ವಾಲ್ಮೀಕಿ ನಾಯಕ ಸಮುದಾಯದ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು- ರಘುವೀರ್ ನಾಯಕ

ಜಯ ಧ್ವಜ ನ್ಯೂಸ್ , ರಾಯಚೂರು, ಡಿ.29- ಕರ್ನಾಟಕದಲ್ಲಿ ಸುಮಾರು ೭೦ ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಮತ್ತು ೧೫ ಮೀಸಲು ಕ್ಷೇತ್ರಗಳ ಪೈಕಿ ಸುಮಾರು ೧೪ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷದಿಂದ ಗೆದ್ದಿರುವ ಹಾಗೂ ೩ ಸಾಮಾನ್ಯ ಕ್ಷೇತ್ರಗಳ ಪೈಕಿ ೧ರಲ್ಲಿ ಕಾಂಗ್ರೇಸ್ ಪಕ್ಷದಿಂದ ಗೆದ್ದಿರುವ ವಾಲ್ಮೀಕಿ ನಾಯಕ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು  ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ರಘುವೀರ್ ನಾಯಕ ಒತ್ತಾಯಿಸಿದರು . ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ  ಕಳೆದ ಸುಮಾರು ೨ ವರ್ಷಗಳಿಂದ ಪರಿಶಿಷ್ಠ ವರ್ಗಗಳ ಇಲಾಖೆಗೆ ಸಚಿವ ಸ್ಥಾನವನ್ನು ಯಾವ ಶಾಸಕರಿಗೂ ನೀಡದೇ ಮಾನ್ಯ ಮುಖ್ಯಮಂತ್ರಿಗಳು ತಮ್ಮಲ್ಲಿಯೇ ಇಟ್ಟುಕೊಂಡಿರುವುದರಿಂದ ನಿರಿಕ್ಷೀತ ಪ್ರಮಾಣದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲವೆಂದರು

ನಿಗದಿತ ಸಮಯದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ತಲುಪುತ್ತಿಲ್ಲ, ಪ್ರೈಸ್ ಮನಿ ನೆನಗುದಿಗೆ ಬಿದ್ದಿದೆ. ಜಿಲ್ಲೆಯಲ್ಲಿ ಅನೇಕ ವಾಲ್ಮೀಕಿ ಭವನಗಳು ಅನುದಾನದ ಕೊರತೆಯಿಂದ ನೆನಗುದಿಗೆ ಬಿದ್ದಿದೆ. ವಸತಿ ನಿಲಯಗಳಿಗೆ ಮೂಲಸೌಕರ್ಯಗಳಿಲ್ಲ. ಬೆಡ್ ಮತ್ತು ಮಂಚಗಳು ನಗರದಲ್ಲಿ ಮೇಟ್ರೀಕ ಪೂರ್ವ ಬಾಲಕರ ವಸತಿನಿಲಯದಲ್ಲಿ ಇಲ್ಲ. ವೃತ್ತಿಪರ ಬಾಲಕಿಯರ ವಸತಿ ನಿಲಯದಲ್ಲಿಯೂ ಸೌಕರ್ಯಗಳು ಇಲ್ಲವೆಂದು ದೂರಿದರು.. 

ಸಾಕಷ್ಟ ವರ್ಷಗಳಿಂದ ಇಲಾಖೆಯಲ್ಲಿ ನೇಮಕಾತಿಯಾಗಿಲ್ಲ, ಇಡೀ ಜಿಲ್ಲೆಗೆ ಕೇವಲ ಒಂದೇ ಒಂದು ಏಕಲವ್ಯ ವಸತಿ ಶಾಲೆ ಇದೆ.  ತಾಲೂಕಿಗೆ ಒಂದರಂತೆ ಸುಮಾರು ೭ ಏಕಲವ್ಯ ವಸತಿ ಶಾಲೆಗಳು ಆಗಬೇಕು,  ಜಿಲ್ಲೆಯಲ್ಲಿ ಕೇವಲ ೩ ಆಶ್ರಮ ಶಾಲೆಗಳು ಇವೆ. ಎಲ್ಲಾ ತಾಲೂಕಿಗೆ ಒಂದರಂತೆ ಸುಮಾರು ೭ ಆಶ್ರಮ ಶಾಲೆಗಳು ಆಗಬೇಕು. ಪ್ರತಿಷ್ಠಿತ ಶಾಲೆಗಳ ದಾಖಲಾತಿ ಮಿತಿ ಜಿಲ್ಲೆಗೆ ಕೇವಲ ೬೩ ಗುರಿ ಇದೆ,  ದಾಖಲಾತಿ ಗುರಿ ಸುಮಾರು ೨೦೦ ಆಗಬೇಕು. ಮತ್ತು ರಾಯಚೂರು ನಗರದಲ್ಲಿ ಒಂದೇ ಒಂದು ಪ್ರತಿಷ್ಠಿತ ಶಾಲೆ ನೊಂದಣಿ ಯಾಗದಿರುವುದು ಸರಕಾರದ ನಿರ್ಲಕ್ಷ್ಯ ಕ್ಕೆ ಕನ್ನಡಿಯಾಗಿದೆ. ಇದು ಕೇವಲ ಒಂದು ಜಿಲ್ಲೆಯ ಸಮಸ್ಯೆಯಾದರೆ ಇಡೀ ರಾಜ್ಯಾದ್ಯಾದಂತ ಅನೇಕ ಸಮಸ್ಯೆಗಳಿವೆ ಎಂದರು.


ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದಿರುವ ಸಹಕಾರ ಸಚಿವರ ಸ್ಥಾನವನ್ನು ಸಹ ಹಿಂಪಡೆದ ನಂತರ ಪುನಃ ಕೆ.ಎನ್. ರಾಜಣ್ಣ ಅವರಿಗೆ ಗೌರವಯುತವಾದ ಸ್ಥಾನಮಾನ ನೀಡಿಲ್ಲ. ಅದ್ದರಿಂದ ಕೂಡಲೇ ಮುಂದೆ ನಡೆಯುವ ಸಚಿವ ಸಂಪುಟ ವಿಸ್ತರಣೆ ಮತ್ತು ಪುನರ್ ರಚನೆಯಲ್ಲಿ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಲ್ಲಿ ಗೆದ್ದಿರುವ ವಾಲ್ಮೀಕಿ ನಾಯಕ ಸಮುದಾಯದ ಶಾಸಕರ ಪೈಕಿ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಮತ್ತು ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದಿರುವ ವಾಲ್ಮೀಕಿ ಸಮುದಾಯದ ಹಿರಿಯ ನಾಯಕರಾದ ಕೆ.ಎನ್. ರಾಜಣ್ಣ ಸಚಿವ ಸ್ಥಾನ ನೀಡಬೇಕು ಎಂದು ಈ ಮೂಲಕ ವಾಲ್ಮೀಕಿ ಸಮಾಜದಿಂದ ಒತ್ತಾಯಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ನಾಯಕ, ರಮೇಶ ನಾಯಕ, ರಾಮು ನಾಯಕ, ನರೇಂದ್ರ ನಾಯಕ, ಬೋಳಬಂಡಿ ಇದ್ದರು.

Comments

Popular posts from this blog