ಶೃತಿ ಸಾಹಿತ್ಯ ಮೇಳದಿಂದ ಕುವೆಂಪು ಹಾಗು ಸಿ. ಅಶ್ವತ್ ಅವರ ಜನ್ಮದಿನಾಚರಣೆ
:                                       ಕುವೆಂಪು ಅವರು ಜಗದ ಕವಿ ಯುಗದ ಕವಿಯಾಗಿದ್ದಾರೆ - ಜಯಲಕ್ಷ್ಮಿ ಮಂಗಳಮೂರ್ತಿ
.                         ಜಯ ಧ್ವಜ ನ್ಯೂಸ್ , ರಾಯಚೂರು, ಡಿ.29- ಶೃತಿ ಸಾಹಿತ್ಯ ಮೇಳದಿಂದ ಕುವೆಂಪು ಹಾಗು ಸಿ. ಅಶ್ವತ್ ಅವರ ಜನ್ಮದಿನಾಚರಣೆ ಆಚರಿಸಲಾಯಿತು.

 ನಗರದ ಸಾಹಿತ್ಯಾತ್ಮಕ ಮತ್ತು ಸಾಂಸ್ಕೃತಿಕ ಸಂಘಟನೆಯಾದ ಶ್ರುತಿ ಸಾಹಿತ್ಯ ಮೇಳದಿಂದ ರಾಷ್ಟ್ರಕವಿ ಕುವೆಂಪು,  ಹಾಗೂ ಖ್ಯಾತ ಗಾಯಕ ಸಿ ಅಶ್ವತ್ ಅವರ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಇಂದು ಸೋಮವಾರ ಸಂಜೆ ರಾಯಚೂರು ನಗರದ ಜವಾಹರ ನಗರ ಪ್ರೌಢಶಾಲೆ  ಆವರಣದಲ್ಲಿ ಆಚರಿಸಲಾಯಿತು. 


    ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಹಿರಿಯ ಸಾಹಿತಿಗಳು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಕಾರ್ಯಕ್ರಮವನ್ನು ಉದ್ಘಾಟಿಸಿ "ಕುವೆಂಪು ಅವರು ಜಗದ ಕವಿಯಾಗಿದ್ದಾರೆ, ಯುಗದ ಕವಿಯಾಗಿದ್ದಾರೆ, ಮನುಜ ಮತವನ್ನು ಸಾರಿದ ಜಗತ್ತಿನ ಶ್ರೇಷ್ಠ


ತತ್ವಜ್ಞಾನಿ,ಕವಿ, ಸಾಹಿತಿ,  ವಿಮರ್ಶಕರಾಗಿ ಕನ್ನಡ ಸಾಹಿತ್ಯವನ್ನು ಹಿಮಾಲಯದ ಎತ್ತರಕ್ಕೆ ಬೆಳೆಸಿದ ಕೀರ್ತಿ ಅವರದಾಗಿದೆ ಎಂದು ಹೇಳಿದರು. ಅವರ ರಾಮಾಯಣ ದರ್ಶನಂ ಜ್ಞಾನಪೀಠ ಪ್ರಶಸ್ತಿ ಉಳಿದ ಜ್ಞಾನಪೀಠ ಪ್ರಶಸ್ತಿಗಳ ಕೃತಿಗಳಿಗೆ ಭದ್ರ ಬುನಾದಿ ಯಾಗಿದೆ.ಎಂದು ಹೇಳಿದರು.

   


ಈ ಸಂದರ್ಭದಲ್ಲಿ ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಮಾತನಾಡಿ ಸಿ .ಅಶ್ವತ್ ಅವರು ನಾಡಿನ ಶ್ರೇಷ್ಠ ಗಾನ ಗಾರುಡಿಗರಾಗಿದ್ದಾರೆ. ಶೃತಿ ಸಾಹಿತ್ಯ ಮೇಳದಿಂದ 1993 94 ರಲ್ಲಿ ಆಯೋಜಿಸಿದ14ನೇ ವಾರ್ಷಿಕೋತ್ಸವದಲ್ಲಿ ಖ್ಯಾತ ಗಾಯಕ ಸಿ. ಅಶ್ವತ್ಥರವರ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಿ ಲಾಗಿತ್ತು.

ಅಂದು ಸಿ .ಅಶ್ವತ್ ಅವರು ಸಂತ ಶಿಶುನಾಳ ಶರೀಫರ ಗೀತೆಗಳನ್ನು ತಮ್ಮ  ಸುಶ್ರಾವ್ಯ ದನಿಯಲ್ಲಿ ಹಾಡಿ 

ಪ್ರೇಕ್ಷಕರಿಗೆ ಹುಚ್ಚೆಬ್ಬಿಸಿದ ಘಟನೆಯನ್ನು ಈ ಸಂದರ್ಭದಲ್ಲಿ  ನೆನಪು ಮಾಡಿಕೊಂಡರು. ಸಿ ಅಶ್ವತ್ ಅವರ ಹಾಡಿದ ಪ್ರತಿಯೊಂದು ಗೀತೆಗಳು ಇಂದಿಗೂ ಕನ್ನಡದ ಜನತೆಯ ಹೃದಯವನ್ನು ತಲುಪಿದೆ.ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಕಾರ್ಯಕ್ರಮದ ಮೂಲಕ ಮನೆ ಮಾತಾಗಿದ್ಧರು. ಎಂದು ಹೇಳಿದರು.

 


ಈ ಸಂದರ್ಭದಲ್ಲಿ ಪತ್ರಕರ್ತ ಜಯಕುಮಾರ್ ದೇಸಾಯಿ ಕಾಡ್ಲೂರುರವರು ಮಾತನಾಡಿ ಕುವೆಂಪು ಅವರು ರಚಿಸಿದ ಒಂದೊಂದು ಕಾವ್ಯ ಮತ್ತು ಗ್ರಂಥಗಳು ಕನ್ನಡ ಸಾಹಿತ್ಯದ ಹಿರಿಮೆಯಾಗಿವೆ. 

ವಿಶ್ವವೇ ನಮ್ಮ ಕುಟುಂಬ ಎಂಬ ಪರಿಕಲ್ಪನೆಯನ್ನು ತಂದು ಇಂದು ವಿಶ್ವಮಾನವ ದಿನಾಚರಣೆಯನ್ನು ಆಚರಿಸುವ ಹಾಗೆ ಮಾಡಿದಂತಹ ಶ್ರೇಷ್ಠ ಕವಿ ಕುವೆಂಪು ಅವರಾಗಿದ್ದಾರೆ. ಹಾಗೂ ಸಿ .ಅಶ್ವತ್ ಅವರು ಸಂಗೀತ ನಿರ್ದೇಶನದ ಎಲ್ಲ ಚಿತ್ರಗಳ ಹಾಡುಗಳು ಅತ್ಯಂತ ಯಶಸ್ವಿ ಹಾಗೂ ಸುಮಧುರ ಗೀತೆಗಳಾಗಿವೆ, ಎಂದು ಹೇಳಿದರು. 


  ಈ ಸಂದರ್ಭದಲ್ಲಿ ರವೀಂದ್ರ ಕುಲಕರ್ಣಿ ಅವರು ಮಾತನಾಡಿ ಶ್ರುತಿ ಸಾಹಿತ್ಯ ಮೇಳದ ಕಾರ್ಯ ತುಂಬಾ ಶ್ಲಾಘನೀಯವಾಗಿದೆ. 

ಸತತ 38 ವರ್ಷಗಳಿಂದ ನಿರಂತರವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಹಿತ್ಯ ಮತ್ತು ಸಂಗೀತ ,ಸಾಂಸ್ಕೃತಿಕ ಸೇವೆ ಮಾಡುತ್ತಾ  ಬಂದಿರುವ ಶ್ರುತಿ ಸಾಹಿತ್ಯ ಮಳಕ್ಕೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕೆಂದು  ಹೇಳಿದರು. 

   ಕಾರ್ಯಕ್ರಮದಲ್ಲಿ ಶೃತಿ ಸಾಹಿತ್ಯ ಮೇಳ ದ ಪ್ರಧಾನ ಕಾರ್ಯದರ್ಶಿ ಬ್ರಾಹ್ಮಣ ಸಮಾಜದ ಜಿಲ್ಲಾ ಚುನಾಯಿತ ಪ್ರತಿನಿಧಿ ರಮೇಶ್ ಕುಲಕರ್ಣಿ 

ಹಾಗೂ ಬ್ರಾಹ್ಮಣ ಸಮಾಜದ ಮುಖಂಡರಾದ ಪ್ರಸನ್ನ ಆಲಂಪಲ್ಲಿ ಅವರು ಕುವೆಂಪು ಹಾಗೂ  ಸಿ.ಅಶ್ವತ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮಾಡಿ ಪೂಜೆ ಸಲ್ಲಿಸಿದರು. 


   ಮೊದಲಿಗೆ ರವೀಂದ್ರ ಕುಲಕರ್ಣಿ ಅವರು ಪ್ರಾರ್ಥನೆಯನ್ನು ಮಾಡಿದರು. ಜೆ.ಎಂ. ವೀರೇಶ್ ಕಾರ್ಯದರ್ಶಿಗಳು  ಸ್ವಾಗತಿಸಿದರು. 

  ಈ ಸಂದರ್ಭದಲ್ಲಿ ನರಸಿಂಹಮೂರ್ತಿ ಕುಲಕರ್ಣಿ, ರಾಘವೇಂದ್ರ ಜಾಗೀರ್ದಾರ್, ನಾಗರತ್ನ ಕಲ್ಲೂರ್, ಇಂದಿರಾ ಬಾಯಿ ಸಂಗಮ್ , ಪಿ ವೆಂಕಟೇಶ್ ಬಾಗಲವಾಡ ಮುಂತಾದ ಶ್ರುತಿ ಸಾಹಿತ್ಯ ಮೇಳದ ಸದಸ್ಯರು ಭಾಗವಹಿಸಿದ್ದರು.

Comments

Popular posts from this blog