ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟನೆ: ಪತ್ರಕರ್ತರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು- ಡಿ.ಕೆ. ಕಿಶನರಾವ್
ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟನೆ: ಪತ್ರಕರ್ತರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು- ಡಿ.ಕೆ. ಕಿಶನರಾವ್ ರಾಯಚೂರು,ನ.22- ಪತ್ರಕರ್ತರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತರು ಹಾಗೂ ರಿಪೋರ್ಟರ್ಸ್ ಗಿಲ್ಡ್ ಮಾಜಿ ಅಧ್ಯಕ್ಷರಾದ ಡಿ.ಕೆ. ಕಿಶನರಾವ್ ಹೇಳಿದರು. ಅವರಿಂದು ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟ್ರಸ್ ಗಿಲ್ಡ್ ವತಿಯಿಂದ ಇಂದು ಬೆಳಿಗ್ಗೆ 8 ಗಂಟೆಗೆ ಮಹಾತ್ಮಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ಸದಾ ಸುದ್ದಿ ಸಂಗ್ರಹದಲ್ಲಿ ತೊಡಗಿರುತ್ತಾರೆ ಅವರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳಾದ ವೀರೇಶ ನಾಯಕ ಮಾತನಾಡಿ ನಾನು ಮೂಲತಃ ಪೊಲೀಸ್ ಇಲಾಖೆಯಿಂದ ಬಂದವನು ನಮ್ಮ ಹಾಗೂ ಪತ್ರಕರ್ತರ ನಡುವೆ ಉತ್ತಮ ಬಾಂಧವ್ಯವಿದೆ ನಾವು ಸಮಾಜಕ್ಕಾಗಿ ಕಾರ್ಯನಿರ್ವಹಿಸುತ್ತಿವೆ ಪತ್ರಕರ್ತರು ಸಹ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದರು.
ಹಿರಿಯ ಪತ್ರಕರ್ತ ಬಿ.ವೆಂಕಟಸಿಂಗ್ ಮಾತನಾಡಿ ಪತ್ರಕರ್ತರು ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ ಅವರು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ಚೆನ್ನಬಸವಣ್ಣ ಮಾತನಾಡಿ ಪ್ರತಿ ವರ್ಷ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕ್ರೀಡಾಕೂಟ ಆಯೋಜಿಸುತ್ತಾ ಬರಲಾಗಿದೆ ಈ ಬಾರಿಯೂ ಕ್ರೀಡಾ ಕೂಟ ಆಯೋಜಿಸಿದ್ದು ಪತ್ರಕರ್ತರು ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ ಇದ್ದರು . ನಿರ್ಣಾಯಕರಾಗಿ ಶಿಕ್ಷಕರಾದ ಸುಭಾಷ್ ಪಾಟೀಲ್ ಮತ್ತು ನರಸಿಂಹ (ಒಳಾಂಗಣ ಕ್ರೀಡಾಂಗಣ) ರವರು ಆಗಮಿಸಿದ್ದರು. ಹಿರಿಯ, ಕಿರಿಯ ಪತ್ರಕರ್ತರು ಪಾಲ್ಗೊಂಡಿದ್ದರು .
ಸ್ಥಾನ ಪಡೆದ ತಂಡಗಳು: ಶೆಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಪ್ರಥಮ ಸ್ಥಾನ ನೀಲಕಂಠ ಸ್ವಾಮಿ, ದ್ವಿತೀಯ ಸ್ಥಾನ ದುರ್ಗೇಶ, ತೃತೀಯ ಸ್ಥಾನ ಶ್ರೀ ಕಾಂತ ಸಾವೂರು ಪಡೆದಿದ್ದಾರೆ.
ಡಬಲ್ಸ್ ನಲ್ಲಿ ಪ್ರಥಮ ಸ್ಥಾನ ನೀಲಕಂಠ ಸ್ವಾಮಿ, ಜಯಕುಮಾರ ದೇಸಾಯಿ ಕಾಡ್ಲೂರು, ದ್ವಿತೀಯ ಸ್ಥಾನ ದುರ್ಗೇಶ, ಹನುಮಂತ ಕ್ಯಾಮರಾಮೆನ್, ತೃತೀಯ ಸ್ಥಾನ ಶ್ರೀಕಾಂತ ಸಾವೂರು ,ರಾಮಕೃಷ್ಣ ದಾಸರಿ ಪಡೆದಿದ್ದಾರೆ . ಸಿಂಗಲ್ಸ್ ನಲ್ಲಿ 22 ತಂಡ, ಡಬಲ್ಸ್ ನಲ್ಲಿ 9 ತಂಡಗಳು ಭಾಗವಹಿಸಿ ಕ್ರೀಡಾ ಸ್ಫೂರ್ತಿ ಮೆರೆದರು.🏸🏸🏸🏸🏸🏸🏸🏸🏸🏸🏸🏸







Comments
Post a Comment