್ರಿಕೆಟ್ ಕ್ರೀಡಾಕೂಟ ಉದ್ಘಾಟನೆ: ಕ್ರೀಡೆಯಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ- ಸುರೇಂದ್ರ ಆಚಾರ್ಯ


ರಾಯಚೂರು,ನ.18- ಕ್ರೀಡೆಯಲ್ಲಿ ಸೋಲು ಗೆಲುವು ಎರಡೂ ಸರ್ವೆ ಸಾಮಾನ್ಯ ಅದನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹಿರಿಯ ಪತ್ರಕರ್ತ ಸುರೇಂದ್ರ ಆಚಾರ್ಯ ಕೊರ್ತಕುಂದ ಹೇಳಿದರು.

ಅವರಿಂದು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾ ಚರಣೆ ನಿಮಿತ್ತವಾಗಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟಸ್ ಗಿಲ್ಡ್ ವತಿಯಿಂದ ಹಮ್ಮಿಕೊಂಡ ಕ್ರಿಕೇಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು,


ಪತ್ರಕರ್ತರು ದಿ‌ನ ನಿತ್ಯದ ಕೆಲಸದ ಒತ್ತಡದ ಮಧ್ಯಯೂ  ಒತ್ತಡ ಕಳೆಯಲು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು, ಹಾಗೂ ಎಲ್ಲಾ ಕ್ಷೇತ್ರದಲ್ಲಿ ಪತ್ರಕರ್ತರು ಮಾಹಿತಿಯನ್ನು ಪಡೆದು ಪರಿಣಿತರಾಗುವುದರ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸಿ ಕ್ರೀಡೆಯಲ್ಲಿ ನಿಯಮಗಳು ಹಾಗೂ ವರದಿಕಾರಿಕೆಯನ್ನು ಮಾಡಲು ಅನುಕೂಲವಾಗಿದೆ ಎಂದು ತಿಳಿಸಿದರು.


ಜಿಲ್ಲಾ  ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಗುರುನಾಥ ಮಾತನಾಡಿ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಪತ್ರಕರ್ತರ ನಡುವೆ ಉತ್ತಮ ಬಾಂಧವ್ಯ ಬೆಳೆಯುತ್ತದೆ, ಕ್ರೀಡಾ ಸ್ಫೂರ್ತಿಯಿಂದ ಬಾಂಧವ್ಯ ಗಟ್ಟಿಗೊಳಿಸುವ ಕೆಲಸ ವಾಗುತ್ತದೆ, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪತ್ರಕರ್ತರ ಸ್ನೇಹವನ್ನು ಹೊಂದುವುದರ ಜೊತೆಗೆ ಕ್ರೀಡೆಯಲ್ಲಿಯೂ ತಮ್ಮ ಪ್ರತಿಭೆ ತೋರಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ  ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಹಿರಿಯ ಪತ್ರಕರ್ತ ವೆಂಕಟಸಿಂಗ್, ರಾಯಚೂರು ರಿಪೋರ್ಟ್ಸ್ ಗಿಲ್ಡ್ ಅಧ್ಯಕ್ಷ ಚನ್ನಬಸವಣ್ಣ, ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಪಾಷಾ ಹಟ್ಟಿ, ರಾಯಚೂರು ರಿಪೋರ್ಟ್ಸ್ ಗಿಲ್ಡ್ ಪ್ರದಾ‌ನ ಕಾರ್ಯದರ್ಶಿ ವಿಜಯ ಕುಮಾರ ಜಾಗಟಗಲ್ ಸೇರಿದಂತೆ ಹಿರಿಯ, ಕಿರಿಯ  ಪತ್ರಕರ್ತರು ಭಾಗವಹಿಸಿದ್ದರು.

Comments

Popular posts from this blog