ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ 

ಜಯ ಧ್ವಜ ನ್ಯೂಸ್, ರಾಯಚೂರು ,ಫೆ.23- ಭಾರತೀಯ ವೈದ್ಯಕೀಯ ಮಹಿಳಾ ಸಂಘ, ಐಎಮ್ ಎ ರಾಯಚೂರು ಹಾಗೂ ಬ್ರಹ್ಮಕುಮಾರೀಸ್ ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ   ಗಿಡಕ್ಕೆ ನೀರು ಎರೆಯುವುದರ ಮೂಲಕ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.


 ವೇದಿಕೆ ಮೇಲೆ ಸರ್ಕಾರಿ ಮಹಿಳಾ ನೌಕರರ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಯಶೋಧ, ಜಮಾತೆ ಇಸ್ಲಾಂ ಮಹಿಳಾ ಘಟಕದ ಪದಾಧಿಕಾರಿಗಳಾದ ಶ್ರೀಮತಿ ಶಹನಾಜ್, ಭಾರತೀಯ ವೈದ್ಯಕೀಯ ಸಂಘ ಮಹಿಳಾ ಘಟಕದ ಅಧ್ಯಕ್ಷರಾದ ಡಾ. ಶ್ರೀಲತಾ ಕಾಮತ್, ಉಪಾಧ್ಯಕ್ಷರಾದ ಡಾ. ಪ್ರಿಯ ಬಾಲ್ಕಿ ಜಂಟಿ ಕಾರ್ಯದರ್ಶಿಗಳಾದ ಡಾ. ಶಿಲ್ಪ ನಾಗಲಾಪುರ್ ಇವರುಗಳು ಭಾಗವಹಿಸಿದ್ದರು. ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜಯೋಗಿನಿ ಬಿ. ಕೆ. ಸ್ಮಿತಾ ಅಕ್ಕನವರು ವಹಿಸಿದ್ದರು.


              ಶ್ರೀಮತಿ ವಿಜಯಲಕ್ಷ್ಮಿ, ಸರಕಾರಿ ಮಹಿಳಾ ನೌಕರರ ಒಕ್ಕೂಟದ ಜಿಲ್ಲಾ ಅಧ್ಯಕ್ಷರು ಅವರು ಮಾತನಾಡುತ್ತಾ ಸರ್ಕಾರಿ ಮಹಿಳಾ ನೌಕರರಿಗೆ ಅನೇಕ ಒತ್ತಡಗಳು ಇವುಗಳಿಂದ ಅನೇಕ ಕಾಯಿಲೆಗಳು ಬರುತ್ತವೆ ಇಂತಹ ಕಾರ್ಯಕ್ರಮಗಳಿಂದ ಅವರಲ್ಲಿ  ಆರೋಗ್ಯದ ಬಗ್ಗೆ ಜಾಗೃತಿ ಮೂಡುತ್ತದೆ ಎಂದು ಹೇಳಿದರು. ಶ್ರೀಮತಿ ಯಶೋಧ, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷರು ಇವರು ಮಾತನಾಡುತ್ತಾ ಮಹಿಳೆಯರು ಜಾಗೃತರಾದರೆ ಇಡೀ ಕುಟುಂಬದಲ್ಲಿ ಜಾಗೃತಿಯನ್ನು ಮೂಡಿಸುತ್ತಾರೆ. ಮಹಿಳೆಯರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಅತಿ ಅವಶ್ಯಕ ಇಂತಹ ಕಾರ್ಯಕ್ರಮಗಳನ್ನು ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ಮಾಡುತ್ತಾ ಬರುತ್ತಿದೆ ಎಂದು ಶ್ಲಾಘಿಸಿದರು. ಶ್ರೀಮತಿ ಶಹಾನಾಜ್, ಜಮಾತೆ ಇಸ್ಲಾಂ ಮಹಿಳಾ ಘಟಕದ ಪದಾಧಿಕಾರಿಗಳು ಮಾತನಾಡುತ್ತಾ ಈ ಪವಿತ್ರ ರಂಜಾನ್ ತಿಂಗಳಲ್ಲಿ ಮಹಿಳಾ ಸಶಕ್ತಿ ಅಥವಾ ಮಹಿಳಾ ಆರೋಗ್ಯ ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ವಿಷಯ ಎಂದು ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.


   ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ಮುಖ್ಯ ರೂವಾರಿಗಳಾದ ಡಾಕ್ಟರ್ ಶ್ರೀಲತಾ ಕಾಮತ್ ಇವರು ಪ್ರಾಸ್ತಾವಿಕ ನುಡಿಗಳನ್ನು ಸಲ್ಲಿಸಿ ಕ್ಯಾನ್ಸರ್ ರೋಗದ ಅರಿವಿನ ಪ್ರಾಮುಖ್ಯತೆಯನ್ನು ತಿಳಿಸಿದರು. ಡಾಕ್ಟರ್ ಪ್ರಿಯ ಬಾಲ್ಕಿ ಇವರು ವಿವಿಧ ಪ್ರಕಾರದ ಕ್ಯಾನ್ಸರ್ ರೋಗಗಳ ಹಾಗೂ ರೋಗ ಲಕ್ಷಣಗಳ  ಬಗ್ಗೆ ತಿಳಿಸಿದರು. ಡಾ. ಶಿಲ್ಪ ನಾಗಲಾಪುರ ಇವರು ಸ್ತನ ಕ್ಯಾನ್ಸರ್ ಬಗ್ಗೆ ಮಹಿಳೆಯರಿಗೆ ವಿಶೇಷವಾಗಿ ಜಾಗೃತಿ ಮೂಡಿಸಿದರು. ಈ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ಲಾಭ ಪಡೆದುಕೊಂಡರು.


 ಈ ಯಶಸ್ವಿ ಕಾರ್ಯಕ್ರಮದಲ್ಲಿ  ಬಿ. ಕೆ. ಶಾರದಾ ಅಕ್ಕನವರು, ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಹಸಂಚಾಲಕರು. ಶ್ರೀಮತಿ ಈರಮ್ಮ, ಸ್ತ್ರೀಶಕ್ತಿ ಒಕ್ಕೂಟದ ಜಿಲ್ಲಾಧ್ಯಕ್ಷರು, ಶ್ರೀಮತಿ ಮೀನಾಕ್ಷಿ ತಂದೆ ಮುನಿಯಪ್ಪ ಮುದ್ದಪ್ಪ ಹಾಗೂ ಅನೇಕ ಮಹಿಳಾ ಮುಖ್ಯಸ್ಥರು ಭಾಗವಹಿಸಿದ್ದರು

Comments

Popular posts from this blog