ಬಿಜೆಪಿ ಯುವ ಮೋರ್ಚಾದಿಂದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ: ರಾಹುಲ್ ಗಾಂಧಿ ಪ್ರತಿಕೃತಿ ದಹಿಸಿ ಬಿಜೆಪಿ ಪ್ರತಿಭಟನೆ:
ಜಯ ಧ್ವಜ ನ್ಯೂಸ್ , ರಾಯಚೂರು, ಫೆ.21- ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ನಗರದ ಶಾಸಕರಾದ ಡಾ. ಶಿವರಾಜ ಪಾಟೀಲ ಮತ್ತು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ವಿನಾಯಕ ರಾವ್ ನೇತೃತ್ವದಲ್ಲಿ ರಾಹುಲ್ ಗಾಂಧಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿ ಜಿಲ್ಲಾ ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನ ನಡೆಯಿತು.
ವಿಶ್ವ ಎಐ ಸಮಿಟ್ ನಲ್ಲಿ ಯುವ ಕಾಂಗ್ರೆಸ್ ನಡೆಸಿದ ಧಾoಧಲೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯ ಮುತ್ತಿಗೆ ನಡೆಸುವುದರ ಮೂಲಕ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ವಿಶ್ವ ಎಐ ಸಮಿಟ್ ನಲ್ಲಿ ನಡೆಸಿದ ಧಾoಧಲೇ ವಿರುದ್ಧ ಘೋಷಣೆ ಕೂಗಿ ಜಗತ್ತಿನ ಮುಂದೆ ಭಾರತದ ಮಾನ ಕಳೆದ ಹೀನ ಕೃತ್ಯವನ್ನು ಖಂಡಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಸಂತೋಷ ರಾಜಗುರು, ರವೀಂದ್ರ ಜಲ್ದಾರ , ಜಿಲ್ಲಾ ವಕ್ತಾರರಾದ ಸಿದ್ದನಗೌಡ ನೆಲಹಾಳ ರಾಘವೇಂದ್ರ ಉಟ್ಕೂರು,
ಬಿಜೆಪಿ ನಗರ ಅಧ್ಯಕ್ಷರು ಎಸ್.ಸಿ ಮೊರ್ಚಾ ಜಿಲ್ಲಾದ್ಯಕ್ಷರಾದ ಪಿ.ಯಲ್ಲಪ್ಪ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಜಿ.ವಿಜಯರಾಜೇಶ್ವರಿ, ಶರಣಮ್ಮ ಕಾಮರೆಡ್ಡಿ, ಸುಲೋಚನಾ ನಾಗವೇಣಿ ನಗರ ಅಧ್ಯಕ್ಷರು ಮಹಿಳಾ ಮೊರ್ಚಾ. ಮಾಜಿ ಆರ್ ಡಿ ಎ ಅಧ್ಯಕ್ಷರಾದ ಅಂಜೀನೇಯ ಕಡಗೋಲ, ನಾಗರಾಜ, ನರಸರೆಡ್ಡಿ, ಯಲ್ಲಪ್ಪ ಪಿರಂಗಿ, ಭೀಮರೆಡ್ಡಿ, ಶಿವಕುಮಾರ ಪೊಲೀಸ ಪಾಟೀಲ, ರವಿ ಮೀರಪುರ, ಕಾರ್ತೀಕ ರೆಡ್ಡಿ, ಚಂದ್ರಶೇಖರ ಮಡಿವಾಳ ಸೇರಿದಂತೆ ಪ್ರಮುಖ ಮುಖಂಡರು, ಯುವ ಕಾರ್ಯಕರ್ತರು ಭಾಗವಹಿಸಿದ್ದರು..




Comments
Post a Comment