ಜು.26 ರಂದು ಕಲ್ಯಾಣ ಕರ್ನಾಟಕ ಬ್ರಾಹ್ಮಣರ ಹಬ್ಬ: ಪ್ರತಿಭೋತ್ಸವ ಹಾಗೂ ವಿಪ್ರ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ - ಜಗನ್ನಾಥ ಕುಲಕರ್ಣಿ. ಜಯ ಧ್ವಜ ನ್ಯೂಸ್, ರಾಯಚೂರು,ಜು.24- ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ರಾಯಚೂರು ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ಜು.26 ರಂದು ನಗರದಲ್ಲಿ ಕಲ್ಯಾಣ ಕರ್ನಾಟಕದ ಬ್ರಾಹ್ಮಣರ ಹಬ್ಬ ಹಾಗೂ ಪ್ರತಿಭೋತ್ಸವ ಮತ್ತು ವಿಪ್ರ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಹಾಗೂ ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಿಭಾಗೀಯ ಅಧ್ಯಕ್ಷ ಜಗನ್ನಾಥ ಕುಲಕರ್ಣಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜು.26 ರಂದು ಸಂಜೆ 5ಕ್ಕೆ ನಗರದ ಗಾಜಗಾರ್ ಪೇಟೆಯ ಶೃಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮ ಉದ್ಘಾಟನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಎಸ್.ರಘುನಾಥ ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಜಗನ್ನಾಥ ಕುಲಕರ್ಣಿ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಸಂಸದ ಜಿ.ಕುಮಾರ ನಾಯಕ, ಶಾಸಕರಾದ ಡಾಶಿವರಾಜ ಪಾಟೀಲ್, ಮಾನಪ್ಪ ವಜ್ಜಲ್, ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ್,ಮಾಜಿ ಶಾಸಕರಾದ ಎ.ಪಾಪಾರೆಡ್ಡಿ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.70 ರಷ್ಟು ಅಂಕ ಪಡೆದ ಸುಮಾರು 110 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ರೂಪವಾಗಿ ಒಂದು ಸಾವಿರ ರೂ.ನಗದು, ಪ್ರಮಾಣಪತ್ರ ನೀಡಲಾಗುತ್ತಿದೆ ಎಂದ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಧಾಕರಾದ ಡಾ.ಶೇಷಗಿರಿ ದಾಸ್ ರಾಯಚೂರು, ಛಾಯಾ ದೇವಗಾಂವಕರ್, ರಾಘವೇಂದ್ರರಾವ್ ಮುತಾಲಿಕ್, ಹರೀಶ್ ಆಚಾರ ಕೊಪ್ಪರ, ಮಧೂಸೂಧನ್ ಹವಾಲ್ದಾರ್, ಡಾ.ಪ್ರದೀಪ ಕುಲಕರ್ಣಿ, ಹನುಮೇಶಾಚಾರ್ ಅರ್ಷಿಣಗಿ, ಸುರೇಂದ್ರ ರಾವ್ ನಂದಗಿರಿ, ಹನುಮೇಶ ಕುಲಕರ್ಣಿ ಬಳಗಾನೂರು, ಬಿ.ನರಸಿಂಗರಾವ್ ಕೋಟೆ, ಡಾ.ರಾಜಶ್ರೀ ಕಲ್ಲೂರಕರ್, ಮನೋಹರ್ ರಾವ್ ಕುಲಕರ್ಣಿ,ಎಂ.ವಿ.ಮೋಹನ್ ರವರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದರು. ಆರ್ಥಿಕವಾಗಿ ಹಿಂದುಳಿದ ವಿಪ್ರ ಸಮಾಜದ ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ಪ್ರಮಾಣ ಪತ್ರ ನೀಡುವ ವಿಷಯದಲ್ಲಿ ವಿಳಂಬತೆಯಾಗುತ್ತಿದ್ದು ಈ ಬಗ್ಗೆ ಸರ್ಕಾರಕ್ಕೆ ನ್ಯೂನ್ಯತೆ ಸರಿಪಡಿಸಲು ಒತ್ತಾಯಿಸಲಾಗಿದೆ ಎಂದ ಅವರು ತಾವು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕರಾಗಿದ್ದ ವೇಳೆ ಸುಮಾರು 350 ಜನರಿಗೆ ಇಡ್ಬ್ಲೂಎಸ್ ಪ್ರಮಾಣ ಪತ್ರ ದೊರಕಿಸಿಕೊಟ್ಟಿದ್ದೇವೆಂದರು. ಸರ್ಕಾರದಿಂದ ಅಭಿವೃದ್ಧಿ ಮಂಡಳಿಗೆ ಅನುದಾನ ಕಡಿತವಾಗಿದ್ದು ಈ ಬಗ್ಗೆ ಮುಖ್ಯಮಂತ್ರಿಗಳು ಅನುದಾನ ಒದಗಿಸಿ ಆರ್ಥಿಕವಾಗಿ ಹಿಂದುಳಿದ ವಿಪ್ರರ ಶ್ರೇಯೋಭಿವೃದ್ಧಿಗಾಗಿ ಹೆಜ್ಜೆಯಿರಸಬೇಕೆಂದರು. ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘಟನೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದೊಂದಿಗೆ ಬೆರೆತಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಪ್ರ ಸಮಾಜದ ಸಂಘಟನೆ ಆದ್ಯತೆ ದೃಷ್ಟಿಯಿಂದ ಕೆಕೆ ಬಿಎಂಎಸ್ ಹುಟ್ಟು ಹಾಕಲಾಗಿದೆ ಎಂದರು. ಎಕೆಬಿಎಂಎಸ್ ನೂತನ ಅಧ್ಯಕ್ಷರು ಬ್ರಾಹ್ಮಣ ಜನಾಂಗದ ಸಾಮಾಜಿಕ,ಶೈಕ್ಷಣಿಕ, ಆರ್ಥಿಕ, ಪ್ರಗತಿಗಾಗಿ ಅಕ್ಷಯ ನಿಧಿ ಸ್ಥಾಪಿಸುವ ನಿಟ್ಟಿನಲ್ಲಿ ಸುಮಾರು 100 ಕೋಟಿ ರೂ.ಯೋಜನೆ ಸಿದ್ಧಪಡಿಸಿದ್ದು ಪ್ರತಿ ಜಿಲ್ಲೆಯಿಂದ ಸಮಾಜದ ದಾನಿಗಳು ಇದಕ್ಕೆ ಒಂದು ಲಕ್ಷ ರೂ.ಧನ ಸಹಾಯ ಮಾಡಲಿದ್ದಾರೆಂದು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷರಾದ ಗುರುರಾಜ ಆಚಾರ್ಯ ಜೋಷಿ ತಾಳಿಕೋಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಆಲಂಪಲ್ಲಿ, ನಗರ ಅಧ್ಯಕ್ಷ ಗೋಪಾಲಕೃಷ್ಣ ತಟ್ಟಿ, ವಿಪ್ರ ಶ್ರೀ ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಹನುಮಂತ ರಾವ್ ಕಲ್ಲೂರಕರ್ ಇದ್ದರು.



Comments
Post a Comment