ಭದ್ರತಾ ಕೊಠಡಿ ಸೇರಿದ ಮತಯಂತ್ರಗಳು: ಭದ್ರತೆಗಾಗಿ ಸೇನಾ ಪಡೆ ನಿಯೋಜನೆ
ಭದ್ರತಾ ಕೊಠಡಿ ಸೇರಿದ ಮತಯಂತ್ರಗಳು: ಭದ್ರತೆಗಾಗಿ ಸೇನಾ ಪಡೆ ನಿಯೋಜನೆ
ರಾಯಚೂರು,ಮೇ.7-ರಾಯಚೂರು ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ಮತದಾನ ಪ್ರಕ್ರಿಯೆಯು ಮೇ.೭ರಂದು ನಡೆದಿದ್ದು, ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ.೬೪.೧೦ ರಷ್ಟು ಮತದಾನವಾಗಿದೆ. ಈ ನಿಟ್ಟಿನಲ್ಲಿ ಮತದಾನವಾದ ಮತಯಂತ್ರಗಳನ್ನು ರಾಯಚೂರು ನಗರದ ಎಸ್‌ಆರ್‌ಪಿಎಸ್ ಪಿಯು ಕಾಲೇಜಿನ ಭದ್ರತಾ ಕೊಠಡಿಯಲ್ಲಿ(ಸ್ಟಾಂಗ್ ರೂಮ್) ಭದ್ರಪಡಿಸಲಾಗಿದೆ.
ಮೇ.೭ರಂದು ಮತದಾನವಾದ ನಂತರ ವಿವಿಧ ಮತಗಟ್ಟೆಗಳಿಂದ ಮತಯಂತ್ರಗಳನ್ನು ಆಯಾ ಮತದಾನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಟಾçಂಗ್ ರೂಮ್‌ಗಳಿಗೆ ತಂದು ಶೇಖರಿಸಿದ್ದಾರೆ. ಮತಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸಿದ ನಂತರ ಕೊಠಡಿಯ ಬಾಗಿಲನ್ನು ಭದ್ರಪಡಿಸಲಾಗಿದೆ ಮತ್ತು ಭದ್ರತೆಗಾಗಿ ಸೇನಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಭದ್ರತಾ ಕೊಠಡಿಗಳ ಸುತ್ತಲೂ ಕಲಂ ೧೪೪ ನಿಷೇದಾಜ್ಞೆ ಜಾರಿ: ಮೇ.೭ರ ಸಂಜೆ ೬:೦೦ ಗಂಟೆಯಿoದ ಮತದಾನ ಎಣಿಕೆ ಕಾರ್ಯ ಮುಕ್ತಾಯವಾಗುವವರೆಗೆ ಸುತ್ತಮುತ್ತಲು ೨೦೦ ಮೀಟರ್ ಸುತ್ತುವರೆದ ಪ್ರದೇಶ ವ್ಯಾಪ್ತಿಯಲ್ಲಿ ಯಾವುದೇ ಅಹತಕರ ಘಟನೆಗಳಿಗೆ ಆಸ್ಪದವಾಗದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಮುಂಜಾಗೃತಾ ಕ್ರಮವಾಗಿ ದಂಡ ಪ್ರಕ್ರಿಯೆ ಸಂಹಿತೆ ೧೯೭೩ರ ಕಲಂ ೧೪೪ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಆದೇಶ ಹೊರಡಿಸಿದ್ದಾರೆ.
.jpg)
.jpg)
Comments
Post a Comment