ಭರದಿಂದ ಸಾಗಿರುವ ಕೃಷ್ಣಾ ಬ್ರಿಡ್ಜ್  ಕಾಮಗಾರಿ ಸ್ವಾಗತಾರ್ಹ: ಡಾ.ಬಾಬುರಾವ್

ಜಯ ಧ್ವಜ ನ್ಯೂಸ್ ,ರಾಯಚೂರು, ಫೆ.17- ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳನ್ನು ಸಂಪರ್ಕಿಸುವ ಬಹುದೊಡ್ಡ ಸೇತುವೆಯ ಬಾಕಿ ಇರುವ ಕಾಮಗಾರಿ ಜೂನ್ ತಿಂಗಳೊಳಗೆ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ ಎಂದು   ಎಪಿಎಂಸಿ ಮಾಜಿ ಉಪಾಧ್ಯಕ್ಷ ಹಾಗೂ ಸಮಾಜ ಸೇವಕ ಡಾ.ಬಾಬುರಾವ್ ತಿಳಿಸಿದ್ದಾರೆ. 

ಟೆಂಡರ್ ಪ್ರಕಾರ ಈ ಕಾಮಗಾರಿ ನವೆಂಬರ್ 6, 2021 ರಂದು ಪ್ರಾರಂಭವಾಗಿ 2025ರ  ಅಕ್ಟೋಬರದೊಳಗೆ ಪೂರ್ಣಗೊಳಿಸಬೇಕಾಗಿತ್ತು.  ಆಮೆಗತಿಯಲ್ಲಿರುವ ಕಾಮಗಾರಿಗೆ ವೇಗ ಕಲ್ಪಿಸಬೇಕೆಂದು ಸಂಬಂಧಪಟ್ಟವರಿಗೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಈಗ ಬ್ರಿಡ್ಜ್ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ದ್ವಿಪಥ ಸೇತುವೆ ಕಾಮಗಾರಿ 2026ರ ಜೂನ್ ತಿಂಗಳೊಳಗೆ ಪೂರ್ಣಗೊಂಡು ಸಂಚಾರಕ್ಕೆ ಮುಕ್ತಗೊಂಡ ನಂತರ ಅದಕ್ಕೆ ಹೊಂದಿಕೊಂಡಂತೆ ಮತ್ತೊಂದು  ದ್ವಿಪಥ ಸೇತುವೆ ಕಾಮಗಾರಿಯನ್ನು 2027 ರಲ್ಲಿ 150 ಕೋಟಿ ರೂ.ವೆಚ್ಚದಲ್ಲಿ ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.


ಎರಡು ರಾಜ್ಯಗಳಿಂದ ಜನ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಕ್ಕೆ ಇದೇ ಬ್ರಿಡ್ಜ್ ನ್ನು ಉಪಯೋಗಿಸುತ್ತಿರುವುದರಿಂದ ಈಗ ಬ್ರಿಡ್ಜ್ ನ್ನು ಚತುಷ್ಪಥ ಸೇತುವೆಯ ನಿರ್ಮಾಣ ಕ್ಕೆ ಮುಂದಾಗಿರುವ ಕೇಂದ್ರ ಸಾರಿಗೆ ಮಂತ್ರಿ ನಿತಿನ್ ಗಡ್ಕರಿ ಹಾಗೂ ಹೆದ್ದಾರಿ ಪ್ರಾಧಿಕಾರದ ‌ಕಾರ್ಯ ಸ್ತುತ್ಯಾರ್ಹವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments

Popular posts from this blog