ಯರಗೇರ ಶಾದಿ ಮಹಲ್ ಗಾಗಿ ಒಂದು ಕೋಟಿ ರೂ. ಮಂಜೂರು: ಅಲ್ಪಸಂಖ್ಯಾತರ ಮುಖಂಡರಿಂದ ಶಾಸಕರಿಗೆ ಸನ್ಮಾನ

ಜಯ ಧ್ವಜ ನ್ಯೂಸ್ ,ರಾಯಚೂರು,ಫೆ.21- ಜಿಲ್ಲೆಯ ರಾಯಚೂರು ತಾಲೂಕಿನ ಯರಗೇರಾ ಗ್ರಾಮದಲ್ಲಿ ಅಲ್ಪಸಂಖ್ಯಾತರ ಇಲಾಖೆಯಿಂದ ಸುಮಾರು ಒಂದು ಕೋಟಿ ರೂಪಾಯಿ ಹಣವನ್ನು ಶಾದಿ ಮಹಲ್ ಸಲುವಾಗಿ ಮಂಜೂರು ಮಾಡಲು ಗ್ರಾಮೀಣ ಜನಪ್ರಿಯ ಶಾಸಕರು ಮತ್ತು ಅಧ್ಯಕ್ಷರು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಬಸನಗೌಡ ದದಲ್  ಯಶಸ್ವಿಯಾಗಿರುತ್ತಾರೆ  .


ಈ ವಿಷಯವನ್ನು ತಿಳಿದು ಯರಗೇರಾ ಮತ್ತು ಸುತ್ತಮುತ್ತಲಿನ ಭಾಗದ ಅಲ್ಪಸಂಖ್ಯಾತರ ಮುಖಂಡರಿಗೆ ಸಂತಸದ ವಿಷಯವಾಗಿದೆ ಮತ್ತು ಮುಂದಿನ ದಿನಗಳಲ್ಲಿ ಭೂಮಿ ಪೂಜೆ ಮಾಡುವ ಬಗ್ಗೆ ಈಗಾಗಲೇ ಆಶ್ವಾಸನೆ ನೀಡಿರುತ್ತಾರೆ.

ಡಿಸೆಂಬರ್ ತಿಂಗಳಲ್ಲಿ ಯರಗೇರ ಗ್ರಾಮಕ್ಕೆ ಹಜರತ್ ಬಡೇಸಾಹೇಬ್ ಉರುಸಿಗೆ ಆಗಮಿಸಿದ ವೇಳೆ 

ಕೊಟ್ಟ ಮಾತಿಗೆ ತಕ್ಕಂತೆ ಕೇವಲ ಒಂದು ತಿಂಗಳಲ್ಲಿ ಹಣ ಮಂಜೂರು ಮಾಡಿಸಿದ  ಶಾಸಕರು ಎಂದು ಮುಖಂಡರು ಶ್ಲಾಘಿಸಿದರು .


ಈ ಹಿನ್ನೆಲೆಯಲ್ಲಿ ಯರಗೇರಾ ಗ್ರಾಮದ ಅಲ್ಪಸಂಖ್ಯಾತ ಮುಖಂಡರು ಗ್ರಾಮೀಣ ಶಾಸಕರ ಕಚೇರಿಯಲ್ಲಿ ಶಾಸಕರಿಗೆ ಸನ್ಮಾನಿಸಿ ಸಿಹಿ ತಿನ್ನಿಸುವ ಮೂಲಕ ಅಭಿನಂದಿಸಿ ಗೌರವಿಸಿದರು.

 ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರು ಗ್ರಾಮಸ್ಥರು ಯುವ ನಾಯಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Comments

Popular posts from this blog