ಮಂತ್ರಾಲಯ:  ಶ್ರೀ  ಸುಬುಧೇಂದ್ರತೀರ್ಥರಿಂದ ಚಾತುರ್ಮಾಸ್ಯ ದೀಕ್ಷೆ ಸಂಕಲ್ಪ                                        ಜಯ‌ಧ್ವಜ ನ್ಯೂಸ್, ರಾಯಚೂರು,ಜು.22- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಂದ 13 ನೇ ಚಾತುರ್ಮಾಸ್ಯ ದೀಕ್ಷೆ ಸಂಕಲ್ಪ ಕೈಗೊಳ್ಳಲಾಯಿತು.

ಬೆಳಿಗ್ಗೆ ಶ್ರೀ ಮಠದಲ್ಲಿ ಪೀಠಾಧಿಪತಿಗಳು ಚಾತುರ್ಮಾಸ್ಯ ದೀಕ್ಷೆಯ ವಿಧಿ ವಿಧಾನ ಕೈಗೊಂಡರು. ಶ್ರೀ ರಾಘವೇಂದ್ರ  ಸ್ವಾಮಿಗಳ ಮತ್ತು ಶ್ರೀ 
ವಾದೀಂದ್ರತೀರ್ಥರ ಮತ್ತು ಪರಂಪರೆಯ  ಯತಿಗಳ ಬೃಂದಾವನಗಳಿಗೆ ವಿಶೇಷ ಪೂಜೆ ನೆರವೇರಿದವು.

ಚಾತುರ್ಮಾಸ್ಯ ಅಂಗವಾಗಿ ದಿನ ನಿತ್ಯ‌ ಶ್ರೀಮಠದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


  

Comments

Popular posts from this blog