ಒಳ ಮೀಸಲಾತಿ ಉಪವರ್ಗೀಕರಣ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಮನವಿ.                                                          ಜಯ ಧ್ವಜ ನ್ಯೂಸ್ , ರಾಯಚೂರು, ಫೆ.18- ಒಳ ಮೀಸಲಾತಿ ಗೊಂದಲ ನಿವಾರಿಸಿ ಉಪ ವರ್ಗಿಕರಣ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕೆಂದು ರಾಜ್ಯ ಬಲಗೈ ಜಾತಿಗಳ ಒಕ್ಕೂಟ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ. ಒಳ ಮೀಸಲಾತಿ ವರ್ಗಿಕರಣ ಗೊಂದಲಗಳು ನಿವಾರಣೆ ಮಾಡಿ ಹೊಸದಾಗಿ ರೋಷ್ಟರ್ ರಚಿಸಿ ಮೀಸಲಾತಿಯನ್ನು ಜಾರಿಗೆ ತಂದು ಉದ್ಯೋಗ ಮತ್ತು ಶಿಕ್ಷಣದಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ರವೀಂದ್ರ ನಾಥ್ ಪಟ್ಟಿ, ನರಸಿಂಹಲು ನೆಲಹಾಳ , ರಾಜು ಪಟ್ಟಿ ಚಂದ್ರಶೇಖರ ವಕೀಲ, ಭಾಸ್ಕರ್ ರಾಜ್, ಕೆ.ಪರಶುರಾಮ, ಎಂ.ಈರಣ್ಣ ಡಿಎಸ್ ಎಸ್ ಇನ್ನಿತರರು ಇದ್ದರು.

Comments

Popular posts from this blog