ಜಿಲ್ಲಾಡಳಿತದಿಂದ ಸರಳ ರೀತಿಯಲ್ಲಿ ಶಂಕರಾಚಾರ್ಯರ ಜಯಂತಿ ಆಚರಣೆ
ಜಿಲ್ಲಾಡಳಿತದಿಂದ ಸರಳ ರೀತಿಯಲ್ಲಿ ಶಂಕರಾಚಾರ್ಯರ ಜಯಂತಿ ಆಚರಣೆ
ರಾಯಚೂರು,ಮೇ.12- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶಂಕರಾಚಾರ್ಯ ಜಯಂತಿಯನ್ನು ಇಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮoದಿರದಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಶಂಕರಾಚಾರ್ಯ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಹಿನ್ನಲೆಯಲ್ಲಿ ಶಂಕರಾಚಾರ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಇಸ್ಮಾಯಿಲ್, ವಿನೋದ ಕುಮಾರ, ಸಮಾಜದ ಮುಖಂಡರಾದ ಕೃಷ್ಣಮೂರ್ತಿ ಹೆಬಸೂರು, ವೇಣುಗೋಪಾಲ, ವಸಂತರತಾವ್, ಹನುಮಂತರಾವ್, ಶ್ರೀಪಾದ ದೇಸಾಯಿ, ಹೇಮಚಂದ್ರ, ಸುಬ್ರಮಣ್ಯ, ಸದಾನಂದ, ರಮಾಕಾಂತ, ಗುರುರಾಜ್, ನಂದೀಶ, ಸತೀಶ, ಗೋಪಾಲ ಜೋಶಿ, ರಮೇಶ ಜೋಶಿ, ಶ್ರೀಧರ, ಮುರುಳಿಧರ ಕುಲಕರ್ಣಿ, ದಂಡಪ್ಪ ಬಿರಾದಾರ, ಗಾಯತ್ರಿ, ಅರುಣಾ, ಜ್ಯೋತಿ, ಸಿಂಧು, ಅಂಜನಾ, ಚೇತನಾ, ಗೌರಿ, ಅಮೃತವಲ್ಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Comments
Post a Comment