ವಾಲ್ಮೀಕಿ ವಿವಿಯಲ್ಲಿ ಸೂಕ್ಷ್ಮ ಜೀವಶಾಸ್ತ್ರ, ಸಸ್ಯಶಾಸ್ತ್ರಹಾಗೂ ಪ್ರಾಣಿಶಾಸ್ತ್ರ ವಿಭಾಗಗಳ ವತಿಯಿಂದ ವಿಶೇಷ ಉಪನ್ಯಾಸ: ಸುಸ್ಥಿರ ಭವಿಷ್ಯಕ್ಕಾಗಿ ಜೀವವೈವಿಧ್ಯತೆ ಸಂರಕ್ಷಣೆ ಅತ್ಯಗತ್ಯ : ಮಂಜುನಾಥ ಎಸ್ ನಾಯಕ
ಜಯಧ್ವಜ ನ್ಯೂಸ್ ,ರಾಯಚೂರು,ಫೆ.೨೬-
ಸುಸ್ಥಿರ ಭವಿಷ್ಯಕ್ಕಾಗಿ ಅರಣ್ಯ ಜೀವವೈವಿಧ್ಯತೆ ಸಂಶೋಧನೆ ಮತ್ತು ಸಂರಕ್ಷಣೆಯು ಪರಿಸರ ಸಮತೋಲನ, ಮತ್ತು ಹವಾಮಾನ ಬದಲಾವಣೆ ತಗ್ಗಿಸುವಿಕೆ ಮತ್ತು ಸ್ಥಳೀಯ ಸಮುದಾಯಗಳ ಸೂಕ್ಷö್ಮಜೀವಿಗಳು, ಕೀಟಗಳು, ಔಷಧೀಯ ಸಸ್ಯಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜೀವವೈವಿಧ್ಯತೆಯ ಸಂಶೋಧನೆಕಾರರಾದ ಮಂಜುನಾಥ ಎಸ್ ನಾಯಕ ಅವರು ಹೇಳಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸೂಕ್ಷö್ಮಜೀವಶಾಸ್ತç, ಸಸ್ಯಶಾಸ್ತç ಹಾಗೂ ಪ್ರಾಣಿಶಾಸ್ತç ವಿಭಾಗಗಳು ಇಂದು ಆಯೋಜಿಸಿದ್ದ “ಫಾರೆಸ್ಟ್ ಬಯೋಡೈವರ್‌ಸಿಟಿ : ರಿಸರ್ಚ್ ಆ್ಯಂಡ್ ಕನಜರ್‌ವೇಷನ್ ಫಾರ್ ಎ ಸಸ್ಟೆನೇಬಲ್ ಫ್ಯುಚರ್” ವಿಷಯ ಕುರಿತು ಮಾತನಾಡಿದ ಅವರು, ಅವರ ಸಂಶೋಧನೆಯ ಪ್ರಮುಖ ಸಾಧನೆ ಮತ್ತು ಸಂಶೋಧನೆಯಲ್ಲಿ ಅನುಭವಿಸಿದ ವಿಚಾರವನ್ನು ವ್ಯಕ್ತಪಡಿಸಿದರು. ಹೊಸ ಪ್ರಭೇದಗಳನ್ನು ಗುರುತಿಸುವುದು ಮತ್ತು ಅವುಗಳ ಪರಿಸರ ಪಾತ್ರವನ್ನು ಅರ್ಥಮಾಡಿಕೊಳ್ಳುವುದರ ಬಗ್ಗೆ ವಿವರವಾಗಿ ತಿಳಿಸಿ, ಅವರು ಸಂಶೋಧಿಸಿದ ವಿಶೇಷ ಪ್ರಭೇದದ ಏಡಿ(ಘಟಿಯಾನ ದೃತಿ) ಬಗ್ಗೆ ವಿವರವಾಗಿ ತಿಳಿಸಿದರು.
ಕಾಲೇಜು ಅಭೀವೃದ್ಧಿ ಮಂಡಳಿ ಮತ್ತು ಲೈಫ್ ಸೈನ್ಸ್ ವಿಭಾಗಗಳ ಮುಖ್ಯಸ್ಥರು ಡಾ.ಸುಯಮೀಂದ್ರ.ಎಸ್.ಕುಲಕರ್ಣಿ, ಉಪಕುಲಸಚಿವರಾದ ಡಾ.ಕೆ.ವೆಂಕಟೇಶ್, ನಿಕಾಯಗಳ ಡೀನರಾದ ಪ್ರೊ.ಪಾರ್ವತಿ.ಸಿ.ಎಸ್., ಡಾ.ಲತಾ.ಎಂ.ಎಸ್., ಮತ್ತು ಸೂಕ್ಷö್ಮಜೀವಶಾಸ್ತ್ರ, ಸಸ್ಯಶಾಸ್ತ್ರ ಹಾಗೂ ಪ್ರಾಣಿಶಾಸ್ತç ವಿಭಾಗಗಳ ಸಂಯೋಜಕರು ಹಾಗೂ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು, ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.
ಸೂಕ್ಷö್ಮಜೀವಶಾಸ್ತç ವಿಭಾಗದ ವಿದ್ಯಾರ್ಥಿಗಳಾದ ಪೂರ್ವಿರಾಜ್ ಪ್ರಾರ್ಥಿಸಿದರು, ಅಮೃತಾ ಎಂ. ನಿರೂಪಿಸಿದರು, ಓಂಪ್ರಕಾಶ ದ್ರವೆ ಅತಿಥಿಗಳನ್ನು ಪರಿಚಯಿಸಿದರು, ಪ್ರಾಣಿಶಾಸ್ತç ವಿಭಾಗದ ಬುಶ್ರ ಸ್ವಾಗತಿಸಿದರು, ಸಸ್ಯಶಾಸ್ತç ವಿಭಾಗದ ಸೈಯದಾ ಆಯಿಶ ವಂದಿಸಿದರು.


Comments
Post a Comment