ಮಂತ್ರಾಲಯ: ವೈಕುಂಠ ಏಕಾದಶಿ ಪ್ರಯುಕ್ತ ಪುರಾತನ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ದ್ವಾರ ಮೂಲಕ ದರ್ಶನ. ಜಯ ಧ್ವಜ ನ್ಯೂಸ್, ರಾಯಚೂರು, ಡಿ.30- ಮಂತ್ರಾಲಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವೈಕುಂಠ ದ್ವಾರ ಮೂಲಕ ಭಕ್ತರು ದೇವರ ದರ್ಶನ ಪಡೆದರು. ರಾಘವೇಂದ್ರ ಸ್ವಾಮಿಗಳು ವೆಂಕಟೇಶ್ ದೇವರನ್ನು ಸ್ಥಾಪಿಸಿದ ಪುರಾತನ ದೇವಸ್ಥಾನದಲ್ಲಿ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ತುಳಸಿ ಮತ್ತು ಪುಷ್ಪ ಅರ್ಚನೆ ಹಾಗೂ ಮಂಗಳಾರತಿ ನೆರವೇರಿಸಿದರು.
ವಿಶೇಷವಾಗಿ ನಿರ್ಮಿಸಿದ ವೈಕುಂಠ ದ್ವಾರ ಮೂಲಕ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದು ಕೃತಾರ್ಥರಾದರು.


Comments
Post a Comment