ದಾಸ ಸಾಹಿತ್ಯವನ್ನು ಬೆಳೆಸಿದ ಮಹನೀಯರು ಶ್ರೀ ಮೋಹನ ದಾಸರು- ಮುರಳಿಧರ ಕುಲಕರ್ಣಿ
ದಾಸ ಸಾಹಿತ್ಯವನ್ನು ಬೆಳೆಸಿದ ಮಹನೀಯರು ಶ್ರೀ ಮೋಹನ ದಾಸರು- ಮುರಳಿಧರ ಕುಲಕರ್ಣಿ
ರಾಯಚೂರು,ಜೂ.14- ದಾಸ ಶ್ರೇಷ್ಠರಾದ ಶ್ರೀ ವಿಜಯದಾಸರ ನೇರ ಶಿಷ್ಯರಾಗಿ ದಾಸ ಸಾಹಿತ್ಯದ ಪರಂಪರೆಯನ್ನು ಬೆಳೆಸಿದ ಮಹನೀಯರೇ ಮೋಹನದಾಸರು ಎಂದು ಶ್ರುತಿ ಸಾಹಿತ್ಯ ಮೇಳದ ಅದ್ಯಕ್ಷ ಮುರಳಿಧರ ಕುಲಕರ್ಣಿ ಅವರು ಹೇಳಿದರು.
ಅವರು ನಿನ್ನೆ ಸಂಜೆ ನಗರದ ಜವಾಹರ ನಗರ ಬಡಾವಣೆಯಲ್ಲಿರುವ ಶ್ರೀ ಬಯಲು ಆಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಂಡ ಶ್ರೀ ಮೋಹನ ದಾಸರ ಪೂರ್ವಾ ರಾಧನೆಯ ಕಾರ್ಯಕ್ರಮದಲ್ಲಿಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಆನೆಗುಂದಿಯಲ್ಲಿದ್ದ ಭೀಮಪ್ಪ ನಾಯಕ ಆಭರಣ ವ್ಯಾಪಾರಿ ಆಗಿದ್ದ ಸಾಕಷ್ಟು ಹಣವನ್ನು ಸಹ ಗಳಿಸಿದ್ದ ಕೆಲವು ಪರಿಸ್ಥಿತಿಗೆ ಅನುಗುಣವಾಗಿ ತುಂಬಾ ನಷ್ಟವನ್ನು ಅನುಭವಿಸಿದನು. ಅತಿಯಾದ ಬಡತನ, ಅವಮಾನ, ಸಂಕಷ್ಟಗಳನ್ನು ತಾಳಲಾರದೆ ಭೀಮಪ್ಪ ನಾಯಕನ ಪತ್ನಿ ತನ್ನ ಅನಾರೋಗ್ಯ ಪೀಡಿತ ಮಗುವಿನೊಡನೆ ಹಂಪಿಯ ಬಳಿ ಇರುವ ಚಕ್ರತೀರ್ಥ ದಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಳ್ಳವ ಸಂದರ್ಭದಲ್ಲಿ ಅಲ್ಲೇ ಧ್ಯಾನಕ್ಕೆ ಕುಳಿತಿದ್ದ ಶ್ರೀ ವಿಜಯದಾಸರು ಇದನ್ನು ನೋಡಿ ತಾಯಿಗೆ ಬುದ್ಧಿವಾದವನ್ನು ಹೇಳಿ ಅವರನ್ನು ರಕ್ಷಿಸಿದರು. ನಂತರ ಅವರ ಪರಿಸ್ಥಿತಿಯನ್ನು ಅರಿತು ಅನಾರೋಗ್ಯ ಪೀಡಿತ ಮಗುವನ್ನು ಅಲ್ಲೇ ದತ್ತಕ್ಕೆ ತೆಗೆದುಕೊಂಡು,ಆ ತಾಯಿಯನ್ನು ತಂಗಿಯಾಗಿ ಸ್ವೀಕಾರ ಮಾಡಿದರು.
ನಂತರ ಮಗುವನ್ನು ಸಂಸ್ಕಾರವಂತರನ್ನಾಗಿ ಬೆಳೆಸಿ ದಾಸ ದೀಕ್ಷೆಯನ್ನು ನೀಡಿ ಮೋಹನ ವಿಠ್ಠಲ ಎಂಬ ಅಂಕಿತವನ್ನು ಪ್ರಧಾನ ಮಾಡಿದರು.
ನಂತರ ಇವರೇ ಮೋಹನ ದಾಸರಾಗಿ ದಾಸ ಸಾಹಿತ್ಯದ ಪರಂಪರೆಯನ್ನು ಬೆಳೆಸಿದರು. ಇವರು 40ಕ್ಕೆ ಹೆಚ್ಚು ಸಂಕೀರ್ತನೆಗಳನ್ನು ಮೂರು ಸುಳಾಧಿಗಳನ್ನು, ಎರಡು ಉಗಾಭೋಗಗಳನ್ನು 217 ನುಡಿಯ ಒಂದು ಕೋಲು ಪದವನ್ನು ರಚಿಸಿ ದಾಸ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆಯನ್ನು ನೀಡಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂತ್ರಾಲಯ ಮಠದ ವಿಭಾಗೀಯ ವ್ಯವಸ್ಥಾಪಕರಾದ ಸೇತು ಮಾಧವ ಕನಕವೀಡು ಮಾತನಾಡಿ ಬಯಲು ಆಂಜನೇಯ ದೇವಸ್ಥಾನದಲ್ಲಿ ನಿರಂತರವಾಗಿ ದಾಸ ಸಾಹಿತ್ಯದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಅದೇ ರೀತಿ ಇದೆ ದೇವಸ್ಥಾನದಲ್ಲಿ ಯತಿಗಳ ಪರಂಪರೆಯ ಆರಾಧನೆಯನ್ನು ಮಾಡಲು ಸಲಹೆಯನ್ನು ನೀಡಿದರು.
ಪತ್ರಕರ್ತ ಜಯಕುಮಾರ್ ದೇಸಾಯಿ ಕಾಡ್ಲೂರು ಮಾತನಾಡಿ ಶ್ರೀ ಮೋಹನ ದಾಸರ ಕೃತಿಗಳು ಭಕ್ತಿರಸದಿಂದ ಒಳಗೊಂಡಿದೆ ಇವರು ರಚಿಸಿದ ಹಲವಾರು ಕೀರ್ತನೆಗಳನ್ನು ಇಂದು ಭಜನಾ ಮಂಡಳಿಗಳು ಹಾಡುತ್ತಿರುವುದು ವಿಶೇಷವಾಗಿದೆ ಇವರು ರಚಿಸಿದ ತಾರಮ್ಮಯ್ಯ ಯತಿಕುಲ ಚಂದಿರನ.... ಎಂಬ ಕೀರ್ತನೆಯು ತುಂಬಾ ಪ್ರಸಿದ್ಧಿಯನ್ನು ಪಡೆದಿದೆ ಎಂದು ಹೇಳಿದರು. ಸಮಾಜದ ಅಂಕು ಡೊಂಕು ತಿದ್ದಿದ ದಾಸರ ಬಗ್ಗೆ ಯುವ ಪೀಳಿಗೆ ಅರಿತುಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಅರ್ಚಕರಾದ ಶ್ರೀಧರಾಚಾರ್ಯ ಮುಂಗ್ಲಿ ಉದ್ಘಾಟಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಸುರೇಶ್ ಕಲ್ಲೂರ್, ರತ್ನ ಕಲ್ಲೂರ್, ಇಂದಿರಾ ಬಾಯಿ ಸಂಗಮ್ ಹಾಗೂ ಭಜನಾ ಮಂಡಳಿಗಳ ವತಿಯಿಂದ ದಾಸವಾಣಿ ಜರುಗಿತು.
ಕಾರ್ಯಕ್ರಮದಲ್ಲಿ ಪ್ರಸನ್ನ ಅಲಂಪಲ್ಲಿ,, ಕೊಪ್ರೇಶ್ ದೇಸಾಯಿ, ಕೊಪ್ರೇಶ್ ಸೋದೆಗಾರ್, ಕೃಷ್ಣಮೂರ್ತಿ, ಪ್ರಕಾಶ್ ಹುಣಸಿಗಿ, ಭಜನಾ ಮಂಡಳಿಯ ಸದಸ್ಯರುಗಳು, ಮುಂತಾದವರು ಉಪಸ್ಥಿತರಿದ್ದರು.





Comments
Post a Comment