ಮಾವಿನಕೆರೆಗೆ ಜಿಲ್ಲಾಧಿಕಾರಿಗಳು, ಪಾಲಿಕೆಯ ಆಯುಕ್ತರು ಭೇಟಿ
ಜಯ ಧ್ವಜ ನ್ಯೂಸ್ ,ರಾಯಚೂರು, ಜು.22- ನಗರದ ಐತಿಹಾಸಿಕ ಮಾವಿನಕೆರೆ ಪ್ರದೇಶಕ್ಕೆ ಜಿಲ್ಲಾಧಿಕಾರಿಗಳಾದ ನಿತೀಶ್ . ಕೆ ಹಾಗೂ ಮಹಾನಗರ ಪಾಲಿಕೆಯು ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು. ನಂತರ ಕೆರೆ ಅಭಿವೃದ್ಧಿ ಕಾಮಗಾರಿಯ ವೀಕ್ಷಣೆ ನಡೆಸಿದರು. ಮಾವಿನಕೆರೆಗೆ ಬೇರೆ ಬೇರೆ ಕಡೆಗಳಿಂದ ಚರಂಡಿ ನೀರು ಹರಿದು ಬಂದು ಕೆರೆಯ ನೀರು ಕಲುಷಿತವಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿರುವ ಹಿನ್ನೆಲೆಯಲ್ಲಿ ಚರಂಡಿ ನೀರು ಕೆರೆಗೆ ಹರಿಯದೇ ಬೇರೆಡೆ ಹರಿಸುವ ಬಗ್ಗೆ ಇದೆ ವೇಳೆ ಚರ್ಚಿಸಲಾಯಿತು.
ಸಾರ್ವಜನಿಕರು ಕೆರೆಗೆ ಕಸ ಮತ್ತು ಪ್ಲಾಸ್ಟಿಕ್ ಎಸೆಯದಂತೆ ಕೆರೆಯ ಸುತ್ತಲು ಕಾವಲು ವ್ಯವಸ್ಥೆಯನ್ನು ಸಿಬ್ಬಂದಿಯ ಮೂಲಕ ಖಾಯಂಗೊಳಿಸುವುದರ ಬಗ್ಗೆ ಸಹ ಇದೆ ವೇಳೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಇನ್ನಿತರರು ಇದ್ದರು.


Comments
Post a Comment