ವಾರ್ಡ್ ನಂ 17: ಮತದಾನ ಕೇಂದ್ರಕ್ಕೆ ಶಾಸಕ ಡಾ.ಶಿವರಾಜ ಪಾಟೀಲ್ ಭೇಟಿ : ಬಿಸಿಲಿನ ತಾಪಕ್ಕೆ ಮತದಾರರು ಹೈರಾಣ

 


ವಾರ್ಡ್ ನಂ 17: ಮತದಾನ ಕೇಂದ್ರಕ್ಕೆ ಶಾಸಕ ಡಾ.ಶಿವರಾಜ ಪಾಟೀಲ್ ಭೇಟಿ :                            ಬಿಸಿಲಿನ ತಾಪಕ್ಕೆ ಮತದಾರರು ಹೈರಾಣ                                           ರಾಯಚೂರು ,ಮೇ.7- ನಗರದ ವಾರ್ಡ್ ನಂ.17 ದಲ್ಲಿರುವ ದುಧಿಬೆನ್ ಟಾಕರ್ಸಿ ಮತಗಟ್ಟೆಗೆ ಶಾಸಕ ಡಾ.ಶಿವರಾಜ ಪಾಟೀಲ್ ಭೇಟಿ ನೀಡಿದರು.     ಸರತಿ ಸಾಲಿನಲ್ಲಿ ಮತದಾರರು ಮತದಾನ ಮಾಡುವುದನ್ನು ವೀಕ್ಷಿಸಿದರು ಶಾಸಕರೊಂದಿಗೆ ಭಾವಚಿತ್ರ ತೆಗೆಸಿಕೊಳ್ಳಲು ಯುವಕರು ಮುಂದಾದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.                 

ಸರದಿ ಸಾಲಿನಲ್ಲಿ ನಿಂತು  ಮತದಾನ: ಬಿಸಿಲು ಏರುತ್ತಿದ್ದಂತೆ ಮಂದ ಗತಿಯಲ್ಲಿ ಮತದಾನ ಸಾಗಿದ್ದರು ಕೆಲ ಮತಗಟ್ಟೆಯಲ್ಲಿ ಜನ ಜಂಗುಳಿ ನೆರೆದಿತ್ತು ಬೆಳಿಗ್ಗೆ ಆಗಮಿಸಿದ ಮತದಾರರು ಸರದಿ ಸಾಲಿನಲ್ಲಿ ನಿಂತಿದ್ದರೂ ತಮಗೆ ಇನ್ನು ಮತದಾನ ಮಾಡಲು ವಿಳಂಬವಾಗುತ್ತಿರುವ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದ ಅವರು ಎರೆಡು ಸಾಲು ಮಾಡುವಂತೆ ಮತಗಟ್ಟೆ ಅಧಿಕಾರಿಗಳಿಗೆ ಮನವಿ ಮಾಡಿದರು. ಕೆಲ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಹೆಚ್ಚಿರುವ ಕಾರಣ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಸಮಜಾಯಿಸಿದರು.                                       

ಬಿಗಿ ಭದ್ರತೆ: ಮತಗಟ್ಟೆಗೆ ಕೇಂದ್ರ ಭದ್ರತಾ ಪಡೆ ಸಿಬ್ಬಂದಿಗಳು ಶಸ್ತ್ರ ದೊಂದಿಗೆ ಭದ್ರತೆ ನೀಡುತ್ತಿದ್ದು ಕೆಎಸ್ ಆರ್ ಪಿ ತುಕಡಿ ಸಹ ನಿಯೊಜಿಸಲಾಗಿದೆ.   

ತಂಪು ನೀರಿನ ವ್ಯವಸ್ಥೆ : ಬಿಸಿಲಿನ ಪ್ರಖರತೆ ಅಧಿಕವಾಗಿರುವ ಕಾರಣ ಮತಗಟ್ಟೆ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ, ಮತದಾರರಿಗೆ ತಂಪು ಕುಡಿಯುವ  ನೀರಿನ ವ್ಯವಸ್ಥೆ ಮಾಡಲಾಗಿದ್ದು, ವಿಶಿಷ್ಠ ಚೇತನರಿಗೆ ಗಾಲಿ ಕುರ್ಚಿ ವ್ಯವಸ್ಥೆ ಮಾಡಲಾಗಿದೆ.

Comments

Popular posts from this blog