ರಾಮರಾಜ್ಯ ಕೇವಲ ಮಂದಿರ ಕಟ್ಟುವುದರಿಂದ ಆಗಲ್ಲ-ಡಾ.ಶರಣ ಪ್ರಕಾಶ್ ಪಾಟೀಲ್

 


ರಾಮರಾಜ್ಯ ಕೇವಲ ಮಂದಿರ ಕಟ್ಟುವುದರಿಂದ ಆಗಲ್ಲ- ಡಾ.ಶರಣ ಪ್ರಕಾಶ್ ಪಾಟೀಲ್           
    ರಾಯಚೂರು,ಜ.26- ಮಂದಿರ ಕಟ್ಟುವುದರಿಂದ ರಾಮರಾಜ್ಯ ವಾಗುವುದಿಲ್ಲವೆಂದು ವೈದ್ಯಕೀಯ ಶಿಕ್ಷಣ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದರು.                                  ಅವರಿಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಶೇ.40 ರಷ್ಟು ಭ್ರಷ್ಟಾಚಾರ ಮಾಡಿದ್ದರಿಂದಲೇ ಅವರನ್ನು ಜನರು ತಿರಸ್ಕರಿಸಿದ್ದಾರೆ. ಕೇವಲ ಗುಡಿ ಕಟ್ಟಿದರೆ ಮಾತ್ರ ರಾಮರಾಜ್ಯವಾಗುವುದಿಲ್ಲ ಬದಲಾಗಿ ಉತ್ತಮ ಆಡಳಿತ ನೀಡಿ ಜನರ ಕಷ್ಟ ನಿವಾರಿಸಿ ಮನ್ನಣೆ ಗಳಿಸಿದರೆ ರಾಮರಾಜ್ಯವಾಗುತ್ತದೆ ಎಂದರು.                             ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳಿದ್ದು ಅವರ ವೈಯಕ್ತಿಕ ಅವರಿಗೆ ಕಾಂಗ್ರೆಸ್ ಗೌರವಯುತವಾಗಿ ಎಂಎಲ್ಸಿ ಮಾಡಿತ್ತು ಸೋತರು ಅವರಿಗೆ ಸ್ಥಾನಮಾನ ನೀಡಿತ್ತು ಆದರೂ ಅವರು ಹೋಗಿದ್ದಾರೆ ಇದರಿಂದ ಪಕ್ಷಕ್ಕೆ ನಷ್ಟವಿಲ್ಲ ಪಕ್ಷದಿಂದ ವ್ಯಕ್ತಿಯೇ ಹೊರತು ವ್ಯಕ್ತಿಯಿಂದ ಪಕ್ಷವಲ್ಲ ಎಂದರು. ಜಿಲ್ಲೆಯಲ್ಲಿ ಭ್ರಷ್ಟಾಚಾರ ಕಾನೂನು ಬಾಹಿರ ಕೃತ್ಯ ಸಹಿಸುವುದಿಲ್ಲ ವೆಂದು ಅವರು ಕೋಟೆ ಕೊತ್ತಲ ಮತ್ತು ಸರ್ಕಾರಿ ಜಾಗ  ಕಬಳಿಸಿದವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಅದೇ ರೀತಿ ಐಟಿಐ ಕಾಲೇಜಿಗೆ 23  ಕೋಟಿ ರೂ ವೆಚ್ಚದ ಕಟ್ಟಡ ಮಂಜೂರಿ ಮಾಡಲಾಗುತ್ತದೆ ಎಂದರು.                                                                   ಈ ಸಂದರ್ಭದಲ್ಲಿ ಶಾಸಕ ಬಸನಗೌಡ ದದ್ದಲ್, ಮುಖಂಡರಾದ ಎ.ವಸಂತಕುಮಾರ್, ಮೊಹಮ್ಮದ್ ಶಾಲಂ, ಕೆ.ಶಾಂತಪ್ಪ ಇನ್ನಿತರರು ಇದ್ದರು.

Comments

Popular posts from this blog