ವಿವಿಧೆಡೆ 75 ನೇ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ

 


ವಿವಿಧೆಡೆ 75ನೇ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ                                                         ರಾಯಚೂರು,ಜ.26- ವಿವಿಧೆಡೆ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ‌ ಆಚರಿಸಲಾಯಿತು.                                    ಪತ್ರಿಕಾ ಭವನದಲ್ಲಿ: ನಗರದ ಪತ್ರಿಕಾ ಭವನದಲ್ಲಿ ರಾಯಚೂರು ರಿಪೋರ್ಟ್ರ್ಸ್ ಗಿಲ್ಡ್ ವತಿಯಿಂದ  75ನೇ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣವನ್ನು ರಾಯಚೂರು ರಿಪೋರ್ಟ್ರ್ಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿ ವಿಜಯ ಜಾಗಟಗಲ್ ನೆರವೇರಿಸಿದರು. ರಾಷ್ಟ್ರಗೀತೆ ಮೊಳಗಿತು. ಈ ಸಂದರ್ಭದಲ್ಲಿ ಹಿರಿಯ ಮತ್ತು ಕಿರಿಯ ಪತ್ರಕರ್ತರು ಉಪಸ್ಥಿತರಿದ್ದರು .   

                                                          
ರಾಘವೇಂದ್ರ ವಿದ್ಯಾರ್ಥಿ ನಿಲಯ: ನಗರದ ಶ್ರೀರಾಘವೇಂದ್ರ  ವಿದ್ಯಾರ್ಥಿ ನಿಲಯದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಬ್ರಾಹ್ಮಣ ಸಮಾಜದ ಹಿರಿಯರಾದ ನರಸಿಂಗರಾವ್ ದೇಶಪಾಂಡೆ ನೆರವೇರಿಸಿದರು. ವಿದ್ಯಾರ್ಥಿ ನಿಲಯದ ಪದಾಧಿಕಾರಿಗಳು, ವಿದ್ಯಾರ್ಥಿಗಳಿದ್ದರು.                                                                                                             

 
ಗಧಾರ್ ಗ್ರಾಮ: ತಾಲೂಕಿನ ಗಧಾರ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 75 ನೇಯ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಗ್ರಾಮದ ಮಾಜಿ ಸೈನಿಕ ಜಿ.ಶ್ರೀನಿವಾಸ್ ಅವರು ನೆರವೇರಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯ ಗಣ ತಂತ್ರ ವ್ಯವಸ್ಥೆ ಕುರಿತು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ಮತ್ತು ಗರ್ವ ಇರಬೇಕು. ಇಂತಹ ಗಟ್ಟಿ ವ್ಯವಸ್ಥೆಯಿಂದಾಗಿ ಭಾರತವಿಂದು ವಿಶ್ವ ಗುರುವಾಗುವತ್ತ ದಾಪುಗಾಲು ಹಾಕುತ್ತಿದೆ ಎಂದರು.

 ಇದೇ ಸಂದರ್ಭದಲ್ಲಿ ಮಾಜಿ ಸೈನಿಕ ಜಿ.ಶ್ರೀನಿವಾಸ್ ಅವರನ್ನು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಶಾಲಾ ಮುಖ್ಯ ಗುರುಗಳು ಹಾಗೂ ಊರಿನ ಪ್ರಮುಖರು ಸೇರಿ ಸನ್ಮಾನಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕ್ರೀಡಾ ಚಟುವಟಿಕೆಗಳು ಜರುಗಿದವು. ಕಮಲಾಪುರ್ ಪಂಚಾಯಿತಿ ಅಧ್ಯಕ್ಷರು ,ಸದಸ್ಯರು ಹಾಗೂ ಪಿಡಿಒ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಮಾಡಿದರು.

 ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮೋಹನ್, ಹನುಮಂತಪ್ಪ, ನಾಗರಾಜ್ ನಾಯಕ್, ಸುಜಾತ, ಸುಮಾ, ಮುತ್ತಮ್ಮ, ಗೌರಮ್ಮ, ತ್ರಿವೇಣಿ, ಅಮೃತ, ಶಿವಪ್ಪ ಸ್ವಾಮಿ, ಮಾಂತೇಶ್ ಸ್ವಾಮಿ, ಜಿ.ಶೇಖರ್, ಸಿದ್ದರಾಮಯ್ಯ, ಜಗದೀಶ್, ತಾಯಪ್ಪ, ಭೀಮೇಶ್ ಆಚಾರ್ಯ, ಲಕ್ಷ್ಮಣ, ನರಸಿಂಹಲು ಸೇರಿದಂತೆ ಅನೇಕರಿದ್ದರು.

Comments

Popular posts from this blog