ವೀರ ಸಾವರ್ಕರ್ ಯೂಥ್ ಅಸೋಸಿಯೇಷನ್: ಗಣರಾಜ್ಯೋತ್ಸವ ದಿನಾಚರಣೆ

 


ವೀರ ಸಾವರ್ಕರ್  ಯೂಥ್ ಅಸೋಸಿಯೇಷನ್: ಗಣರಾಜ್ಯೋತ್ಸವ ದಿನಾಚರಣೆ                  ರಾಯಚೂರು,ಜ.26- ವೀರ ಸಾವರ್ಕರ್  ಯೂಥ್ ಅಸೋಸಿಯೇಷನ್ ವತಿಯಿಂದ 75  ನೆಯ ಗಣರಾಜ್ಯೋತ್ಸವವನ್ನು ಮಾವಿನ ಕೆರೆ ಹತ್ತಿರದ  ವೀರ ಸಾವರ್ಕರ್ ಪುತ್ತಳಿ ಬಳಿ  ಆಚರಿಸಲಾಯಿತು.  ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ವಿಜಯ ವಿಠಲ ಆಚಾರ್  ಗಣರಾಜ್ಯೋತ್ಸವ ಉದ್ದೇಶಗಳು ತಿಳಿಸುತ್ತಾ  ಭಾರತೀಯ ಸoವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ 26, 1950 ರಂದು ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.ಭಾರತೀಯ ಸ್ವಾತಂತ್ರ್ಯ ಚಳುವಳಿ, ಜನವರಿ 26, 1929 ರಂದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯವನ್ನು ಗುರಿಯಾಗಿಸಿಕೊಂಡಿತು. ಲಾಹೋರ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಮತ್ತು ದಿನವನ್ನು ಪೂರ್ಣ ಸ್ವರಾಜ್ ದಿನ ಎಂದು ಘೋಷಿಸಲಾಯಿತು. ಈ ಕಾರಣಕ್ಕಾಗಿಯೇ ಭಾರತದ ಸಂವಿಧಾನವನ್ನು ಸ್ವಾತಂತ್ರ್ಯದ ನಂತರ ಈ ದಿನದಂದು ಜಾರಿಗೆ ತರಲಾಯಿತು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸುರೇಶ್ ಬಾಬು  ಹೊಸೂರ್ ಅವರು ಮಾತನಾಡುತ್ತಾ ಗಣರಾಜ್ಯೋತ್ಸವ ದಿನವನ್ನುಇಡೀ ದೇಶವೇ ಸಂಭ್ರಮಿಸುತ್ತದೆ.       ಈ ದಿನವು ದೇಶ ಸ್ವಾತಂತ್ರ್ಯೋತ್ತರ ಗಣರಾಜ್ಯ ದೇಶವಾದ ಐತಿಹಾಸಿಕ ದಿನ ಮತ್ತು ಸಂವಿಧಾನ ಜಾರಿಗೆ ಬಂದ ದಿನವಾಗಿದೆ ಎಂದರು.                ಈ ಕಾರ್ಯಕ್ರಮದಲ್ಲಿ   ಎನ್ ವಿನಾಯಕ ರಾವ್,  ನರೇಶ್  ಕುಮಾರ್,   ಭರತ ತೋರಿಸಿ ,ಶ್ರೀಕಾಂತ್ ಪಟ್ಟಿ ,ವಿಜಯ ರಾಜ, ರಾಘವೇಂದ್ರ ಕಾಣೆ, ಅಂಜಿ, ಗೋವಿಂದ ಪ್ಲಂಬರ್, ಸಂಗಣ್ಣ,  ಪ್ರಭು ಪಾಟೀಲ್ ಸುಲ್ತಾನ್ಪುರ್,  ಮಂಜು ಕೆಇಬಿ, ವೆಂಕಟೇಶ್ ಉಪ್ಪಾರ್, ಶ್ರೀಕಾಂತ ಮಡಿವಾಳ, ನರಸಿಂಹ, ಅನಿಲ್ ಕೋರಿ ಶೆಟ್ಟಿ ,ಅನಂತ ಮೇದಿ ಶೆಟ್ಟಿ ಇನ್ನಿತರರು ಭಾಗವಹಿಸಿದ್ದರು.

Comments

Popular posts from this blog