ದೀಪಾವಳಿ: ಪಟಾಕಿ ಮಾರಾಟಕ್ಕೆ ಅಣಿಯಾಗುತ್ತಿರುವ ಮಳಿಗೆಗಳು. ರಾಯಚೂರು,ಅ.27- ಬೆಳಕಿನ ಹಬ್ಬ ದೀಪಾವಳಿಗೆ ಕೆಲವೆ ದಿನಗಳು ಬಾಕಿಯಿದ್ದು ಪಟಾಕಿಯಿರದ ದೀಪಾವಳಿ ಊಹಿಸಲು ಅಸಾಧ್ಯ ಈ ಹಿನ್ನೆಲೆಯಲ್ಲಿ ಪಟಾಕಿ ಮಾರಾಟಕ್ಕೆ ಮಳಿಗೆಗಳ ಸ್ಥಾಪನೆ ಕಾರ್ಯ ಚುರುಕು ಪಡೆದಿದೆ.
ನಗರದ ಬಸವೇಶ್ವರ ವೃತ್ತದ ವಾಲ್ ಕಟ್ ಮೈದಾನದಲ್ಲಿ ಪಟಾಕಿ ಮಳಿಗೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಸುಮಾರು ಮೂವತ್ತಕ್ಕೂ ಹೆಚ್ಚು ಮಳಿಗೆಗಳ ನಿರ್ಮಾಣವಾಗುತ್ತಿದ್ದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗಳ ಮಾರ್ಗಸೂಚಿಯಂತೆ
ಮಾರಾಟಕ್ಕೆ ಅವಕಾಶ ನೀಡಲಾಗಿದ್ದು ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪಟಾಕಿ ಮಾರಾಟ ನಡೆಯಲಿದೆ.



Comments
Post a Comment