ಹೆಲ್ಮಟ್ ಧರಿಸದೆ ವಾಹನಗಳನ್ನು ಚಲಾಯಿಸಿದ್ದಲ್ಲಿ ಕಾನೂನು ಕ್ರಮ - ಎಸ್ಪಿ ಪುಟ್ಟಮಾದಯ್ಯ
ರಾಯಚೂರು,ಅ.31- ರಾಯಚೂರು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ರಸ್ತೆ ಅಪಘಾತಗಳು ಸಂಭವಿಸಿ, ಚಾಲಕರು, ಪ್ರಯಾಣಿಕರು, ಪಾದಚಾರಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಲ್ಲದೇ ಭಾರೀ ಪ್ರಮಾಣದ ಗಾಯಗಳಾಗಿ ದೂರುಗಳು ದಾಖಲಾಗಿದ್ದು, ಸುಗಮ ಸಂಚಾರಕ್ಕಾಗಿ ಇದೇ ನ.01ರಿಂದ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಒಂದು ವೇಳೆ ಹೆಲ್ಮೆಟ್ ಧರಿಸದೇ ವಾಹನಗಳನ್ನು ಚಲಾಯಿಸಿದ್ದಲ್ಲಿ ಕಟ್ಟುನಿಟ್ಟಾಗಿ ಕಾನೂನು ಕ್ರಮವನ್ನು ಜಗಿಸಲಾಗುವುದೆಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಎಂ.ಪುಟ್ಟಮಾದ್ಯಯ್ಯ ಅವರು ತಿಳಿಸಿದ್ದಾರೆ.
ಸಾರ್ವಜನಿಕರ ಅಮೂಲ್ಯವಾದ ಜೀವವನ್ನು ರಕ್ಷಿಸುವ ಹಿತದೃಷ್ಟಿಯಿಂದ ರಾಯಚೂರು ಜಿಲ್ಲೆಯದ್ಯಾಂತ್ಯ ಕಡ್ಡಾಯವಾಗಿ ಹೆಲ್ಮೇಟ್ ಧರಿಸುವಂತೆ ಸಾರ್ವಜನಿಕರ ಗಮನಕ್ಕೆ ತರಲಾಗಿದೆ. ಒಂದು ವೇಳೆ ಹೆಲ್ಮೆಟ್ ಧರಿಸದೇ ವಾಹನಗಳನ್ನು ಚಲಾಯಿಸಿದ್ದಲ್ಲಿ ಕಟ್ಟುನಿಟ್ಟಾಗಿ ಕಾನೂನು ಕ್ರಮವನ್ನು ಜಗಿಸಲಾಗುವುದು. ಜಿಲ್ಲೆಯ ನಾಗರೀಕರಿಗೆ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಬಗ್ಗೆ ಚಾಲಕರಿಗೆ/ ಪ್ರಯಾಣಿಕರಿಗೆ ಜಾಹಿರಾತುಗಳ ಮೂಲಕ ಮತ್ತು ಪೊಲೀಸರು ಸಂಬಂಧಿಸಿದ ಗಸ್ತಿನಲ್ಲಿ ಸಭೆ ಮಾಡುವ ಮೂಲಕ ಜಾಗೃತಿ ಮೂಡಿಸಲಾಗಿದೆ.
ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಚಾಲಕರ ಮೇಲೆ ಐ.ಎಂ.ವಿ ಕಾಯಿದೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದು, ಹಾಗೂ ಪ್ರಮುಖ ರಸ್ತೆಗಳಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಹಾಗೂ ಅಪಘಾತಗಳು ಹೆಚ್ಚಾಗಿ ಜರುಗುವಂತಹ ಸ್ಥಳಗಳನ್ನು ಗುರುತಿಸಿ ಅಲ್ಲಿ ಚಾಲಕರು ಜಾಗೂರುಕತೆಯಿಂದ ವಾಹನಗಳನ್ನು ಚಲಾಯಿಸುವಂತೆ ಸೂಚನಾ ಫಲಕಗಳನ್ನು ಅಳವಡಿಸಿದ್ದರೂ ಸಹ ಚಾಲಕರು ನಿರ್ಲಕ್ಷ್ಯತೆಯಿಂದ ಚಲಾಯಿಸುತ್ತಿರುವುದರಿಂದ, ಎಲ್ಲಾ ಪೊಲೀಸ್ ಸಭೆ ಸಮಾರಂಭಗಳಲ್ಲಿ, ಸಂಚಾರ ನಿಯಮಗಳ ಕುರಿತು ಹಮ್ಮಿಕೊಂಡ ಸಭೆಗಳಲ್ಲಿ ವಿಶೇಷವಾಗಿ ಹೆಲ್ಮೆಟ್ ಧರಿಸಲು ತಿಳಿಸಿದರೂ ಸಹ ದ್ವಿಚಕ್ರ ವಾಹನ ಚಲಾಯಿಸುವಂತಹ ಪ್ರಯಾಣಿಕರು ಅದನ್ನು ಪಾಲಿಸದೇ ಅಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಅಪಘಾತಗಳು ಸಂಭವಿಸಿ ಸಾವು-ನೋವುಗಳು ಸಂಭವಿಸುತ್ತಿರುವುದು ವರದಿಯಾಗುತ್ತಿದೆ.
ಸುಗಮ ಸಂಚಾರಕ್ಕಾಗಿ ಹಾಗೂ ಸಾರ್ವಜನಿಕರ ಅಮೂಲ್ಯವಾದ ಜೀವವನ್ನು ರಕ್ಷಿಸುವ ಹಿತದೃಷ್ಟಿಯಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಸಾರ್ವಜನಿಕರ ಗಮನಕ್ಕೆ ತರಲಾಗಿದೆ. ಒಂದು ವೇಳೆ ಹೆಲ್ಮೆಟ್ ಧರಿಸದೇ ವಾಹನಗಳನ್ನು ಚಲಾಯಿಸಿದ್ದಲ್ಲಿ ಕಟ್ಟುನಿಟ್ಟಾಗಿ ಕಾನೂನು ಕ್ರಮವನ್ನು ಜಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments
Post a Comment