
ಮಾನವ ಕುಲಕ್ಕೆ ಸ್ಪೂರ್ತಿ ತುಂಬಿದ ಭಕ್ತಿ ಪಂಥದ ಮಹಾ ಚೇತನ ಶ್ರೀ ಪುರಂದರ ದಾಸರು- ಮುರಳಿಧರ ಕುಲಕರ್ಣಿ ಜಯಧ್ವಜ ನ್ಯೂಸ್ , ರಾಯಚೂರು, ಜ.29- ಮಾನವ ಜನ್ಮ ದೊಡ್ಡದು ಅದನ್ನು ಹಾನಿ ಮಾಡಲು ಬೇಡ ಹುಚ್ಚಪ್ಪ ಗಳಿರಾ ! ಎಂದು ಸಾರುತ್ತ ಮೂಲಭೂತವಾಗಿ ಮಾನವ ಧರ್ಮ ಮಾನವೀಯತೆಗಳ ಸಾಹಿತ್ಯವನ್ನು ನೀಡಿ ಮನಕುಲಕ್ಕೆ ಹೊಸ ಸ್ಪೂರ್ತಿಯನ್ನು ತುಂಬಿದ ದಾಸರೆ ಪುರಂದರದಾಸರು ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿಯವರು ಅವರು ಹೇಳಿದರು. ಅವರು ನಗರದ ಜವಾಹರ ನಗರ ಬಯಲು ಆಂಜನೇಯ ದೇವಸ್ಥಾನದಲ್ಲಿ ಬುದುವಾರ ಸಂಜೆ ಜರುಗಿದ ಶ್ರೀ ಪುರಂದರ ದಾಸರ ಮಧ್ಯರಾಧನೆಯ ಕಾರ್ಯಕ್ರಮದಲ್ಲಿ ಮಾತ ನಾಡಿದರು. ಈಸಬೇಕು ಇದ್ದು ಜಯಿಸಬೇಕು, ಎಂದು ಆತ್ಮಸ್ಥೈರ್ಯವನ್ನು ತುಂಬುತ್ತಾ, ಸಾಲ ಮಾಡಲಿ ಬೇಡ ಸಾಲದೆಂದೆನ ಬೇಡ, ಸಂಸಾರವೆಂಬ ಸೌಭಾಗ್ಯ ನನಗಿರಲಿ ಎಂಬ ಸಾಮಾಜಿಕ ಮೌಲ್ಯವನ್ನು ಬಿತ್ತಿದರು. ಅದೇ ರೀತಿ ಸಮಾಜದಲ್ಲಿರುವ ಹಲವಾರು ಅಂಕುಡೊಂಕುಗಳನ್ನು ಎದೆಗಾರಿಕೆಯಿಂದ ಖಂಡಿಸಿದ ಮಹಾನುಭಾವರು ಶ್ರೀ ಪುರಂದರ ದಾಸರು ಎಂದ ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗಮಕಲಾ ಪರಿಷತ್ತಿನ ಅಧ್ಯಕ್ಷರಾದ ವೆಂಕಟರಾವ್...